More

    ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಮಹಿಳೆಯ ಮಗನ ಕ್ರೀಡೆಗೆ ಡಿಕೆಶಿ ನೆರವಿ‌ನ ಭರವಸೆ

    ಚಾಮರಾಜನಗರ: ಕೋವಿಡ್​ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಮಹಿಳೆಯ‌ ಮಗನ ಕ್ರೀಡೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೆರವಾಗುವುದಾಗಿ ಭರವಸೆ ನೀಡಿದ್ದಾರೆ.

    ಚಾಮರಾಜನಗರದ ಶಂಕರಪುರದ ನಿವಾಸಿ ರಮೇಶ್‌ಬಾಬು ಅವರು ರಾಷ್ಟ್ರಮಟ್ಟದ ರೈಫಲ್‌ ಶೂಟಿಂಗ್​ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಕ್ಲಬ್​ನಲ್ಲಿ ಸ್ನೇಹಿತರ ರೈಫಲ್​ನಲ್ಲಿ ಅಭ್ಯಾಸ ಮುಂದುವರೆಸಿದ್ದಾರೆ‌. ಹೊಸ ರೈಫಲ್ ಖರೀದಿಗೆ 4.5 ಲಕ್ಷ ರೂ. ಬೇಕಾಗಿದೆ. ಇದೀಗ ಡಿಕೆಶಿ ಯುವಕನ ನೆರವಿಗೆ ಬಂದಿದ್ದಾರೆ.

    ಈ ಬಗ್ಗೆ ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಡಿ.ಕೆ. ಶಿವಕುಮಾರ್​ ಅವರ ಬರೆದುಕೊಂಡಿದ್ದಾರೆ. ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಶ್ರೀಮತಿ ಗೀತಾ ಲಕ್ಷ್ಮೀ ಅವರ ಮಗ ಶ್ರೀ ರಮೇಶ್ ಬಾಬು, ರೈಫಲ್ ಶೂಟಿಂಗ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಗೆದ್ದವರು. ಅವರು ಇಂದು ನನ್ನನ್ನು ಭೇಟಿ ಮಾಡಿ ಸ್ಪರ್ಧೆಗಳಿಗೆ ನೆರವಾಗಲು ರೈಫಲ್ ಖರೀದಿಗೆ ಆರ್ಥಿಕ‌ ನೆರವಿಗಾಗಿ ಮನವಿ ಸಲ್ಲಿಸಿದರು. ಅವರಿಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದೇನೆ ಎಂದು ಡಿಕೆಶಿ ಬರೆದುಕೊಂಡಿದ್ದಾರೆ.

    ಶಾಸಕ ಜಮೀರ್​ಗೆ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್: 5 ಕಡೆಗಳಲ್ಲಿ 40ಕ್ಕೂ ಅಧಿಕ ಅಧಿಕಾರಿಗಳ ತಂಡದಿಂದ ದಾಳಿ

    ದೇಶದಲ್ಲಿ ಸ್ಟಾರ್ಟಪ್​ಗೆ ಗುಜರಾತ್, ಕರ್ನಾಟಕ ಅತ್ಯುತ್ತಮ..

    ಹೋಟೆಲಲ್ಲಿ ಬಲವಂತದ ಟಿಪ್ಸ್ ನಿಷೇಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts