More

    2ನೇ ದಿನವೂ ಫರ್ನೀಚರ್ ಎಕ್ಸ್​ಪೋಗೆ ಹರಿದುಬರುತ್ತಿರುವ ಜನ ಸಾಗರ: ಗುಣಮಟ್ಟದ ಪೀಠೋಪಕರಣ ಕಂಡು ಭರ್ಜರಿ ಶಾಪಿಂಗ್​

    ಬೆಂಗಳೂರು: ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಶುಕ್ರವಾರದಿಂದ ಆರಂಭವಾಗಿರುವ “ಫರ್ನೀಚರ್ ಆ್ಯಂಡ್​ ಹೋಮ್​ ಇಂಟೀರಿಯರ್​ ಎಕ್ಸ್​ಪೋ-2022”ಗೆ ಉತ್ತಮ ಜನ ಸ್ಪಂದನೆ ವ್ಯಕ್ತವಾಗುತ್ತಿದೆ.

    ದಿಗ್ವಿಜಯ ನ್ಯೂಸ್​ ಚಾನಲ್​ ಮತ್ತು ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಮತ್ತು ಯುನಿಲೆಟ್​ ಸಹಭಾಗಿತ್ವದಲ್ಲಿ ಆಯೋಜಿಸಿರುವ ಫರ್ನಿಚರ್ ಆ್ಯಂಡ್​ ಹೋಮ್​ ಇಂಟೀರಿಯರ್​ ಎಕ್ಸ್​ಪೋ ಮಾ.4ರಿಂದ ಮಾ.7ರ ವರೆಗೆ ನಡೆಯಲಿದೆ. ಮೊದಲ ದಿನದ ಭರ್ಜರಿ ಜನ ಸ್ಪಂದನೆಯ ಬಳಿಕ ಎರಡನೇ ದಿನವೂ ಎಕ್ಸ್ ಪೋಗೆ ಜನ ಸಾಗರ ಹರಿದು ಬರುತ್ತಿದೆ. ಬೆಳಗ್ಗೆಯಿಂದಲೂ ಸಾಕಷ್ಟು ಜನರು ಎಕ್ಸ್ ಪೋಗೆ ಆಗಮಿಸುತ್ತಿದ್ದು, ಬಗೆ ಬಗೆಯ ಗುಣಮಟ್ಟದ ಪರಿಕರಗಳನ್ನು ಕಂಡು ಖುಷಿಯಾಗಿದ್ದಾರೆ ಮತ್ತು ತಮ್ಮಿಷ್ಟದ ವಸ್ತುಗಳನ್ನು ಖರೀದಿಸಿ ಮನೆಗೆ ಕೊಂಡೊಯ್ಯುತ್ತಿದ್ದಾರೆ.

    ಒಂದೇ ಸೂರಿನಡಿ ಇಟಾಲಿಯನ್​ ಡಿಸೈನರ್​ ಸೋಫಾಗಳು, ಕಚೇರಿಗೆ ಬೇಕಾದ ಪೀಠೋಪಕರಣಗಳು, ಕಾರ್ಪೆಟ್​ಗಳು, ಬೆಡ್​ರೂಮ್​ ಸೆಟ್​ಗಳು, ವಾಲ್​ಫ್ರೇಮ್​ಗಳು, ಮಸಾಜ್​ ಚೇರ್ಗಳು, ಮ್ಯಾಟ್ರೆಸೆಸ್​ (ಹಾಸಿಗೆ), ಆರಾಮದಾಯಕ ಸೋಫಾಗಳು, ಡೈನಿಂಗ್​ ಸೆಟ್​ಗಳು, ಗಾರ್ಡನ್​ ಪೀಠೋಪಕರಣಗಳು, ಆರ್ಟಿಫಿಷಿಯಲ್​ ಹೂವುಗಳು, ಡೆಕೋರೇಟಿವ್​ ವಸ್ತುಗಳು, ಟೀಕ್​ವುಡ್​ ಪೀಠೋಪಕರಣಗಳು, ಫ್ರಿಡ್ಜ್, ವಾಷಿಂಗ್​ ಮಷಿನ್​, ಟಿವಿ, ಎಸಿ ಸೇರಿ ಹಕವು ಎಲೆಕ್ಟ್ರಾನಿಕ್ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಇದೆ. ಉತ್ತಮ ಗುಣಮಟ್ಟದ ಫರ್ನೀಚರ್​ಗಳು ಮತ್ತು ಒಳಾಂಗಣ ವಿನ್ಯಾಸದ ಪರಿಕರಗಳು ಒಂದೇ ವೇದಿಕೆಯಲ್ಲಿ ಲಭ್ಯವಿರುವುದನ್ನ ಕಂಡು ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

    2ನೇ ದಿನವೂ ಫರ್ನೀಚರ್ ಎಕ್ಸ್​ಪೋಗೆ ಹರಿದುಬರುತ್ತಿರುವ ಜನ ಸಾಗರ: ಗುಣಮಟ್ಟದ ಪೀಠೋಪಕರಣ ಕಂಡು ಭರ್ಜರಿ ಶಾಪಿಂಗ್​

    ಎಲ್ಲೂ ಸಿಗದಂತಹ ಉತ್ತಮ ಗುಣಮಟ್ಟದ ಫರ್ನೀಚರ್​ಗಳು
    ಫರ್ನಿಚರ್​ಗಳು ಮತ್ತು ಮನೆಯ ಒಳಾಂಗಣಕ್ಕೆ ಅಳವಡಿಕೆ ಮಾಡುವ ಉಪಕರಣಗಳು ನಮ್ಮ ದೈನಂದಿನ ಅಗತ್ಯ ಪರಿಕರಗಳಾಗಿವೆ. ಇವುಗಳನ್ನು ಆಯ್ಕೆ ಮಾಡುವಾಗ ಗುಣಮಟ್ಟ, ಬಣ್ಣ, ಶೈಲಿ, ವಿನ್ಯಾಸದ ಹಾಗೂ ಉತ್ತಮ ಬೆಲೆಯನ್ನು ನಾವು ಗಮನಿಸಬೇಕಾಗುತ್ತದೆ. ಒಂದು ಮಳಿಗೆಯಲ್ಲಿ ಹೋಗಿ ಫರ್ನೀಚರ್​ ಖರೀದಿಗೆ ಮುಂದಾದಲ್ಲಿ ಅವರು ಹೇಳಿದ ಬೆಲೆಯಷ್ಟೇ ಹಣವನ್ನು ಪಾವತಿಸಬೇಕಾಗುತ್ತದೆ. ಎಷ್ಟೇ ಚೌಕಾಸಿ ಮಾಡಿದರೂ ನಮ್ಮ ನಿರೀಕ್ಷೆಯಷ್ಟು ಬೆಲೆಗಳಿಗೆ ಗುಣಮಟ್ಟದ ಗೃಹೋಪಯೋಗಿ ವಸ್ತುಗಳು ಸಿಗುವುದಿಲ್ಲ. ಆದರೆ, ಈಗ ಈಗ ನಡೆಯುತ್ತಿರುವ ಎಕ್ಸ್​ಪೋದಲ್ಲಿ ನಾವು ಹತ್ತಾರು ಮಳಿಗೆಗಳನ್ನು ಸುತ್ತಾಡಿದರೂ ಸಿಗದಂತಹ ಉತ್ತಮ ಗುಣಮಟ್ಟದ ಫರ್ನೀಚರ್​ಗಳು ಮತ್ತು ಒಳಾಂಗಣ ವಿನ್ಯಾಸದ ಪರಿಕರಗಳು ಒಂದೇ ವೇದಿಕೆಯಲ್ಲಿ ಸಿಗುತ್ತಿವೆ. ಒಂದು ಎಕ್ಸ್​ಪೋದಲ್ಲಿ ಒಟ್ಟು 74 ಮಳಿಗೆಗಳನ್ನು ತೆರೆಯಲಾಗುತ್ತಿದ್ದು, ನಮಗಿಷ್ಟವಾದ ಪೀಠೋಪಕರಣ ಆಯ್ಕೆಗೆ ಅವಕಾಶ ಸಿಕ್ಕಿದೆ.

    2ನೇ ದಿನವೂ ಫರ್ನೀಚರ್ ಎಕ್ಸ್​ಪೋಗೆ ಹರಿದುಬರುತ್ತಿರುವ ಜನ ಸಾಗರ: ಗುಣಮಟ್ಟದ ಪೀಠೋಪಕರಣ ಕಂಡು ಭರ್ಜರಿ ಶಾಪಿಂಗ್​

    ಎಕ್ಸ್​ಪೋ ಬರುವ ಜನರಿಗೆ ಉಚಿತ ಪ್ರವೇಶ ಮತ್ತು ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts