More

    ಚಿಕ್ಕಮಗಳೂರು: ಎಷ್ಟೇ ಪ್ರಯತ್ನಿಸಿದ್ರೂ ಹನಿಟ್ರ್ಯಾಪ್​ಗೆ ಬೀಳದ ಕಾಡಾನೆಯನ್ನು ಅರಣ್ಯಾಧಿಕಾರಿಗಳು ಖೆಡ್ಡಾಗೆ ಕೆಡವಿದ್ಹೇಗೆ?

    ಜಯಪುರ: ಮೇಗುಂದಾ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೂರ್ನಾಲ್ಕು ತಿಂಗಳಿನಿಂದ ದಾಂಧಲೆ ನಡೆಸಿದ್ದ ಕಾಡಾನೆ ಹಾವೇರಿ ಟಸ್ಕರ್​ ಅರಣ್ಯ ಇಲಾಖೆಯ ಕೆಡ್ಡಾಗೆ ಗುರುವಾರ ಬಿದ್ದಿದೆ.

    ಹೋಬಳಿಯ ಅಲ್ಲಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆ ಹಾವೇರಿ ಟಸ್ಕರ್​ ಒಂದು ತಿಂಗಳಿನಿಂದ ಹೇರೂರು ಸಮೀಪದ ಎಲೆಮಡಿಲು ಬಾಲನೂರ್​ ಟೀ ಪ್ಲಾಂಟೇಷನ್​ನಲ್ಲಿ ಸೇರಿಕೊಂಡು ಸುತ್ತಮುತ್ತಲಿನ ಎಸ್ಟೇಟ್​ಗಳು ಹಾಗೂ ತೋಟಗಳಿಗೆ ನುಗ್ಗಿ ಅಡಕೆ, ತೆಂಗು, ಬಾಳೆ ಇನ್ನಿತರ ಬೆಳೆಗಳನ್ನು ತಿಂದು, ತುಳಿದು ಹಾಳು ಮಾಡುತ್ತಿತ್ತು.

    ಚಿಕ್ಕಮಗಳೂರು: ಎಷ್ಟೇ ಪ್ರಯತ್ನಿಸಿದ್ರೂ ಹನಿಟ್ರ್ಯಾಪ್​ಗೆ ಬೀಳದ ಕಾಡಾನೆಯನ್ನು ಅರಣ್ಯಾಧಿಕಾರಿಗಳು ಖೆಡ್ಡಾಗೆ ಕೆಡವಿದ್ಹೇಗೆ?

    ಕಾಡಾನೆಯ ಹಾವಳಿಯಿಂದ ಬೇಸತ್ತ ಜನ ಆನೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಹಾಗೂ ಸರ್ಕಾರದ ಮೇಲೆ ಒತ್ತಡ ತಂದಿದ್ದರು. ಅದರಂತೆ ಆ.15ರಂದು ಹಾವೇರಿ ಟಸ್ಕರ್​ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಶುರುವಾಗಿತ್ತು. ಸಕ್ಕರೆ ಬೈಲಿನ ಆನೆ ಬಿಡಾರದಿಂದ 5 ಸಾಕಾನೆಗಳನ್ನು ಕರೆಸಿ ಭಾನುಮತಿ ಎಂಬ ಹೆಣ್ಣಾನೆ ಮೂಲಕ ಹನಿಟ್ರಾಪ್​ ಮಾಡಿ, ಬಾಬಣ್ಣ, ಸೋಮಣ್ಣ, ಬಹದ್ದೂರ್​ ಹಾಗೂ ಸಾಗರ್​ ಎಂಬ ಗಂಡಾನೆಗಳ ಮೂಲಕ ಸೆರೆಹಿಡಿಯಲು ಯೋಜಿಸಲಾಯಿತು.

    ಡಿಎಫ್​ಒ ನೀಲೇಶ್​ ಶಿಂಧೆ ಹಾಗೂ ಎಸಿಎಫ್​ ಮಂಜುನಾಥ್​, ಆರ್​ಎಫ್​ಒ ಪ್ರವಿಣ್​ಕುಮಾರ್​, 11 ಮಾವುತರು ಹಾಗೂ ಇಬ್ಬರು ಪಶು ವೈದ್ಯರು, 5 ಸಾಕಾನೆಗಳು, ಡಿಆರ್​ಎಫ್​ಒ, ಅರಣ್ಯ ರಕ್ಷಕರು, ವಾಚರ್​ಗಳು ಒಳಗೊಂಡ 30ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿ ತಂಡ ಕಾಡಾನೆ ಹಿಡಿಯಲು ದಿನವಡೀ ಪ್ರಯತ್ನ ಪಟ್ಟ ಕಾರಣ ಚಾಣಾಕ್ಷ ಹಾವೇರಿ ಟಸ್ಕರ್​ ಸೆರೆಯಾಗಿದೆ.

    ಕಾರ್ಯಾಚರಣೆ ಪ್ರಾರಂಭದ ಭಾನುವಾರ ಟೀ ಎಸ್ಟೇಟಿನ ಮುತ್ತು ಮಾರಿಯಮ್ಮ ದೇವಾಲಯದ ಬಳಿ ಹೆಣ್ಣಾನೆ ಭಾನುಮತಿಯನ್ನು ಬಿಟ್ಟು ಕಾಡಾನೆ ಸೆರೆಗೆ ಯೋಜನೆ ಮಾಡಲಾಗಿತ್ತು. ರಾತ್ರಿ ಅಲ್ಲಿಗೆ ಬಂದ ಹಾವೇರಿ ಟಸ್ಕರ್​ ಮುಂಜಾನೆ 7.30ರ ವರೆಗೆ ಭಾನುಮತಿಯೊಂದಿಗೆ ಕಾಲ ಕಳೆದಿತ್ತು. ಸಮೀಪದಲ್ಲಿದ್ದ ಕೂಲಿ ಲೈನ್​ನಿಂದ ಟೀ ಎಸ್ಟೇಟಿನ ಕೆಲಸಕ್ಕೆ ಹೊರಟ ಕಾರ್ಮಿಕರು ಕೂಗಿಕೊಂಡ ಕಾರಣ ಕಾಡಾನೆ ಅಲ್ಲಿಂದ ಕಾಲ್ಕಿತ್ತಿತು.

    ಚಿಕ್ಕಮಗಳೂರು: ಎಷ್ಟೇ ಪ್ರಯತ್ನಿಸಿದ್ರೂ ಹನಿಟ್ರ್ಯಾಪ್​ಗೆ ಬೀಳದ ಕಾಡಾನೆಯನ್ನು ಅರಣ್ಯಾಧಿಕಾರಿಗಳು ಖೆಡ್ಡಾಗೆ ಕೆಡವಿದ್ಹೇಗೆ?

    ಸೋಮವಾರ ರಾತ್ರಿ ಮತ್ತೆ ಭಾನುಮತಿಯನ್ನು ದೇವಸ್ಥಾನದ ಬಳಿ ಇರಿಸಲಾಯಿತಾದರೂ ಅನುಮಾನಗೊಂಡ ಕಾಡಾನೆ ಹಾವೇರಿ ಟಸ್ಕರ್​ ಭಾನುಮತಿ ಬಳಿ ಬಾರದೆ ದೂರದಿಂದಲೇ ಗಮನಿಸಿ ವಾಪಸ್​ ತೆರಳಿತ್ತು. ನಂತರ ಜಾಗ ಬದಲಿಸಿ ಅದೇ ಎಸ್ಟೇಟಿನ ಕಾಫಿ ಬ್ಲಾಕಿನ ಫೈರ್​ ರೋಡ್​ ಜಂಕ್ಷನ್​ ಬಳಿ ಮಂಗಳವಾರ ಹಾಗೂ ಬುಧವಾರ ಭಾನುಮತಿಯನ್ನು ಬಿಡಲಾಗಿತ್ತು. ಗುರುವಾರ ಮತ್ತೆ ಜಾಗ ಬದಲಿಸಿದ ಅರಣ್ಯ ಇಲಾಖೆ ಕಮಾನು ಮೋರಿ ಬಳಿಯ ಚಿಕ್ಕಮಗಳೂರು ಮತ್ತು ಶೃಂಗೇರಿ ರಾಜ್ಯ ಹೆದ್ದಾರಿಗೆ ಸಮೀಪದ ಬಿಟಿಎಫ್​ ಎಸ್ಟೇಟಿನ ಡ್ಯಾಂ ಬಳಿ ಹಾವೇರಿ ಟಸ್ಕರ್​ ಸೆರೆಗೆ ಯೋಜನೆ ರೂಪಿಸಲಾಯಿತು. ಅನುಮಾನಗೊಂಡ ಕಾಡಾನೆ ಅಲ್ಲಿಗೆ ಬರದೆ ಅರಣ್ಯ ಇಲಾಖೆಯ ಹನಿಟ್ರಾಪ್​ ಅನ್ನು ವಿಫಲಗೊಳಿಸಿತ್ತು.

    ಕಾಡಾನೆ ಸೆರೆಗೆ ಒತ್ತಡ ಹೆಚ್ಚಾದ ಕಾರಣ ಕಾಡಾನೆ ಸೆರೆ ಹಿಡಿಯಲೇಬೇಕು ಎಂದು ಪಣತೊಟ್ಟ ತಂಡ ಬಿಟಿಎಫ್​ ಕಾಫಿ ಬ್ಲಾಕಿನಲ್ಲಿದ್ದ ಹಾವೇರಿ ಟಸ್ಕರ್​ ಅನ್ನು ಜಿಪಿಎಸ್​ ಟ್ರಾಕರ್​ನಲ್ಲಿ ಗುರುತಿಸಿತು. ಸ್ಥಳಕ್ಕೆ ತೆರಳಿದ ನಾಗರಹೊಳೆ ಅಭಯಾರಣ್ಯದ ಪಶು ವೈದ್ಯ ಡಾ. ರಮೇಶ್​ ಡಾರ್ಟ್​ ಗನ್​ ಮೂಲಕ ಅರಿವಳಿಕೆಯನ್ನು ಗುರುವಾರ ಮಧ್ಯಾಹ್ನ 3 ಗಂಟೆಗೆ ಹೊಡೆದರು. ಅರಿವಳಿಕೆ ಚುಚ್ಚಿದ ಕೂಡಲೆ ಗಾಬರಿಗೊಂಡು ಕಾಲ್ಕಿತ್ತ ಹಾವೇರಿ ಟಸ್ಕರ್​ ಸುಮಾರು 1 ಕಿಲೋ ಮೀಟರ್​ ದೂರ ಸಾಗಿ ಎಲೆಮಡಿಲು ಗ್ರಾಮದ ನಿಡುವಾನೆ ಭಾಸ್ಕರ ಗೌಡ ಎಂಬುವವರ ಕಾಫಿ ತೋಟದಲ್ಲಿ ನಿತ್ರಾಣಗೊಂಡು ಬಿದ್ದಿತು. ನಂತರ ಸಾಕಾನೆಗಳ ಮೂಲಕ ಎತ್ತಿ ಲಾರಿಯಲ್ಲಿ ಸಾಗಿಸಲಾಯಿತು.

    ಚಿಕ್ಕಮಗಳೂರು: ಎಷ್ಟೇ ಪ್ರಯತ್ನಿಸಿದ್ರೂ ಹನಿಟ್ರ್ಯಾಪ್​ಗೆ ಬೀಳದ ಕಾಡಾನೆಯನ್ನು ಅರಣ್ಯಾಧಿಕಾರಿಗಳು ಖೆಡ್ಡಾಗೆ ಕೆಡವಿದ್ಹೇಗೆ?

    ಒಂದು ಎಕರೆ ಕಾಫಿ ತೋಟ ನಾಶ
    ಹಾವೇರಿ ಟಸ್ಕರ್​ಗೆ ಅರಿವಳಿಕೆ ಚುಚ್ಚುಮದ್ದು ನೀಡಿದ್ದರಿಂದ ನಿಡುವಾನೆ ಭಾಸ್ಕರ್​ ಅವರ ಕಾಫಿ ತೋಟದಲ್ಲಿ ಬಿದ್ದಿತು. ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ 5 ಆನೆಗಳು ಓಡಾಡಿದ ಪರಿಣಾಮ ಒಂದು ಎಕರೆಗೂ ಹೆಚ್ಚು ಫಸಲಿನಿಂದ ತುಂಬಿದ ಕಾಫಿ ತೋಟ ಹಾಳಾಗಿದೆ. ಕಾಫಿ, ಸಿಲ್ವರ್​ ಹಾಗೂ ಕಾಳುಮೆಣಸು ಸಂಪೂರ್ಣ ನಾಶವಾಗಿದೆ.
    ಕಾಡಾನೆಯನ್ನು ಕೊಳ್ಳೆಗಾಲದ ಅಭಯಾರಣ್ಯಕ್ಕೆ ಬಿಡಲಾಗುತ್ತದೆ. ಕಾರ್ಯಾಚರಣೆಯಿಂದ ಹಾನಿಯಾಗಿರುವ ರೈತರಿಗೆ ತುರ್ತು ಪರಿಹಾರವಾಗಿ 25 ಸಾವಿರ ರೂ.ವನ್ನು ಡಿಎಫ್​ಒ ಘೋಷಿಸಿದ್ದು, ಉಳಿದಂತೆ ಪೂರ್ಣಹಾನಿಯ ಮಹಜರು ನಡೆಸಿ ಪರಿಹಾರ ನೀಡುತ್ತೇವೆ.
    | ಮಂಜನಾಥ್​, ಎಸಿಎಫ್​

    ಆ ಒಂದು ಕೆಟ್ಟ ಬೈಗುಳ: 5 ವರ್ಷದ ಬಳಿಕ ವಿಜಯ್​ ದೇವರಕೊಂಡ ವಿರುದ್ಧ ಸೇಡು ತೀರಿಸಿಕೊಂಡ ಅನಸೂಯ!

    ಲಾಡ್ಜ್​ಗೆ​ ಕರೆಸಿಕೊಂಡು ಯುವಕನ ಬಳಿ ಸುಲಿಗೆ: ಬಂಧಿತ ಲೇಡಿಯ ಮೊಬೈಲ್​ನಲ್ಲಿದ್ದ ಸ್ಫೋಟಕ ರಹಸ್ಯ ಬಯಲು!

    ಸಹಾಯಕ ಕೃಷಿ ನಿರ್ದೇಶಕಿಯ ದರ್ಪಕ್ಕೆ ಅಧಿಕಾರಿಗಳು, ಸಿಬ್ಬಂದಿ ‌ಸುಸ್ತೋ ಸುಸ್ತು! ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts