More

    ಬಾಳೆ ತೋಟದಲ್ಲಿ ಅಡಗಿದ್ದ ಹುಲಿ ಸೆರೆ ಹಿಡಿದ ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು!

    ಚಾಮರಾಜನಗರ: ಸಾಕಾನೆ “ಅಭಿಮನ್ಯು” ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತು ಗಜ ಗಾಂಭೀರ್ಯದಿಂದ ಹೆಜ್ಜೆ ಇಡುವುದಷ್ಟೇ ಅಲ್ಲ, ಕಾಡಾನೆ, ಹುಲಿ ಸೆರೆ ಕಾರ್ಯಾಚರಣೆಗಿಳಿಯುವ “ಕೂಂಬಿಂಗ್ ಸ್ಪೆಷಲಿಸ್ಟ್” ಕೂಡ ಹೌದು.

    ಕಾಡಿನಿಂದ ನಾಡಿಗೆ ಬಂದು ಜನರಿಗೆ ತೊಂದರೆ ಕೊಡುವ ಆನೆ, ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಗೆ ಅಭಿಮನ್ಯು ಎಂಟ್ರಿ ಕೊಟ್ಟರೆ ಗೇಮ್ ಫಿನಿಶ್. ಗುಂಡ್ಲುಪೇಟೆಯ ಗೋಪಾಲಪುರದಲ್ಲಿ‌ ಎರಡು ಹಸು, ಒಂದೇ ದಿನದಲ್ಲಿ ಇಬ್ಬರು ರೈತರ ಮೇಲೆ ದಾಳಿ ಮಾಡಿದ್ದ ಹುಲಿಯ ಉಪಟಳಕ್ಕೂ ಹೀಗೆ ಬ್ರೇಕ್ ಬಿದ್ದಿದೆ‌.

    ಶನಿವಾರ ರಾತ್ರಿ ಕಾರ್ಯಾಚರಣೆಗೆ ಜೊತೆಯಾದ ಅಭಿಮನ್ಯು ಬೆಳಂಬೆಳಗ್ಗೆ ಹುಲಿಯ ಹೆಡೆಮುರಿ ಕಟ್ಟಿತು. ಅರಣ್ಯ ಇಲಾಖೆ ಹುಲಿ ಅಡಗಿರುವ ತೋಟ ಗುರುತಿಸಿತ್ತು‌. ವ್ಯಾಘ್ರದ ಇರುವ ಸ್ಥಳದಿಂದ‌ ಕದಲದಂತೆ ತಂತ್ರ ಬಳಕೆ ಮಾಡಿತ್ತು.‌ ಬೆಳಗ್ಗೆ ಅಭಿಮನ್ಯು ಬಾಳೆ ತೋಟಕ್ಕೆ ಲಗ್ಗೆ ಇಟ್ಟು ಹುಲಿ ಕಂಡು ಗೀಳಿಟ್ಟು ಸೆರೆ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿತು.

    ಬಾಳೆ ತೋಟದಲ್ಲಿ ಅಡಗಿದ್ದ ಹುಲಿಗೆ ಮೂರು ಬಾರಿ ಅರಿವಳಿಕೆ ಚಚ್ಚು ಮದ್ದು ಹೊಡೆಯಲಾಯಿತು. ಅರಣ್ಯ ಇಲಾಖೆ‌ ಅಧಿಕಾರಿ ಮತ್ತು ಸಿಬ್ಬಂದಿ ಮಳೆ ನಡುವೆಯೂ ಕಾರ್ಯಾಚರಣೆ ‌ನಡೆಸಿ‌ ಹುಲಿ‌ ಸೆರೆ‌ಹಿಡಿಯುವಲ್ಲಿ ಯಶಸ್ವಿಯಾದರು.

    ಬೆಳ್ಳಂಬೆಳಗ್ಗೆ ಸೆರೆ ಸಿಕ್ಕ ದಾಳಿಕೋರ ಹುಲಿ..

    ಗುಂಡ್ಲುಪೇಟೆ: ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ಶನಿವಾರ ಜಮೀನಿನ ಬಳಿ ಇಬ್ಬರು ರೈತರ ಮೇಲೆ ದಾಳಿ ಮಾಡಿದ್ದ ಹುಲಿ ಸೆರೆ ಸಿಕ್ಕಿದೆ‌.

    ಗ್ರಾಮದ ಗವಿಯಪ್ಪ(45) ಮತ್ತು ಶೇಖರ್ (40) ಹುಲಿ ದಾಳಿಯಿಂದ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಹುಲಿ ಸೆರೆಗೆ ಅರಣ್ಯ ‌ಇಲಾಖೆ ಕಾರ್ಯಾಚರಣೆ ಆರಂಭಿಸಿತ್ತು‌. ಸಾಕಾನೆ ಅಭಿಮನ್ಯು ನೆರವಿನಿಂದ ಬೆಳ್ಳಂಬೆಳಗ್ಗೆ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಹುಲಿ ಸೆರೆ ಸಿಕ್ಕಿದೆ. ಇದನ್ನು ಮೈಸೂರಿನ ಮೃಗಾಲಯಕ್ಕೆ ರವಾನೆ‌ ಮಾಡಲಾಗಿದೆ.

    ರಾತ್ರಿಯೆಲ್ಲ ಒಂದೇ ರೂಮಿನಲ್ಲಿ ಯಾಕಿದ್ರು? ಮೈಸೂರಿನಲ್ಲಿ ಹೈಡ್ರಾಮ, ನರೇಶ್​-ಪವಿತ್ರಾ ವಿರುದ್ಧ ರಮ್ಯಾ ಕಿಡಿ

    ಮಾಜಿ ಪತ್ನಿ ಎರಡನೇ ಮದ್ವೆಯಾದ ಬೆನ್ನಲ್ಲೇ ತಾನೂ ಮತ್ತೊಂದು ವಿವಾಹಕ್ಕೆ ರೆಡಿಯಾದ IAS​ ಅಧಿಕಾರಿ

    ರಜೆಯೂ ಇಲ್ಲ, ಭತ್ಯೆಯೂ ಸಿಗ್ತಿಲ್ಲ!; ಪೊಲೀಸ್ ಕಾನ್​ಸ್ಟೇಬಲ್​ಗಳಿಗೆ ಗೋಳು, ಠಾಣಾಧಿಕಾರಿಗೆ ಇಕ್ಕಟ್ಟು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts