More

    ರಾಜ್ಯದಲ್ಲಿ ಕರೊನಾ ಅನ್​ಲಾಕ್​ ಪ್ರಕ್ರಿಯೆ ಶುರು: ರಪ್ತು ವಲಯಕ್ಕೆ ಅನುಮತಿ ನೀಡಿ ಸರ್ಕಾರದ ಆದೇಶ

    ಬೆಂಗಳೂರು: ರಪ್ತು ವಲಯಕ್ಕೆ ಅನುಮತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಈ ಮೂಲಕ ರಾಜ್ಯದಲ್ಲಿ ಕರೊನಾ ಅನ್​ಲಾಕ್​ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ. ಆದರೂ, ಕೆಲವೊಂದು ಕ್ಷೇತ್ರಗಳನ್ನು ಬಿಟ್ಟು ಲಾಕ್​ಡೌನ್​ ವಿಸ್ತರಣೆ ಆಗುವ ಸಾಧ್ಯತೆ ಇದೆ.

    ಲಾಕ್​ಡೌನ್​ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆ ಅಂತ್ಯವಾಗಿದ್ದು, ಜೂನ್​ 7ರ ಬಳಿಕವೂ ಲಾಕ್​ಡೌನ್​ ವಿಸ್ತರಣೆಗೆ ಅನೇಕ ನಾಯಕರು ಒಲವು ತೋರಿದ್ದಾರೆಂದು ತಿಳಿದುಬಂದಿದೆ. ಶನಿವಾರ ಕೋವಿಡ್​ ಉಸ್ತುವಾರಿ ಸಚಿವರ ಸಭೆ ನಡೆಯಲಿದ್ದು, ಲಾಕ್​ಡೌನ್​ ವಿಸ್ತರಣೆ ಅಂದೇ ನಿರ್ಧಾರವಾಗಲಿದೆ.

    ಇನ್ನು ಅನ್​ಲಾಕ್​ ಪ್ರಕ್ರಿಯೆ ಎರಡು ಹಂತದಲ್ಲಿ ನಡೆಯುವ ಸಾಧ್ಯತೆಯು ಇದೆ. ಈಗಾಗಲೇ ಶೇ 100 ರಷ್ಟು ರಪ್ತು ವಲಯ ನಿರ್ವಹಣೆಗೆ ಸರ್ಕಾರ ಅನುಮತಿ ನೀಡಿದೆ. ನಾಳೆಯಿಂದಲೇ ಈ ವಲಯ ಕೆಲಸ ನಿರ್ವಹಿಸಬಹುದಾಗಿದೆ. ಆದರೆ, ಕೆಲವು ನಿರ್ಬಂಧವನ್ನು ಹೇರಲಾಗಿದ್ದು, ಶೇ. 50 ರಷ್ಟು ಸಿಬ್ಬಂದಿಗೆ ಮಾತ್ರ ಅವಕಾಶ ನೀಡಲಾಗಿದೆ.

    1 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಇದ್ದರೆ ವಾರಕ್ಕೆ ಎರಡು ಬಾರಿ ಕರೊನಾ ಟೆಸ್ಟ್​ ಮಾಡಿಸಬೇಕಾಗುತ್ತದೆ. ಈಗಾಗಲೇ ಅಗತ್ಯ ವಸ್ತುಗಳ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದೆ. ಇದೀಗ ರಪ್ತು ವಲಯಕ್ಕೆ ಅನುಮತಿ ನೀಡಿದ್ದು, ರಾಜ್ಯದಲ್ಲಿ ಲಾಕ್​ಡೌನ್​ ಜತೆಯಲ್ಲಿಯೇ ಅನ್​ಲಾಕ್​ ಪ್ರಕ್ರಿಯೆಯು ಆರಂಭವಾಗಿದೆ.

    ಸೆಕ್ಸ್​ ಸೀನ್​ ಶೂಟಿಂಗೂ ಮುನ್ನ ರಾಧಿಕಾ ಆಪ್ಟೆ ಜತೆ ನಡೆದ ರಹಸ್ಯ ಮಾತುಕತೆ ಬಿಚ್ಚಿಟ್ಟ ನಟ!

    ಸರ್ ಏನಾದ್ರೂ ಹೇಳ್ಕಳಿ, ಆರ್‌ಸಿಬಿಗೆ ಕಪ್ ಕೊಡ್ಸಿ; ಮೊಟ್ಟೆ ವಿವಾದದಿಂದ ಕೊಹ್ಲಿ ಮತ್ತೆ ಟ್ರೋಲ್!

    ತಾಯಿ-ಅಕ್ಕನನ್ನು ಕಳೆದುಕೊಂಡು ಮನಸು ಚೂರಾಗಿದೆ ಎಂದ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts