More

    ರಾಹುಲ್​ ಗಾಂಧಿಯ ಟೀ ಶರ್ಟ್​ ಅಣುಕಿಸಿದ ಬಿಜೆಪಿಗೆ ಕಾಂಗ್ರೆಸ್​ ಕೊಟ್ಟ ತಿರುಗೇಟು ಹೀಗಿದೆ….

    ನವದೆಹಲಿ: ಸೆಪ್ಟೆಂಬರ್​ 7 ರಿಂದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ಭಾರತ್​ ಜೋಡೋ ಯಾತ್ರೆ ಆರಂಭವಾಗಿದೆ. ಕನ್ಯಾಕುಮಾರಿಯಿಂದ ಶುರುವಾಗಿರುವ ಯಾತ್ರೆ, ಕಾಶ್ಮೀರದಲ್ಲಿ ಕೊನೆಯಾಗಲಿದೆ. ಯಾತ್ರೆಯ ವೇಳೆ ರಾಹುಲ್​ ಧರಿಸಿದ್ದ ದುಬಾರಿ ಬೆಲೆಯ ಟೀ ಶರ್ಟ್​ ನಿನ್ನೆಯಿಂದ ವಿವಾದದ ಕೇಂದ್ರ ಬಿಂದುವಾಗಿದ್ದು, ಟೀ ಶರ್ಟ್​ ಅನ್ನು ಅಣುಕಿಸಿರುವ ಬಿಜೆಪಿಗೆ ಕಾಂಗ್ರೆಸ್​ ತಿರುಗೇಟು ನೀಡಿದೆ.

    ರಾಹುಲ್​ ಧರಿಸಿದ್ದ ಬರ್ಬೆರ್ರಿ ಟೀ ಶರ್ಟ್ ಬೆಲೆ ಬರೋಬ್ಬರಿ 47,257 ರೂಪಾಯಿ. ಬಿಜೆಪಿ ಟ್ವಿಟರ್​ ಖಾತೆಯಲ್ಲಿ ಟೀ ಶರ್ಟ್​ ಮತ್ತು ಅದರ ಬೆಲೆಯುಳ್ಳ ಫೋಟೋವನ್ನು ಶೇರ ಮಾಡಿ, ದೇಖೋ ಇಂಡಿಯಾ (ನೋಡಿ ಭಾರತ) ಎಂದು ಟ್ವೀಟ್​ ಮಾಡಿದೆ.​

    ಬಿಜೆಪಿ ಟ್ವೀಟ್​ ವೈರಲ್​ ಆಗುತ್ತಿದ್ದಂತೆ ಅಖಾಡಕ್ಕೆ ಇಳಿದ ಕಾಂಗ್ರೆಸ್​, ಬಿಜೆಪಿ ಹೆದರಿದೆಯೇ ಎಂಬ ಪ್ರಶ್ನೆಯ ಮೂಲಕ ಸರಿಯಾಗಿ ತಿರುಗೇಟು ನೀಡಿದೆ. ಭಾರತ ಜೋಡೋ ಯಾತ್ರೆಯಲ್ಲಿ ನೆರೆದಿದ್ದ ಜನರನ್ನು ನೋಡಿ ಬಿಜೆಪಿಗೇನಾದರೂ ಭಯ ಶುರುವಾಗಿದೆಯೇ? ನಿಜವಾದ ಸಮಸ್ಯೆಗಳ ಕುರಿತು ಮಾತನಾಡಿ. ದೇಶದಲ್ಲಿರುವ ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಮಾತನಾಡಿ. ಅದನ್ನು ಬಿಟ್ಟು ಉಳಿದ ಬಟ್ಟೆಗಳ ಬಗ್ಗೆ ಚರ್ಚಿಸುವುದಾದರೆ, ಮೋದಿ ಅವರು 10 ಲಕ್ಷ ರೂ. ಮೌಲ್ಯದ ಬಟ್ಟೆ ಮತ್ತು 1.5 ಲಕ್ಷ ರೂ. ಮೌಲ್ಯದ ಗ್ಲಾಸ್​ ಧರಿಸುತ್ತಾರೆ. ಅದರ ಬಗ್ಗೆಯೂ ನಾವು ಚರ್ಚಿಸಬೇಕಿದೆ ಎಂದು ಕಾಂಗ್ರೆಸ್​ ಹೇಳಿದೆ.

    ರಾಹುಲ್ ತೊಟ್ಟಿದ್ದ ಬರ್ಬೆರಿ ಬ್ರ್ಯಾಂಡ್ ಟೀ ಶರ್ಟ್​ ದೇಶದಲ್ಲಿ ಸಿಗುವುದಿಲ್ಲ. ಅದನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಬಿಜೆಪಿ ಲೇವಡಿ ಮಾಡಿದೆ. ಅದಕ್ಕೆ ಕಾಂಗ್ರೆಸ್​ ಸಹ ಉತ್ತರ ಕೊಟ್ಟಿದ್ದು, ಎರಡು ರಾಷ್ಟ್ರೀಯ ಪಕ್ಷಗಳ ಕಿತ್ತಾಟ ಜೋರಾಗಿದೆ. (ಏಜೆನ್ಸೀಸ್​)

    ಬ್ರಿಟನ್ ಅರಸೊತ್ತಿಗೆಯ ಆಚೆಈಚೆ…

    ಜನಸ್ಪಂದನೆಗೆ ಜೈ ಅಭಿವೃದ್ಧಿ ಸಮರಕ್ಕೂ ನಾವು ಸೈ

    ಬೋರ್​ವೆಲ್​ನಲ್ಲಿ ಲೂಟಿ: ನಕಲಿ ಫೋಟೋ ಮತ್ತು ಬಿಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts