ನವದೆಹಲಿ: ಕೇವಲ ಒಂದೇ ವಾರದಲ್ಲಿ 6ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಆಯಿಲ್ ಕಂಪನಿಗಳು ಗ್ರಾಹಕರಿಗೆ ಬ್ಯಾಕ್ ಟು ಬ್ಯಾಕ್ ಶಾಕ್ ನೀಡುತ್ತಿವೆ. ಇಂದು (ಮಾ.28) ಪೆಟ್ರೋಲ್ ಬೆಲೆಯಲ್ಲಿ 30 ಮತ್ತು ಡೀಸೆಲ್ ಬೆಲೆಯಲ್ಲಿ 35 ಪೈಸೆಯಷ್ಟು ಏರಿಕೆಯಾಗಿದೆ.
ಮಾರ್ಚ್ 22 ರಿಂದ ಆರಂಭವಾದ ಇಂಧನ ದರ ಏರಿಕೆಗೆ ಮಾ. 24 ಒಂದು ದಿನ ಮಾತ್ರ ವಿರಾಮ ನೀಡಲಾಗಿತ್ತು. ಇದೀಗ ಪ್ರತಿದಿನ ಬೆಲೆ ಏರಿಕೆ ಮಾಡಲಾಗುತ್ತಿದೆ. ಇಂದು ಕೂಡ ಬೆಲೆ ಏರಿಕೆಯಾಗಿದೆ. ನಾಳೆಯು ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ. ಒಂದೆಡೆ ಯೂಕ್ರೇನ್-ರಷ್ಯಾ ಯುದ್ಧದಿಂದ ಖಾದ್ಯ ತೈಲ ಮತ್ತು ಗೋಧಿ ಸೇರಿದಂತೆ ಕೆಲವೊಂದು ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಇದೀಗ ಇಂಧನ ದರ ಮತ್ತೊಮ್ಮೆ ಏರಿಕೆಯಾಗಿರುವುದು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಇನ್ನಷ್ಟು ತಟ್ಟಲಿದೆ. ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಕಳೆದ 7 ದಿನಗಳಲ್ಲಿ 4 ರೂಪಾಯಿಯಷ್ಟು ಇಂಧನ ದರ ಏರಿಕೆಯಾಗಿದೆ.
ಇಂದು ಬೆಳಗ್ಗೆ 6 ಗಂಟೆಯಿಂದಲೇ ದರ ಏರಿಕೆ ಪರಿಷ್ಕರಣೆಯಾಗಿದ್ದು, ಇಂದಿನ ಇಂಧನ ದರ ಈ ಕೆಳಕಂಡಂತಿದೆ
ಬೆಂಗಳೂರು
ಪೆಟ್ರೋಲ್: ಪ್ರತಿ ಲೀಟರ್ಗೆ 104.73 ರೂಪಾಯಿ
ಡೀಸೆಲ್: ಪ್ರತಿ ಲೀಟರ್ಗೆ 85.04 ರೂಪಾಯಿ
ದೆಹಲಿ
ಪೆಟ್ರೋಲ್: 99.41 ರೂಪಾಯಿ
ಡೀಸೆಲ್: 90.77
ಮುಂಬೈ
ಪೆಟ್ರೋಲ್: 114.18 ರೂ.
ಡೀಸೆಲ್: 98.48
ಚೆನ್ನೈ
ಪೆಟ್ರೋಲ್: 104.90 ರೂ.
ಡೀಸೆಲ್: 95.00
ಕೊಲ್ಕತ
ಪೆಟ್ರೋಲ್: 108.83 ರೂ.
ಡೀಸೆಲ್: 93.92
ಹೈದರಾಬಾದ್
ಪೆಟ್ರೋಲ್: 112.36 ರೂ.
ಡೀಸೆಲ್: 99 ರೂ.
ಬರೋಬ್ಬರಿ 137 ದಿನಗಳವರೆಗೆ ತಟಸ್ಥವಾಗಿದ್ದ ಇಂಧನ ದರ ಇದೀಗ ಏರುಗತಿಯಲ್ಲಿದೆ. ಒಂದು ವಾರದಲ್ಲಿ 6ನೇ ಬಾರಿ ಏರಿಕೆಯಾಗಿದೆ. ಪಂಚ ರಾಜ್ಯ ಚುನಾವಣೆ ಬೆನ್ನಲ್ಲೇ ಮತ್ತೆ ದರ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕವಾಗಿದೆ. ಭಾರತ ತನ್ನ ತೈಲ ಅಗತ್ಯದ ಸುಮಾರು 85% ನಷ್ಟು ಭಾಗವನ್ನು ಸಾಗರೋತ್ತರ ಮಾರುಕಟ್ಟೆಗಳಿಂದ ತರಿಸಿಕೊಳ್ಳುತ್ತಿದೆ.
ಸ್ಥಳೀಯ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಅಂತರಾಷ್ಟ್ರೀಯ ಬೆಲೆಗಳಿಗೆ ಸಂಬಂಧಿಸಿವೆ. ಇದು ಕಚ್ಚಾ ತೈಲ ಬೆಲೆಗಳ ಮೇಲೆ ನಿರ್ಧಾರವಾಗಿರುತ್ತದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಚ್ಛಾ ತೈಲದ ಬೆಲೆ ಏರಿಕೆಯಾಗಿದ್ದು, ಇದು ಜಾಗತಿಕ ತೈಲ ಬೆಲೆಗಳ ಮೇಲೆ ಗಣನೀಯ ಪ್ರಭಾವ ಬೀರಿದೆ. ಅಲ್ಲದೆ, ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ. (ಏಜೆನ್ಸೀಸ್)
ಬೇಕಿದ್ರೆ ನಿಮ್ಮ ರೆಕ್ಕೆಗಳನ್ನು ಕತ್ತರಿಸಿಕೊಳ್ಳಿ: ಹಿಜಾಬ್ ವಿವಾದದ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಭುವನ ಸುಂದರಿ!
ಕೋವಿಡ್ ಕಾಲರ್ ಟ್ಯೂನ್ ಕೇಳಿ ಕೇಳಿ ಸುಸ್ತಾಗಿರುವವರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್..!