More

    ಮಾವಿನ ಹಣ್ಣುಗಳನ್ನು ಕದ್ದು ಸಸ್ಪೆಂಡ್​ ಆದ ಪೊಲೀಸ್​ ಅಧಿಕಾರಿಯ ಹಿನ್ನೆಲೆ ತಿಳಿದು ಅಧಿಕಾರಿಗಳೇ ಶಾಕ್​!

    ಕೊಟ್ಟಾಯಂ: ಕೇರಳದ ಕಂಜಿರಪಲ್ಲಿಯ ಅಂಗಡಿಯೊಂದರಲ್ಲಿ ಮಾವಿನ ಹಣ್ಣುಗಳನ್ನು ಕಳ್ಳತನ ಮಾಡಿದ್ದ ಪೊಲೀಸ್​ ಅಧಿಕಾರಿಯನ್ನು ಕೇರಳದ ಡಿಜಿಪಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಆತನ ಹಿನ್ನೆಲೆಯನ್ನು ತಿಳಿದು ಹಿರಿಯ ಪೊಲೀಸ್​ ಅಧಿಕಾರಿಗಳೇ ದಂಗಾಗಿದ್ದಾರೆ.

    ಶಿಹಾಬ್ ಅಮಾನತಾದ ಅಧಿಕಾರಿ. ಇವರು ಇಡುಕ್ಕಿಯಲ್ಲಿರುವ ಎಆರ್​ ಕ್ಯಾಂಪ್​ನಲ್ಲಿ ಸಿವಿಲ್​ ಪೊಲೀಸ್​ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮಾವಿನ ಹಣ್ಣುಗಳನ್ನು ಕದ್ದಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಶಿಹಾಬ್​ ತಲೆಮರೆಸಿಕೊಂಡಿದ್ದು, ಅವರ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.

    ಶಿಹಾಬ್​ ಅಪರಾಧ ಹಿನ್ನೆಲೆಯನ್ನು ಸಹ ಹೊಂದಿದ್ದಾರೆ. 2019ರಲ್ಲಿ ಕಂಜಿರಪಲ್ಲಿಯ ಜನರಲ್ ಹಾಸ್ಪಿಟಲ್​ನ ಮಹಿಳಾ ಉದ್ಯೋಗಿಯೊಬ್ಬರಿಗೆ ಮದುವೆ ಆಗುವುದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪವಿದೆ. ಅಲ್ಲದೆ, ಜೈಲಿನಿಂದ ಹೊರಬಂದ ನಂತರ ಮಹಿಳೆಗೆ ಬೆದರಿಕೆ ಮತ್ತು ಹಲ್ಲೆಗೆ ಯತ್ನಿಸಿದ ಶಿಹಾಬ್ ವಿರುದ್ಧ ಮುಂಡಕ್ಕಯಂ ಪೊಲೀಸರು ದಾಖಲಿಸಿರುವ ಮತ್ತೊಂದು ಪ್ರಕರಣದ ವಿಚಾರಣೆ ನಡೆಯುತ್ತಿದೆ.

    ಪೊಲೀಸ್​ ಕೆಲಸಕ್ಕೆ ಸೇರುವ ಮುನ್ನ ಅಂದರೆ, 2007ರಲ್ಲಿ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದ ಆರೋಪದ ಮೇಲೆಯೂ ಶಿಹಾಬ್​ ವಿರುದ್ಧ ಕೇಸು ದಾಖಲಾಗಿತ್ತು. ಇದಿಷ್ಟೇ ಅಲ್ಲದೇ ಗಣಿಗಾರಿಕೆ ಮಾಫಿಯಾಗಳ ಸಂಪರ್ಕ, ಶಬರಿಮಲೆಯಲ್ಲಿ ವಿಐಪಿ ದರ್ಶನ ಆಮಿಷವೊಡ್ಡಿ ಭಕ್ತರಿಂದ ಹಣ ವಸೂಲಿ, ಕರ್ತವ್ಯವಿಲ್ಲದ ವೇಳೆ ಸಮವಸ್ತ್ರ ಧರಿಸಿ ಸ್ಥಳೀಯರಿಂದ ಹಣ ವಸೂಲಿ ಮುಂತಾದ ಪ್ರಕರಣಗಳ ಕುರಿತು ಈತನ ವಿರುದ್ಧ ಹಲವು ದೂರುಗಳು ಬಂದಿದ್ದರೂ ಉನ್ನತ ಮಟ್ಟದ ಪ್ರಭಾವದಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಇದರೊಂದಿಗೆ ಅಪರಾಧದ ಹಿನ್ನೆಲೆ ಇದ್ದರೂ ಈತನಿಗೆ ಅದು ಹೇಗೆ ಕೆಲಸ ಸಿಕ್ಕಿತು ಎಂಬುದೇ ಇಲ್ಲಿ ಯಕ್ಷ ಪ್ರಶ್ನೆಯಾಗಿದೆ. (ಏಜೆನ್ಸೀಸ್​)

    ಡಿವೋರ್ಸ್​ಗೆ ಗುಡ್​ಬೈ ಹೇಳಿ ಮತ್ತೆ ಒಂದಾಗಲು ಮುಂದಾದ ಧನುಷ್​-ಐಶ್ವರ್ಯಾ: ಸ್ಟಾರ್​ ದಂಪತಿಯ ಮನವೊಲಿಸಿದ್ದು ಯಾರು?

    ನೀತಿಸಂಹಿತೆ ತಿದ್ದುಪಡಿ ಪ್ರಸ್ತಾವನೆ: ಪಕ್ಷಗಳು ಭರವಸೆ ಜತೆಗೆ ಆರ್ಥಿಕ ಮೂಲ ಮಾಹಿತಿ ನೀಡುವುದು ಕಡ್ಡಾಯ

    ಹಬ್ಬದ ಸೀಸನ್​ನಲ್ಲಿ ಚಿನ್ನ ಬೆಲೆ ಏರಿಕೆ ಸಾಧ್ಯತೆ; ಭಾರತಕ್ಕೆ ಬಂಗಾರ ಪೂರೈಕೆ ಕಡಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts