More

    U19 World Cup Final: ಇಂಗ್ಲೆಂಡ್​ ವಿರುದ್ಧ ರೋಚಕ ಗೆಲುವು: 5ನೇ ಬಾರಿಗೆ ವಿಶ್ವಕಪ್​ ಟ್ರೋಫಿಗೆ ಮುತ್ತಿಟ್ಟ ಭಾರತ

    ಆಂಟಿಗುವಾ: ಬೌಲಿಂಗ್​ ಹಾಗೂ ಬ್ಯಾಟಿಂಗ್​ ವಿಭಾಗದಲ್ಲಿ ಸಮತೋಲಿತ ಪ್ರದರ್ಶನ ನೀಡಿದ ಟೀಮ್​ ಇಂಡಿಯಾ ಅಂಡರ್​ 19 ವಿಶ್ವಕಪ್​ ಟೂರ್ನಿಯ ಫೈನಲ್​ನಲ್ಲಿ ಬಲಿಷ್ಠ ಇಂಗ್ಲೆಂಡ್​ ತಂಡದ ವಿರುದ್ಧ ರೋಚಕಗೆಲುವು ದಾಖಲಿಸುವ ಮೂಲಕ ವಿಶ್ವಕಪ್​ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಈ ಮೂಲಕ ಐದನೇ ಬಾರಿಗೆ ವಿಶ್ವಕಪ್​ ಟ್ರೋಫಿ ಗೆಲ್ಲುವ ಮೂಲಕ ಭಾರತ ದಾಖಲೆ ಬರೆದಿದೆ.

    ಆಂಟಿಗುವಾದ ನಾರ್ತ್ ಸೌಂಡ್​ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಶನಿವಾರ (ಫೆ. 05) ನಡೆದ ಮಹತ್ವದ ಫೈನಲ್​ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದ ಇಂಗ್ಲೆಂಡ್​ ನಿಗದಿತ 50 ಓವರ್​ಗಳಲ್ಲಿ 189 ರನ್​ಗಳ ಸಾಧಾರಣ ಮೊತ್ತಕ್ಕೆ ಸರ್ವಪತನ ಕಂಡಿತು.

    ಇಂಗ್ಲೆಂಡ್ ಪರ​ ಜೇಮ್ಸ್​ ರೆವ್​ (95), ಜೇಮ್ಸ್​ ಸೇಲ್ಸ್​ (34*) ಮತ್ತು ಜಾರ್ಜ್​ ಥಾಮಸ್​ (27) ಹೊರತುಪಡಿಸಿದರೆ, ಉಳಿದ ಯಾವ ಆಟಗಾರನು ಉತ್ತಮ ನಿರ್ವಹಣೆ ತೋರಲಿಲ್ಲ. ಇದರಿಂದಾಗಿ ಆಂಗ್ಲರ ಪಡೆ ಸಾಧಾರಣ ಮೊತ್ತ ದಾಖಲಿಸಿತು.

    ಭಾರತದ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಲು ಆಂಗ್ಲರ ಪಡೆ ಸಂಪೂರ್ಣ ವಿಫಲವಾಯಿತು. 9.5 ಓವರ್​ ಎಸೆದ ರಾಜಾ ಬಾವಾ 1 ಮೇಡನ್​ನೊಂದಿಗೆ ಕೇವಲ 31 ರನ್​ ನೀಡಿ 5 ವಿಕೆಟ್​ ಕಬಳಿಸಿದರೆ, 9 ಓವರ್​ ಎಸೆದ ರವಿಕುಮಾರ್​ 1 ಮೇಡನ್​ನೊಂದಿಗೆ ಕೇವಲ 34 ರನ್​ ನೀಡಿ 4 ವಿಕೆಟ್​ ಕಬಳಿಸುವ ಮೂಲಕ ಟೀಮ್​ ಇಂಡಿಯಾ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಉಳಿದಂತೆ ಕೌಶಲ್​ ಥಾಂಬೆ 1 ವಿಕೆಟ್​ ಪಡೆದರು.

    ಇಂಗ್ಲೆಂಡ್​ ನೀಡಿದ 190 ರನ್​ಗಳ ಗುರಿ ಬೆನ್ನತ್ತಿದ ಭಾರತ 47.4 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 195 ರನ್​ ಕಲೆಹಾಕುವ ಮೂಲಕ ಅಮೋಘ ಗೆಲುವು ದಾಖಲಿಸಿತು.

    ಆಂಗ್ಕ್ರಿಶ್ ರಘುವಂಶಿ ಎರಡನೇ ಎಸೆತದಲ್ಲೇ ಶೂನ್ಯಕ್ಕೆ ವಿಕೆಟ್​ ಒಪ್ಪಿಸುವ ಮೂಲಕ ಆರಂಭದಲ್ಲೇ ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ನೀಡಿದರು. ಹರ್ನೂರ್​ ಸಿಂಗ್​ (21) ಮತ್ತು ನಾಯಕ ಯಶ್​ ಧುಲ್​ (17) ಬೇಗ ವಿಕೆಟ್​ ಒಪ್ಪಿಸುವ ಮೂಲಕ ತಂಡವನ್ನು ಮತ್ತಷ್ಟು ಆತಂಕಕ್ಕೆ ದೂಡಿದರು. ಆದರೆ, ಮೂರನೇ ಕ್ರಮಾಂಕದಲ್ಲಿ ಬಂದು ಉಪನಾಯಕನ ಜವಬ್ದಾರಿಯುತ ಆಟವಾಡಿದ ಶೇಕ್​ ರಶೀದ್​ (50) ಅರ್ಧ ಶತಕ ಗಳಿಸಿ ತಂಡಕ್ಕೆ ಆಸರೆಯಾದರು.

    ಮಧ್ಯಮ ಕ್ರಮಾಂಕದಲ್ಲಿ ಬಂದ ನಿಶಾಂತ್​ ಸಂಧು ಅಜೇಯ 50 ರನ್​ಗಳ ಅರ್ಧಶತಕದೊಂದಿಗೆ ಅಪತ್ಭಾಂದವ ಆಟದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಬೌಲಿಂಗ್​ ಮಾತ್ರವಲ್ಲದೆ ಬ್ಯಾಟಿಂಗ್​ನಲ್ಲೂ ಅದ್ಭುತ ಪ್ರದರ್ಶನ ತೋರಿದ ರಾಜಾ ಬಾವ 35 ರನ್​ ಗಳಿಸಿ, ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಉಳಿದಂತೆ ಕೌಶಲ್​ ಥಾಂಬೆ (1) ಮತ್ತು ದಿನೇಶ್​ ಭಟ್​ (13*) ರನ್​ ಗಳಿಸಿದರು.

    ಇಂಗ್ಲೆಂಡ್​ ಪರ ಜೋಶುವಾ ಬೊಯ್ಡನ್​, ಜೇಮ್ಸ್​ ಸೇಲ್ಸ್​ ಮತ್ತು ಥಾಮಸ್​ ಆಸ್ಪಿನ್​ವಾಲ್​ ತಲಾ ಎರೆಡು ವಿಕೆಟ್​ ಪಡೆದರು. (ಏಜೆನ್ಸೀಸ್​)

    ಭಾರಿ ಕೋಲಾಹಲ ಸೃಷ್ಟಿಸಿರುವ ಹಿಜಾಬ್‌ ವಿವಾದಕ್ಕೆ ರಾಜ್ಯ ಸರ್ಕಾರದಿಂದ ತೆರೆ: ಹೊರಟಿತು ಈ ಸುತ್ತೋಲೆ

    ರಾಹುಲ್ ಗಾಂಧಿಗೆ ಹೆಣ್ಣು ಮಕ್ಕಳ ಬಗ್ಗೆ ಗೊತ್ತಿದ್ದರೆ ಯಾವಾಗಲೋ ಮದ್ವೆ ಆಗಿಬಿಡ್ತಿದ್ರು: ಎ.ನಾರಾಯಣಸ್ವಾಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts