More

    ಕರ್ನಾಟಕದತ್ತಲ್ಲೂ ಹೆಜ್ಜೆ ಹಾಕುತ್ತಿದೆ ಭಾರತ ಐಕ್ಯತಾ ಯಾತ್ರೆ: ಸರ್ವರಿಗೂ ಕಾಂಗ್ರೆಸ್ ಮುಕ್ತ ಆಹ್ವಾನ

    ಬೆಂಗಳೂರು: ಕನ್ಯಾಕುಮಾರಿಯಿಂದ ಶುರುವಾಗಿರುವ ಭಾರತ ಐಕ್ಯತಾ ಯಾತ್ರೆಯು ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಈ ಯಾತ್ರೆ ಕರ್ನಾಟಕದತ್ತಲ್ಲೂ ಹೆಜ್ಜೆ ಹಾಕುತ್ತಿದೆ. ಈ ಐತಿಹಾಸಿಕ ಯಾತ್ರೆಯನ್ನು ಕರ್ನಾಟಕಕ್ಕೆ ಸ್ವಾಗತಿಸಲು ಕಾಂಗ್ರೆಸ್ ಸರ್ವ ರೀತಿಯಲ್ಲೂ ತಯಾರು ಮಾಡಿಕೊಳ್ಳುತ್ತಿದೆ.

    ಕರ್ನಾಟಕದತ್ತ ಆಗಮಿಸುತ್ತಿರುವ ಯಾತ್ರೆಯನ್ನು ಬರಮಾಡಿಕೊಳ್ಳಲು ಒಗ್ಗೂಡುವಂತೆ ಕಾಂಗ್ರೆಸ್ ಮನವಿ ಮಾಡಿಕೊಂಡಿದೆ. ಬನ್ನಿ, ಸರ್ವರೂ ಈ ಯಾತ್ರೆಯಲ್ಲಿ ಹೆಜ್ಜೆ ಹಾಕಿ, ಇದು ದೇಶಕ್ಕಾಗಿ ನಡಿಗೆ ಎಂಬ ಕರೆಯ ಮೂಲಕ ಇಡೀ ನಾಡನ್ನು ಸ್ವಾಗತಿಸುತ್ತಿದೆ.

    ಕಳೆದ ತಿಂಗಳಿಂದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಆರಂಭವಾಗಿದೆ. ಈ ಯಾತ್ರೆಯ ಮೂಲಕ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,570 ಕಿಮೀ ನಡೆಯಲಿದ್ದಾರೆ.

    ಈ ಭಾರತ್ ಜೋಡೋ ಯಾತ್ರೆಯು ಸುಮಾರು ಐದು ತಿಂಗಳಲ್ಲಿ 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಲಿದೆ. ಯಾತ್ರೆಯು ಸೆಪ್ಟೆಂಬರ್ 30 ರಂದು ಕರ್ನಾಟಕವನ್ನು ತಲುಪಲಿದೆ. ತಿರುವನಂತಪುರಂ, ಕೊಚ್ಚಿ, ನಿಲಂಬೂರ್, ಮೈಸೂರು, ಬಳ್ಳಾರಿ, ರಾಯಚೂರು, ವಿಕಾರಾಬಾದ್, ನಾಂದೇಡ್, ಜಲಗಾಂವ್, ಇಂದೋರ್, ಕೋಟಾ, ದೌಸಾ, ಅಲ್ವಾರ್, ಬುಲಂದ್‌ಶಹರ್, ದೆಹಲಿ, ಅಂಬಾಲಾ, ಪಠಾಣ್‌ಕೋಟ್ ಮೂಲಕ ಸಾಗುವ ಯಾತ್ರೆಯು ಜಮ್ಮು ಮತ್ತು ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿದೆ.

    ಕರ್ನಾಟಕದತ್ತಲ್ಲೂ ಹೆಜ್ಜೆ ಹಾಕುತ್ತಿದೆ ಭಾರತ ಐಕ್ಯತಾ ಯಾತ್ರೆ: ಸರ್ವರಿಗೂ ಕಾಂಗ್ರೆಸ್ ಮುಕ್ತ ಆಹ್ವಾನ

    ಹೈದರಾಬಾದ್​ನಲ್ಲಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಬಂದ ಡೆವಿಲ್​ ಫಿಶ್ ನೋಡಲು ಮುಗಿಬಿದ್ದ ಜನರು!

    ಅಕ್ರಮ ಸಂಬಂಧಕ್ಕೆ ಬೇಸತ್ತು ತವರು ಸೇರಿದರೂ ಬಿಡದ ಅಥಣಿ ಪತಿ! ಎರಡು ಸುತ್ತು ಗುಂಡು ಹಾರಿಸಿದ ಭೂಪ…

    ಸ್ನೇಹಿತರ ಜೊತೆ ಈಜಲು ಹೋಗಿದ್ದ ಯುವವೈದ್ಯ ನಾಪತ್ತೆ: ಕನಕಪುರದಲ್ಲಿ ಘಟನೆ, ಮೃತಪಟ್ಟಿರುವ ಶಂಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts