More

    ಬಾಗಲಕೋಟೆಯ ಮಾಜಿ ಶಾಸಕ ಜಿ.ವಿ.ಮಂಟೂರ ಇನ್ನಿಲ್ಲ: ಸ್ವಗ್ರಾಮದಲ್ಲಿ ಇಂದು ಸಂಜೆ ಅಂತ್ಯಕ್ರಿಯೆ

    ಬಾಗಲಕೋಟೆ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಾಗಲಕೋಟೆಯ ಮಾಜಿ ಶಾಸಕ ಜಿ.ವಿ.ಮಂಟೂರ (92) ಗುರುವಾರ (ಫೆ.17) ಬೆಳಗ್ಗೆ 5.30ಕ್ಕೆ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಬಾಗಲಕೋಟೆ ತಾಲೂಕಿನ ಸ್ವಗ್ರಾಮ ಖಜ್ಜಿಡೋಣಿಯಲ್ಲಿ ಮಂಟೂರ ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಕ್ಕೆ ನಡೆಯಲಿದೆ. ಮಂಟೂರ ಅವರರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಜಿ.ವಿ.ಮಂಟೂರ ಬಾಗಲಕೋಟೆ ಕ್ಷೇತ್ರದಲ್ಲಿ ಎರಡು ಸಲ ಶಾಸಕರಾಗಿದ್ದರು.

    1983ರಲ್ಲಿ ಪಕ್ಷೇತರರಾಗಿ ಮತ್ತು 1985ರಲ್ಲಿ ಜನತಾ ಪಕ್ಷದಿಂದ ಗೆದ್ದು ವಿಧಾನಸಭೆಗೆ ಆಯ್ಕೆಯಾಗಿದ್ದರು. ಮಾಜಿ ಸಿಎಂ ರಾಮಕೃಷ್ಟ ಹೆಗಡೆ ಅವರ ಕಟ್ಟಾ ಅನುಯಾಯಿಯಾಗಿದ್ದ ಮಂಟೂರ 1985ರಲ್ಲಿ ಹೆಗಡೆ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬಾರದು ಎನ್ನುವ ಬಿಗಿಪಟ್ಟು ಹಿಡಿದಿದ್ದರು. ಕೊನೆಗೆ ಹೆಗಡೆ ಅವರು ರಾಜಭವನಕ್ಕೆ ತೆರಳದಂತೆ ಅವರ ಶೂ ತೆಗೆದಿಟ್ಟು ಗಮನ ಸೆಳೆದಿದ್ದರು.

    ಬಾಗಲಕೋಟೆ ಅಭಿವೃದ್ದಿ ಪ್ರಾಧಿಕಾರ ಸ್ಥಾಪನೆಗೆ ಇವರ ಪ್ರಯತ್ನವೇ ಕಾರಣ. ಮುಳುಗಡೆ ಸಮಸ್ಯೆ ಬಗ್ಗೆ ಹೆಗಡೆ ಅವರಿಗೆ ಮನದಟ್ಟು ಮಾಡಿ ಬಿಟಿಡಿಎ ಸ್ಥಾಪಪನೆಗೆ ಕಾರಣರಾದರು. 1984ರಲ್ಲಿ ಬಿಟಿಡಿಎ ಸ್ಥಾಪನೆಯಾಗಿ, ಆರಂಭಧಲ್ಲಿ ಮೂರ್ನಾಲ್ಕು ತಿಂಗಳು ಮಂಟೂರ ಅವರೇ ಪ್ರಥಮ‌ ಅಧ್ಯಕ್ಷರಾಗಿದ್ದರು.

    ಮೃತರ ಸಾವಿಗೆ ಕುಟುಂಬವರ್ಗ, ಬಂಧು-ಬಳಗದವರು ಹಾಗೂ ಆಪ್ತರು ಮತ್ತು ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಮದುವೆ ಸಂಭ್ರಮದ ವೇಳೆ ಘನಘೋರ ದುರಂತ: ಆಕಸ್ಮಿಕವಾಗಿ ಬಾವಿಗೆ ಬಿದ್ದು 11 ಮಂದಿ ದುರ್ಮರಣ

    ರೋಹಿತ್ ಟೆಸ್ಟ್ ನಾಯಕನ ಪಟ್ಟವೇರಲು ವೇದಿಕೆ ಸಜ್ಜು; ಲಂಕಾ ಸರಣಿಗೆ ಮುಂದಿನ ವಾರ ಭಾರತ ತಂಡ ಆಯ್ಕೆ

    ಇಂದಿನಿಂದ ರಣಜಿ ಹಬ್ಬ ; ಶುಭಾರಂಭದ ನಿರೀಕ್ಷೆಯಲ್ಲಿ ಕರ್ನಾಟಕ ತಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts