More

    ಯೂಟ್ಯೂಬ್​ ನೋಡಿ ನಕಲಿ ನೋಟು ಪ್ರಿಂಟ್​: ಆರೋಪಿ ಗಳಿಸಿದ ಹಣದ ಮೊತ್ತ ಕೇಳಿ ಪೊಲೀಸರೇ ಶಾಕ್​!

    ವಿಜಯವಾಡ: ಮನೆಯಲ್ಲೇ ಕುಳಿತು ಯೂಟ್ಯೂಬ್​ ವೀಕ್ಷಿಸಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಕೃಷ್ಣ ರೆಡ್ಡಿ ಎಂದು ಗುರುತಿಸಲಾಗಿದೆ. ಈತ ಪೂರ್ವ ಗೋದಾವರಿಯ ಅನಪಾರ್ಥಿ ನಿವಾಸಿ. ಗುರುವಾರ ಈತನನ್ನು ಬಂಧಿಸಿ ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

    ನಕಲಿ ನೋಟುಗಳನ್ನು ಹೊಂದಿರುವ ಆರೋಪದ ಮೇಲೆ ಜೂನ್​ 23ರಂದು ಇಬ್ರಾಹಿಂಪಟ್ಟಣಂ ಪೊಲೀಸರು ದುಲಾಮ್​ ಸಾಯಿ, ಗೊಟಿಮಕ್ಕಲ ರವಿಶಂಕರ್​, ಭಿಮಾವರಪು ಯಾಗ್ನ ಪ್ರದೀಪ್​, ನಾಗ ಮಲ್ಲೇಶ್ವರಿ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

    ವಿಚಾರಣೆ ವೇಳೆ ಪೊಲೀಸರು ಸತ್ಯಾಂಶವನ್ನು ಹೊರಗೆಳೆದಿದ್ದಾರೆ. ಮಾಹಿತಿ ಆಧಾರದ ಮೇಲೆ ಪೆಟ್ರೋಲ್​ ಬಂಕ್​ನಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣ ರೆಡ್ಡಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಪ್ರಕರಣದ ಮುಖ್ಯ ಆರೋಪಿ.

    ವಿವರಣೆಗೆ ಬರುವುದಾದರೆ, ಕೃಷ್ಣ ಯೂಟ್ಯೂಬ್​ ವಿಡಿಯೋಗಳ ಮೂಲಕ ನಕಲಿ ನೋಟುಗಳನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿದಿದ್ದ. ಅದರಂತೆ ಮನೆಯಲ್ಲಿ ಕುಳಿತು ನಕಲಿ ಹಣ ಮುದ್ರಿಸುತ್ತಿದ್ದ. ಆತನ ಮನೆಯಲ್ಲಿ ಒಂದು ಪ್ರಿಂಟರ್​, ಸ್ಕ್ಯಾನರ್​ ಮತ್ತು ಕಟ್ಟರ್​ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಆರೋಪಿ ಕೃಷ್ಣ 200 ಮತ್ತು 500 ರೂ. ನೋಟುಗಳನ್ನು ಮುದ್ರಿಸುತ್ತಿದ್ದ. ಸ್ಟೇಷನರಿ ಶಾಪ್​ನಲ್ಲಿ ಸಿಗುವ ಪೇಪರ್​ನಿಂದಲೇ ಆರೋಪಿ ನೋಟು ಪ್ರಿಂಟ್​ ಮಾಡುತ್ತಿದ್ದ. ಬಳಿಕ ನಕಲಿ ನೋಟನ್ನು ಒರಿಜಿನಲ್ ನೋಟಿನ ಗಾತ್ರದಲ್ಲೇ ಕತ್ತರಿಸುತ್ತಿದ್ದ. ಆದ್ದರಿಂದ ಅದನ್ನು ಗುರುತಿಸಲು ಜನರಿಗೆ ಕಷ್ಟವಾಗುತ್ತಿತ್ತು.

    ನಕಲಿ ನೋಟುಗಳನ್ನು ತಯಾರಿಸುವ ಮೂಲಕವೇ ಆರೋಪಿ ಎರಡು ಕೋಟಿ ರೂ. ಹಣವನ್ನು ಸಂಪಾಸಿದ್ದ ಎಂದು ತಿಳಿದುಬಂದಿದೆ. ಸದ್ಯ ಪ್ರಮುಖ ಆರೋಪಿ ಸೇರಿದಂತೆ ಇತರರ ಮೇಲೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಅವರನ್ನ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ಅತ್ತೆ ಮನೆ ಬಿಟ್ಟುಬಂದಿದ್ದಕ್ಕೆ ಯುವತಿಯ ಕೂದಲು ಹಿಡಿದೆಳೆದು ಮರಕ್ಕೆ ಕಟ್ಟಿ ಥಳಿಸಿದ ತಂದೆ, ಸೋದರಸಂಬಂಧಿಗಳು!

    ಮಗನ ಮೇಲೆಯೇ ತಾಯಿಯ ಲೈಂಗಿಕ ದೌರ್ಜನ್ಯ: ಪೊಲೀಸರು ಇಂತಹ ಕೀಳು ಮಟ್ಟಕ್ಕೆ ಇಳಿದರಾ?

    ಕೆಆರ್​ಎಸ್​ ಡ್ಯಾಂನಲ್ಲಿ ಬಿರುಕು: ಕಾವೇರಿ ನೀರಾವರಿ ನಿಗಮದ ವರದಿಯಿಂದ ಇಕ್ಕಟಿಗೆ ಸಿಲುಕಿದ ಸುಮಲತಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts