ತಿರುಪತಿ: ಕರ್ನೂಲ್ ತಾಲೂಕು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಲ್ ಇನ್ಸ್ಪೆಕ್ಟರ್ ಒಬ್ಬರು ಠಾಣೆಯಲ್ಲಿದ್ದ 15 ಲಕ್ಷ ರೂಪಾಯಿ ಹಣದ ಜತೆಗೆ ಪರಾರಿಯಾಗಿರುವ ಘಟನೆ ನಡೆದಿದ್ದು, ಕರ್ನೂಲ್ ಜಿಲ್ಲಾ ಪೊಲೀಸ್ ವಿಭಾಗ ತಲೆಮರೆಸಿಕೊಂಡಿರುವ ಪೊಲೀಸ್ ಇನ್ಸ್ಪೆಕ್ಟರ್ ಪತ್ತೆಗೆ ಶುಕ್ರವಾರ ಬಲೆ ಬೀಸಿದ್ದಾರೆ.
ಮೂಲಗಳ ಪ್ರಕಾರ, ಸರ್ಕಲ್ ಇನ್ಸ್ಪೆಕ್ಟರ್ ಹೆಸರು ಕಂಬಗಿರಿ ರಾಮುಡು ಎಂದು ಗುರುತಿಸಲಾಗಿದೆ. ನಾಲ್ಕು ದಿನಗಳ ಹಿಂದೆ ನಗರದ ಹೊರವಲಯದ ಪಂಚಲಿಂಗಲ ಚೆಕ್ಪೋಸ್ಟ್ ಬಳಿ ತಮಿಳುನಾಡು ಮೂಲದ ಸತೀಶ್ ಬಾಲಕೃಷ್ಣನ್ ಎಂಬುವರಿಗೆ ಸೇರಿದ ವಾಹನವೊಂದರ ತಪಾಸಣೆ ಮಾಡುವಾಗ ವಶಕ್ಕೆ ಪಡೆಯಲಾದ ಒಟ್ಟು 75 ಲಕ್ಷ ರೂ. ಹಣದಲ್ಲಿ 15 ಲಕ್ಷ ರೂ. ಹಣವನ್ನು ತೆಗೆದುಕೊಂಡು ರಾಮುಡು ಪರಾರಿಯಾಗಿದ್ದಾರೆ.
ವಶಕ್ಕೆ ಪಡೆದ ಹಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಿದರೂ ಸರ್ಕಲ್ ಇನ್ಸ್ಪೆಕ್ಟರ್ ರಾಮುಡು, ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ 15 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಾರೆ ಎಂದು ಸತೀಶ್ ಬಾಲಕೃಷ್ಣನ್ ಗುರುವಾರ ತಡರಾತ್ರಿ ಕರ್ನೂಲ್ ತಾಲೂಕು ಪೊಲೀಸ್ ಠಾಣೆಯಲ್ಲಿ ಔಪಚಾರಿಕವಾಗಿ ದೂರು ದಾಖಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಸತೀಶ್ ಬಾಲಕೃಷ್ಣನ್ ಅವರು ತಮಿಳುನಾಡಿನ ತಿರ್ಪ್ಪುರ್ ಮೂಲದವರು. ಭಾನುವಾರ ಖಾಸಗಿ ಬಸ್ ಒಂದರಲ್ಲಿ ಹೈದರಾಬಾದ್ನಿಂದ ಮದುರೈಗೆ ಹಣವನ್ನು ಸಾಗಿಸುತ್ತಿದ್ದರು. ಈ ವೇಳೆ ಪಂಚಲಿಂಗಲ ಚೆಕ್ಪೋಸ್ಟ್ ಬಳಿ ಬಸ್ ತಡೆದು ತಪಾಸಣೆ ಮಾಡುವಾಗ ಸತೀಶ್ ಬಳಿ 75 ಲಕ್ಷ ರೂ. ಭಾರೀ ಮೊತ್ತ ಇದ್ದಿದ್ದರಿಂದ ನಗದು ಸಮೇತ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆಂದು ಕರ್ನೂಲ್ ತಾಲೂಕು ಪೊಲೀಸರಿಗೆ ಒಪ್ಪಿಸಲಾಯಿತು.
ಹಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಸತೀಶ್ ಬಳಿಯಿತ್ತು. ಆದರೂ, ಸರ್ಕಲ್ ಇನ್ಸ್ಪೆಕ್ಟರ್ 15 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಸತೀಶ್ ಕೊಡಲು ನಿರಾಕರಿಸಿದಾಗ, ತಮ್ಮ ಸರ್ಕಾರಿ ಸಿಮ್ ಅನ್ನು ಕಳಚಿ ಪೊಲೀಸ್ ಠಾಣೆಯಲ್ಲೇ ಇಟ್ಟು ಹಣದೊಂದಿಗೆ ಪರಾರಿಯಾಗಿದ್ದಾರೆ. ಸಂತ್ರಸ್ತ ನೀಡಿದ ದೂರಿನ ಮೇರೆಗೆ ಸರ್ಕಲ್ ಇನ್ಸ್ಪೆಕ್ಟರ್ ವಿರುದ್ಧ ಅವರು ಕೆಲಸ ಮಾಡುವ ಅದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನ ಪತ್ತೆಗೆ ವಿಶೇಷ ತಂಡವನ್ನು ರವಾನಿಸಲಾಗಿದೆ.
ಕರ್ನೂಲ್ ಎಸ್ಪಿ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ ಅವರು ಮರ್ಕಿ ಎಪಿಸೋಡ್ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಮಧ್ಯವರ್ತಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಇನ್ನೂ ತಲೆಮರೆಸಿಕೊಂಡಿರುವ ಸರ್ಕಲ್ ಇನ್ಸ್ಪೆಕ್ಟರ್ನನ್ನು ಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ. (ಏಜೆನ್ಸೀಸ್)
10 ಮಹಿಳೆಯರ ಜತೆ ದೈಹಿಕ ಸಂಬಂಧ ಹೊಂದಿದ್ದೇನೆ: ನಟನ ಹೇಳಿಕೆ ಖಂಡಿಸದೇ ಕೆಂಗಣ್ಣಿಗೆ ಗುರಿಯಾದ ನವ್ಯಾ!
ಗ್ರಾಹಕರಿಗೆ ಮತ್ತೆ ಶಾಕ್: 4ನೇ ಬಾರಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, ಐದು ದಿನದಲ್ಲಿ 3.10 ರೂ. ಹೆಚ್ಚಳ
ಮಂಡ್ಯ ತಹಸೀಲ್ದಾರ್ ಅಮಾನತು! ಇವರ ಮೇಲಿದೆ ಬರೋಬ್ಬರಿ 13 ಕೇಸ್, ಅಕ್ಕಿ ಮೂಟೆಯೂ ನಾಪತ್ತೆ…