More

    ಹೇಳದೆ ಕೇಳದೆ ಮನೆ ಬಿಟ್ಟು ಹೋಗಿದ್ದ ಮೂವರು ಬಾಲಕಿಯರನ್ನು ರಕ್ಷಿಸಿದ ಹುಬ್ಬಳ್ಳಿ ರೈಲ್ವೆ ಪೊಲೀಸರು

    ದಾವಣಗೆರೆ: ದಾವಣಗೆರೆಯಲ್ಲಿ ನಾಪತ್ತೆಯಾಗಿ ರೈಲಿನ ಮೂಲಕ ಹುಬ್ಬಳ್ಳಿಗೆ ಆಗಮಿಸಿದ್ದ ಮೂವರು ಬಾಲಕಿಯರನ್ನು ಹುಬ್ಬಳ್ಳಿ ರೈಲ್ವೆ ಠಾಣೆಯ ಪೊಲೀಸರು ಹಾಗೂ 112 ಸಿಬ್ಬಂದಿ ರಕ್ಷಿಸಿದ್ದಾರೆ.

    ದಾವಣಗೆರೆಯ ಖಾಸಗಿ ಶಾಲೆಯೊಂದರಲ್ಲಿ ಎಸ್​ಎಸ್​ಎಲ್​ಸಿ ವ್ಯಾಸಂಗ ಮಾಡುತ್ತಿರುವ ಬಾಲಕಿಯರು ಮಂಗಳವಾರ ಪಾಲಕರು ಹಾಗೂ ಶಿಕ್ಷಕರಿಗೆ ಹೇಳದೆ ನಾಪತ್ತೆಯಾಗಿದ್ದರು.

    ಈ ಕುರಿತು ಅವರ ಪಾಲಕರು ದಾವಣಗೆರೆ ಮಹಿಳಾ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಬಾಲಕಿಯರು ಸಂಜೆ ದಾವಣೆಗೆರೆಯಿಂದ ಹುಬ್ಬಳ್ಳಿ ರೈಲು ಹತ್ತಿರುವ ಸುಳಿವು ಪೊಲೀಸರಿಗೆ ಸಿಕ್ಕಿತ್ತು.

    ಕೂಡಲೇ ಹುಬ್ಬಳ್ಳಿ ಪೊಲೀಸರಿಗೆ ಫೋಟೋ ಸಹಿತ ಮಾಹಿತಿ ನೀಡಿದ್ದರು. ಹುಬ್ಬಳ್ಳಿ ರೈಲ್ವೆ ಠಾಣೆ ಪಿಎಸ್​ಐ ಸತ್ಯಪ್ಪ ಮುಕ್ಕಣ್ಣವರ, ಶಹರ ಠಾಣೆಯ 112 (ಹೊಯ್ಸಳ) ಸಹಾಯವಾಣಿಯ ಸುಧೀಂದ್ರ ಗಡ ಹಾಗೂ ಸಿಬ್ಬಂದಿ, ರೈಲು ಬರುತ್ತಿದ್ದಂತೆ ಬಾಲಕಿಯರನ್ನು ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಬುಧವಾರ ದಾವಣೆಗೆರೆ ಪೊಲೀಸರಿಗೆ ಒಪ್ಪಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಂಚಾರ ಪೊಲೀಸ್ ವ್ಯವಸ್ಥೆಯಲ್ಲಿ ಸಂಚಲನ; ಟೋಯಿಂಗ್​ಗೆ ಸದ್ಯದಲ್ಲೇ​ ಹೊಸ ನಿಯಮ: ಏನೇನಿರುತ್ತೆ ಷರತ್ತು?

    ಟೋಯಿಂಗ್​ಗೆ ಬಂದಿದ್ದವರನ್ನು ತರಾಟೆಗೆ ತಗೊಂಡ ಜನರು; ಟೋ ಮಾಡದೆ ವಾಪಸ್ ಹೋದ ಪೊಲೀಸರು

    ಪಿಸ್ತೂಲ್ ತೋರಿಸಿ ಬೆದರಿಸಿದ ಬಿಜೆಪಿ ಮುಖಂಡ; ಎಗ್​ರೈಸ್​ ಅಂಗಡಿ ವಿಚಾರಕ್ಕೆ ಜಗಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts