More

    VIDEO| ಪ್ರಾಣಿಗಳು ಸಹ ಇದನ್ನು ತಿನ್ನುವುದಿಲ್ಲ: ಊಟದ ತಟ್ಟೆ ಹಿಡಿದು ರಸ್ತೆಯಲ್ಲೇ ಕಣ್ಣೀರಾಕಿದ ಕಾನ್ಸ್​ಟೇಬಲ್​

    ಫಿರೋಜಾಬಾದ್: ಪೊಲೀಸ್​​ ಮೆಸ್​ನಲ್ಲಿ ಉಣಬಡಿಸಿದ ಊಟದ ತಟ್ಟೆಯನ್ನು ಹಿಡಿದು ಸಾರ್ವಜನಿಕ ಪ್ರದೇಶದಲ್ಲಿ ಧಾರಾಕಾರ ಕಣ್ಣೀರು ಸುರಿಸುವ ಮೂಲಕ ಪೊಲೀಸ್​ ಕಾನ್ಸ್​ಟೇಬಲ್​ ಓರ್ವ ಜನರ ಗುಂಪು ಸೇರಿಸಿ ಹೈಡ್ರಾಮ ಮಾಡಿದ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್​ನಲ್ಲಿ ಬುಧವಾರ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ವಿಡಿಯೋದಲ್ಲಿ ಏನಿದೆ?
    ಅನ್ನ, ದಾಲ್​ ಮತ್ತು ರೋಟಿ ಇರುವ ಊಟದ ತಟ್ಟೆಯನ್ನು ಹಿಡಿದು ಕಾನ್ಸ್​ಟೇಬಲ್​ ಮನೋಜ್​ ಕುಮಾರ್​ ಎಂಬುವರು ರಸ್ತೆ ಮಧ್ಯೆ ನಿಂತು ಕಣ್ಣೀರಿಡುತ್ತಿದ್ದರೆ, ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ಅವರನ್ನು ಮತ್ತೆ ಪೊಲೀಸ್ ಠಾಣೆಗೆ ಕರೆದೊಯ್ಯುವ ಪ್ರಯತ್ನದಲ್ಲಿ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿದೆ. ಅಲ್ಲದೆ, ನಾನು ಅನೇಕ ಬಾರಿ ಊಟದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಿರುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.

    ಕೆಲಸದಿಂದ ತೆಗೆದು ಹಾಕುವುದಾಗಿ ನನಗೆ ಬೆದರಿಕೆ ಹಾಕುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಪೌಷ್ಠಿಕ ಆಹಾರಕ್ಕಾಗಿ ರಾಜ್ಯ ಸರ್ಕಾರ ಭತ್ಯೆ ನೀಡುವುದಾಗಿ ಮುಖ್ಯಮಂತ್ರಿಗಳು ಈ ಹಿಂದೆಯೇ ಘೋಷಿಸಿದ್ದರು. ಆದರೆ ದೀರ್ಘಾವಧಿ ಕರ್ತವ್ಯ ಮಾಡುವ ನಮಗೆ ಬಳುವಳಿಯಾಗಿ ಸಿಗುವುದು ಇದೇ ಎಂದು ಅಳಲು ತೋಡಿಕೊಂಡಿದ್ದಾರೆ.

    ಸರಿಯಾದ ಊಟ ನೀಡದಿದ್ದರೆ ಪೊಲೀಸ್​ ಸಿಬ್ಬಂದಿ ಹೇಗೆ ತಾನೇ ಸರಿಯಾಗಿ ಕೆಲಸ ಮಾಡಲು ಸಾಧ್ಯ? ಎಂದು ಮನೋಜ್​ ಪ್ರಶ್ನೆ ಮಾಡಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ತಟ್ಟೆ ಹಿಡಿದುಕೊಂಡು ಡಿವೈಡರ್​ ಮಧ್ಯದಲ್ಲಿ ಕುಳಿತಿರುವ ಮನೋಜ್​, ಪ್ರಾಣಿಗಳು ಕೂಡ ಇದನ್ನು ತಿನ್ನುವುದಿಲ್ಲ ಎಂದು ದುಃಖಿಸಿದ್ದಾರೆ. ಸದ್ಯ ವಿಡಿಯೋ ವೈರಲ್​ ಆಗಿದ್ದು, ಉತ್ತರ ಪ್ರದೇಶದ ಪೊಲೀಸ್​ ಸಿಬ್ಬಂದಿ ಸ್ಥಿತಿ ನೋಡಿ ನೆಟ್ಟಿಗರು ಬೇಸರದ ಜೊತೆಗೆ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

    ವಿಡಿಯೋ ವೈರಲ್​ ಆಗುತ್ತಿದ್ದಂತೆ ಟ್ವೀಟ್​ ಮಾಡಿರುವ ಫಿರೋಜಾಬಾದ್​ ಪೊಲೀಸ್​ ಇಲಾಖೆ, ಕಾನ್‌ಸ್ಟೇಬಲ್ ಮನೋಜ್ ಕುಮಾರ್ ಹಲವು ಬಾರಿ ಶಿಸ್ತು ಉಲ್ಲಂಘಿಸಿರುವ ಇತಿಹಾಸವನ್ನು ಹೊಂದಿದ್ದಾರೆ ಮತ್ತು ಅಕ್ರಮ ಮತ್ತು ಇತರ ವಿಷಯಗಳಲ್ಲಿ ಈ ಹಿಂದೆ 15 ಬಾರಿ ಶಿಕ್ಷೆಗೆ ಒಳಗಾಗಿದ್ದಾರೆ ಎಂದು ಹೇಳಿದೆ. ಅಲ್ಲದೆ, ಈ ಸಂಬಂಧ ತನಿಖೆಗೂ ಆದೇಶಿಸಿರುವುದಾಗಿ ಪೊಲೀಸ್​ ಇಲಾಖೆ ತಿಳಿಸಿದೆ. (ಏಜೆನ್ಸೀಸ್​)

    VIDEO| ಟಾಲಿವುಡ್​ ಐಟಂ ಸಾಂಗ್​​ಗೆ ಬೋಲ್ಡ್​ ಆಗಿ ಸೊಂಟ ಬಳುಕಿಸಿದ ಚಾಹಲ್​ ಪತ್ನಿ ಧನಶ್ರೀ: ವಿಡಿಯೋ ವೈರಲ್​

    ಹುಡುಗಿಯರು ಲೈಂಗಿಕ ಸುಖ ಬಯಸಿದರೆ… ಶಕ್ತಿಮಾನ್​ ಖ್ಯಾತಿಯ ಮುಕೇಶ್​ ಖನ್ನಾ ಹೇಳಿಕೆಗೆ ಭಾರಿ ಆಕ್ರೋಶ!

    ಶೋಕಿಗಾಗಿ ಬೈಕ್​ಗಳನ್ನು ಕದಿಯುತ್ತಿದ್ದ ಇಬ್ಬರು ಬಿ.ಟೆಕ್ ಸ್ಟೂಡೆಂಟ್ಸ್ ಅಂದರ್: 12 ಬುಲೆಟ್, 2 ಡ್ಯೂಕ್ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts