More

    ನೀವು ಹೀಗೆ ಮಾಡಿದ್ರೆ ಮೊಸಳೆಗಳು ನಿಮ್ಮನ್ನು ಕಚ್ಚದೇ ಬಿಡುವುದಿಲ್ಲ: ಬಿಜೆಪಿಗೆ ಸಿಎಂ ಮಮತಾ ವಾರ್ನಿಂಗ್​

    ಕೋಲ್ಕತ: ಬಿಜೆಪಿ ವಿರುದ್ಧ ಇಂದು ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಜಾರಿ ನಿರ್ದೇಶನಾಲಯದಿಂದ ಬಂಧನವಾಗಿರುವ ತಮ್ಮ ಸಂಪುಟದ ಸಚಿವನನ್ನು ಭುವನೇಶ್ವರದ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದೇಕೆ ಎಂದು ಪ್ರಶ್ನಿಸಿದರು. ಇದು ಬಂಗಾಳದ ಜನರಿಗೆ ಮಾಡುತ್ತಿರುವ ಅವಮಾನ. ಮಹಾರಾಷ್ಟ್ರದ ಬಳಿಕ ಬಂಗಾಳವನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಬಿಜೆಪಿ ಎದುರು ನೋಡುತ್ತಿದೆ ಎಂದು ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

    ಸಚಿವ ಪಾರ್ಥ ಚಟರ್ಜಿ ಅವರನ್ನು ಕೇಂದ್ರ ಸರ್ಕಾರದ ಹಿಡಿತವಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇಕೆ? ಇಎಸ್​ಐ ಆಸ್ಪತ್ರೆ ಏಕೆ? ಬಿಜೆಪಿ ಆಜ್ಞೆ ಇರುವ ಆಸ್ಪತ್ರೆ ಏಕೆ? ಇದರ ಹಿಂದಿನ ಉದ್ದೇಶ ಏನು? ಇದು ಬಂಗಾಳಕ್ಕೆ ಮಾಡಿದ ಅಪಮಾನವಲ್ಲವೇ? ನೀವು ಏನು ಅಂದುಕೊಂಡಿದ್ದೀರಿ? ಕೇಂದ್ರ ಅಮಾಯಕ ಮತ್ತು ರಾಜ್ಯಗಳೆಲ್ಲ ಕಳ್ಳರೆಂದುಕೊಂಡಿದ್ದೀರಾ? ರಾಜ್ಯಗಳು ಇರುವುದರಿಂದಲೇ ನೀವೆ ಅಲ್ಲಿರುವುದು ಎಂದು ಮಮತಾ ಅವರು ಆಕ್ರೋಶಭರಿತ ಮಾತುಗಳನ್ನಾಡಿದರು.

    ಬಿಜೆಪಿ ಎಚ್ಚರಿಕೆ ನೀಡಿದ ಮಮತಾ, ಈ ಬಾರಿ ಹೋರಾಡಲು ಮಹಾರಾಷ್ಟ್ರಕ್ಕೆ ಆಗಲಿಲ್ಲ. ಮಹಾರಾಷ್ಟ್ರ ಬಳಿಕ ಛತ್ತೀಸ್​ಗಢ, ಜಾರ್ಖಂಡ್​ ಮತ್ತು ಬಂಗಾಳ ಎಂದು ಅವರು ಹೇಳಿದ್ದಾರೆ. ಇಲ್ಲಿಗೆ ಬರುವ ಪ್ರಯತ್ನವನ್ನು ಅವರು (ಬಿಜೆಪಿ) ಮಾಡುತ್ತಿದ್ದಾರೆ. ಅದಕ್ಕೂ ಮುನ್ನ ನೀವು ಬಂಗಾಳಕೊಲ್ಲಿಯನ್ನು ದಾಟಬೇಕಿದೆ. ಇಲ್ಲಿಗೆ ಬರುವ ಮುನ್ನ ಅಲ್ಲಿರುವ ಮೊಸಳೆಗಳು ನಿಮ್ಮ ಕಚ್ಚಿ ಹಾಕುತ್ತವೆ. ಉತ್ತರ ಬಂಗಾಳದಲ್ಲಿರುವ ಆನೆಗಳು ನಿಮ್ಮ ಮೇಲೆ ಉರುಳುತ್ತವೆ ಎಂದು ಮಮತಾ ಎಚ್ಚರಿಸಿದ್ದಾರೆ.

    ಪಾರ್ಥ ಚಟರ್ಜಿ ಅವರು ಬಂಧನವಾದ ಬಳಿಕ ಮಮತಾ ಅವರಿಗೆ ಕರೆ ಮಾಡಿದ್ದಾರೆ. ಆದರೆ, ಮಮತಾ ಅವರು ಉತ್ತರಿಸಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಈಗ ಭ್ರಷ್ಟಾಚಾರದ ಆರೋಪಗಳ ವಿರುದ್ಧ ಹೋರಾಡುತ್ತಿರುವ ತಮ್ಮ ಉನ್ನತ ಸಹಾಯಕರಲ್ಲಿ ಒಬ್ಬರಾದ ಸಚಿವ ಚಟರ್ಜಿ ಅವರಿಂದ ದೂರವಿರಲು ಮುಖ್ಯಮಂತ್ರಿಯಾಗಿ ಮಮತಾ ಅವರು ಮಾಡುತ್ತಿರುವ ಪ್ರಯತ್ನವಾಗಿ ಇದು ಕಂಡುಬಂದಿದೆ.

    ಇದೇ ಸಂದರ್ಭದಲ್ಲಿ ಮಾತನಾಡಿದ ಮಮತಾ, ನಾನು ಎಂದಿಗೂ ಭ್ರಷ್ಟಾಚಾರ ಅಥವಾ ಯಾವುದೇ ತಪ್ಪು ಮಾಡಲು ಬೆಂಬಲ ನೀಡುವುದಿಲ್ಲ. ಏಜೆನ್ಸಿಗಳನ್ನು ಬಳಸಿಕೊಂಡು ನನ್ನ ಪಕ್ಷವನ್ನು ಒಡೆಯಬಹುದು ಎಂದು ಬಿಜೆಪಿ ಭಾವಿಸಿದರೆ ಅವರು ತಪ್ಪು. ನಾನು ಯಾರನ್ನೂ ಬಿಡುವುದಿಲ್ಲ, ಯಾರಾದರೂ ಕಳ್ಳ ಅಥವಾ ಡಕಾಯಿತರಾಗಿದ್ದರೆ, ಟಿಎಂಸಿ ಅವರನ್ನು ಬಿಡುವುದಿಲ್ಲ. ನನ್ನ ಸ್ವಂತ ಜನರನ್ನೂ ನಾನು ಬಂಧಿಸಿದ್ದೇನೆ. ನಾನು ನನ್ನ ಶಾಸಕರು ಮತ್ತು ಸಂಸದರನ್ನು ಮತ್ತು ಮಂತ್ರಿಗಳನ್ನು ಸಹ ಬಿಡುವುದಿಲ್ಲ. ಆದರೆ ನೀವು ನನ್ನ ಮೇಲೆ ಶಾಯಿ ಎಸೆಯಲು ಪ್ರಯತ್ನಿಸಿದರೆ, ನಾನು ನಿಮ್ಮ ಮೇಲೆ ಕೆಸರು ಎರಚಬಲ್ಲೆ ಎಂದು ಮಮತಾ ಹೇಳಿದರು.

    ಅಂದಹಾಗೆ ಪಾರ್ಥ ಚಟರ್ಜಿ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಶಾಲಾ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂಬ ಆರೋಪದಲ್ಲಿ ಚಟರ್ಜಿ ಅವರನ್ನು ಇಡಿ ಬಂಧಿಸಿದೆ. ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ನಿವಾಸದ ಮೇಲೆ ಇಡಿ ದಾಳಿ ಮಾಡಿದಾಗ 20 ಕೋಟಿ ರೂ. ಪತ್ತೆಯಾದ ಒಂದು ದಿನದ ಬಳಿಕ ಚಟರ್ಜಿ ಬಂಧನವಾಗಿದೆ. ಆಪ್ತೆ ಅರ್ಪಿತಾಳನ್ನು ಇಡಿ ಬಂಧಿಸಿದೆ. (ಏಜೆನ್ಸೀಸ್​)

    ಕೂಡ್ಲಿಗಿಯಲ್ಲಿ ಯುವತಿಯ ರುಂಡ ಕಡಿದು ಠಾಣೆಗೆ ತಂದಿದ್ದ ಆರೋಪಿ ವಿರುದ್ಧ ದಾಖಲಾಯ್ತು ಮತ್ತೊಂದು ಕೇಸ್​!

    ಏನಾಯ್ತು ರಾಕಿ ಭಾಯ್​ಗೆ? ಯಾಕಿಷ್ಟು ಸೈಲೆಂಟ್​ ಆಗಿದ್ದಾರೆ? ಆದಷ್ಟು ಬೇಗ ಯಶ್​ ಇದನ್ನು ಮಾಡಲೇಬೇಕಿದೆ….

    ಮಾಲಕಿಯನ್ನೇ ಭೀಕರವಾಗಿ ಕೊಂದ ಪಿಟ್​ಬುಲ್​ ಶ್ವಾನವನ್ನು ದತ್ತು ಪಡೆಯಲು ಜನರು ಮುಗಿಬೀಳುತ್ತಿರುವುದೇಕೆ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts