More

    ಮಗು ಜತೆಯಲ್ಲೇ ನಿತ್ಯವು ಕರ್ತವ್ಯಕ್ಕೆ ಹಾಜರಾಗುವ ಮಹಿಳಾ ಪೊಲೀಸ್​ ಅಧಿಕಾರಿ: ಕಾರಣ ಮನಕಲಕುವಂತಿದೆ

    ದೀಸ್ಪುರ್​: ಮಗುವನ್ನು ಪೊಲೀಸ್​ ಠಾಣೆಗೆ ಹೊತ್ತೊಯ್ದು ಪ್ರತಿನಿತ್ಯ ಕರ್ತವ್ಯ ನಿರ್ವಹಿಸುವ ಮಹಿಳಾ ಅಧಿಕಾರಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಮಹಿಳಾ ಅಧಿಕಾರಿಯ ಹೆಸರು ಸಚಿತಾ ರಾಣಿ ರಾಯ್​. ಇವರು ಚಾಚಾರ್​ ಜಿಲ್ಲೆಯ ಸಿಲ್ಚಾರ್​ ಪಿಐ ಕೋರ್ಟ್​ನಲ್ಲಿ ಸೇವೆಗೆ ನಿಯೋಜಿಸಲಾಗಿದೆ. ಪ್ರತಿನಿತ್ಯವು ಮಗುವನ್ನು ಹೊತ್ತುಕೊಂಡು ಕಚೇರಿಗೆ ತೆರಳುತ್ತಾರೆ. ನಿತ್ಯವು 10.30ಕ್ಕೆ ಕೆಲಸದ ಸ್ಥಳ ತಲುಪುವ ಸಚಿತಾ, ಕೆಲಸ ಮುಗಿದ ಬಳಿಕ ಮನೆಗೆ ಹಿಂತಿರುತ್ತಾರೆ. ಇಡೀ ದಿನ ಮಗುವನ್ನು ತಮ್ಮ ಜತೆಯಲ್ಲೇ ಇರಿಸಿಕೊಂಡಿರುತ್ತಾರೆ.

    ರಜೆ ಕೋರಿ ಸಲ್ಲಿಸಿದ್ದ ಮನವಿಯನ್ನು ಮೇಲಾಧಿಕಾರಿಗಳು ಅನುಮೋದಿಸದೇ ಇರುವುದರಿಂದ 27 ವರ್ಷದ ಸಚಿತಾ ತನ್ನ ಮಗುವನ್ನು ಕರ್ತವ್ಯದ ಸ್ಥಳಕ್ಕೆ ಹೊತ್ತೊಯ್ಯುತ್ತಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಗು ನೋಡಿಕೊಳ್ಳಲು ಮನೆಯಲ್ಲಿ ಯಾರು ಇಲ್ಲದಿರುವುದರಿಂದ ತಾವೇ ಮಗುವನ್ನು ತಮ್ಮ ಜತೆಯಲ್ಲಿ ಕರೆದೊಯ್ಯುತ್ತಿದ್ದಾರೆ.

    ನನ್ನ ಮಗುವನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇಲ್ಲ. ಆದ್ದರಿಂದ ನಾನು ನನ್ನ ಮಗಳನ್ನು ನನ್ನೊಂದಿಗೆ ಕರೆತರುತ್ತಿದ್ದೇನೆ. ಇದು ಕೆಲವೊಮ್ಮೆ ಅನಾನುಕೂಲವಾಗುತ್ತದೆ. ಆದರೆ, ನನಗೆ ಬೇರೆ ದಾರಿಯಿಲ್ಲ ಎಂದು ಸಚಿತಾ ಅವರು ಹೇಳಿದರು. ನನ್ನ ಪತಿ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್‌ನಲ್ಲಿ (ಸಿಆರ್‌ಪಿಎಫ್) ಉದ್ಯೋಗಿಯಾಗಿದ್ದು, ಅಸ್ಸಾಂನ ಹೊರಗೆ ನಿಯೋಜಿಸಲಾಗಿದೆ ಎಂದು ರಾಯ್ ಬಹಿರಂಗಪಡಿಸಿದ್ದಾರೆ. (ಏಜೆನ್ಸೀಸ್​)

    ಬೇಕಂತಲೇ ಬೈಕ್​ ಡಿಕ್ಕಿ ಹೊಡೆದು ಪರಾರಿಯಾದ ಕಾನೂನು ವಿದ್ಯಾರ್ಥಿ: ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

    ಇದೆಂಥಾ ವಿಸ್ಮಯ! ಆಮ್ಲೆಟ್​ ಹಾಕಲು ಮೊಟ್ಟೆ ಹೊಡೆದ ಹೋಟೆಲ್​ ಮಾಲೀಕನಿಗೆ ಕಾದಿತ್ತು ಶಾಕ್​

    ನೂಪುರ್ ಹೇಳಿಕೆ, 15 ರಾಷ್ಟ್ರಗಳ ಖಂಡನೆ: ಉಗ್ರರಿಂದ ಜೀವ ಬೆದರಿಕೆ, ಉಚ್ಚಾಟಿತ ನಾಯಕಿಗೆ ಭದ್ರತೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts