More

    ವಿರಾಟ್​ ಕೊಹ್ಲಿಗೆ ನಿವೃತ್ತಿಯ ಸಲಹೆ ನೀಡಿದ ಅಫ್ರಿದಿಗೆ ಅಮಿತ್​ ಮಿಶ್ರಾ ಕೊಟ್ಟ ತಿರುಗೇಟು ಹೀಗಿತ್ತು…

    ನವದೆಹಲಿ: ಸ್ಟಾರ್​ ಕ್ರಿಕೆಟಿಗ ವಿರಾಟ್​ ಕೊಹ್ಲಿಗೆ ನಿವೃತ್ತಿಯ ಸಲಹೆ ನೀಡಿದ ಪಾಕಿಸ್ತಾನದ ಮಾಜಿ ಆಟಗಾರ ಶಾಹೀದ್​ ಅಫ್ರಿದಿಗೆ ಟೀಮ್​ ಇಂಡಿಯಾದ ಮಾಜಿ ಸ್ಪಿನ್ನರ್​ ಅಮಿತ್​ ಮಿಶ್ರಾ ಅವರು ತಿರುಗೇಟು ನೀಡಿದ್ದಾರೆ.

    ಸುದೀರ್ಘ ಒಂದು ತಿಂಗಳ ವಿರಾಮದ ಬಳಿಕ, ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಷ್ಯಾ ಕಪ್​ ಟೂರ್ನಿಯಲ್ಲಿ ಭಾಗವಹಿಸಿದ ವಿರಾಟ್ ಕೊಹ್ಲಿ, ಅಫ್ಘಾನಿಸ್ತಾನದ ವಿರುದ್ಧ​ ಆಕರ್ಷಕ ಶತಕ ಬಾರಿಸುವ ಮೂಲಕ ಮತ್ತೆ ತಮ್ಮ ಲಯಕ್ಕೆ ಮರಳಿದ್ದಾರೆ. ಏಷ್ಯ ಕಪ್​ನಲ್ಲಿ ಒಟ್ಟು 5 ಪಂದ್ಯಗಳಲ್ಲಿ 71ನೇ ಶತಕದೊಂದಿಗೆ ವಿರಾಟ್​ 276 ರನ್​ ಬಾರಿಸಿದರು. ಇದರ ಬೆನ್ನಲ್ಲೇ ಕೊಹ್ಲಿ ನಿವೃತ್ತಿಗೆ ಸಲಹೆ ನೀಡಿದ್ದ ಅಫ್ರಿದಿ, ತಂಡದಿಂದ ಕೈಬಿಡುವ ಮುನ್ನವೇ ಆಟದಲ್ಲಿ ಉತ್ತುಂಗದಲ್ಲಿರುವಾಗಲೇ ನಿವೃತ್ತಿ ತೆಗೆದುಕೊಳ್ಳುವುದು ಉತ್ತಮ ಎಂದು ಹೇಳಿದ್ದರು.

    ಇದರ ಬೆನ್ನಲ್ಲೇ ಟ್ವೀಟ್​ ಮಾಡಿರುವ ಅಮಿತ್​ ಮಿಶ್ರಾ, ಆತ್ಮೀಯ ಅಫ್ರಿದಿ ಅವರೇ ಕೆಲವರು ಜೀವನದಲ್ಲಿ ಒಮ್ಮೆ ಮಾತ್ರ ನಿವೃತ್ತರಾಗುತ್ತಾರೆ. ಆದ್ದರಿಂದ ದಯವಿಟ್ಟು ವಿರಾಟ್ ಕೊಹ್ಲಿಯನ್ನು ಇದೆಲ್ಲದರಿಂದ ತಪ್ಪಿಸಿ ಎಂದು ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

    ಅಫ್ರಿದಿ ಹೇಳಿದ್ದೇನು?
    ವಿರಾಟ್ ಅವರ ವೃತ್ತಿಜೀವನದ ಆರಂಭವು ಸುಲಭವಾಗಿರಲಿಲ್ಲ. ತಮ್ಮ ಕ್ಷೇತ್ರದಲ್ಲಿ ಹೆಸರು ಮಾಡುವ ಮೊದಲು ವಿರಾಟ್​ ಸಾಕಷ್ಟು ಹೋರಾಟ ಮಾಡಿದ್ದಾರೆ. ಅವರೊಬ್ಬ ಚಾಂಪಿಯನ್​ ಮತ್ತು ಎಲ್ಲರಿಗೂ ಒಂದು ನಿವೃತ್ತಿಯ ಹಂತ ಬಂದೇ ಬರುತ್ತದೆ. ಆದರೆ, ಆ ಸನ್ನಿವೇಶದಲ್ಲಿ ಎತ್ತರಕ್ಕೆ ಹೋಗುವುದು ನಮ್ಮ ಗುರಿಯಾಗಿರಬೇಕು ಎಂದು ಅಫ್ರಿದಿ ಹೇಳಿದ್ದರು.

    ನೀವು ಆಟದಲ್ಲಿ ಉತ್ತುಂಗದಲ್ಲಿರುವಾಗಲೇ ತಂಡದಿಂದ ಕೈಬಿಡುವ ಮಟ್ಟಕ್ಕೆ ಹೋಗಬಾರದು. ಆದರೂ ಇದು ವಿರಳವಾಗಿ ಕ್ರಿಕೆಟಿಗರಲ್ಲಿ ಸಂಭವಿಸುತ್ತದೆ. ಕೆಲವೇ ಕೆಲವು ಆಟಗಾರರು, ವಿಶೇಷವಾಗಿ ಏಷ್ಯಾದ ಕ್ರಿಕೆಟಿಗರು ತಮ್ಮ ನಿರ್ಧಾರವನ್ನು ಸೂಕ್ತ ಸಮಯದಲ್ಲಿ ತೆಗೆದುಕೊಳ್ಳುತ್ತಾರೆ. ಆದರೆ ವಿರಾಟ್ ತಮ್ಮ ಶೈಲಿಯಲ್ಲಿಯೇ ನಿರ್ಧಾರ ಮಾಡುತ್ತಾರೆ ಎಂದು ಭಾವಿಸಿದ್ದೇನೆ. ಬಹುಶಃ ಅವರು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ರೀತಿಯಲ್ಲಿಯೇ ನಿರ್ಧರಿಸಬಹುದು ಎಂದರು. (ಏಜೆನ್ಸೀಸ್​)

    VIDEO: ರಾಜಸ್ಥಾನದ ಸ್ನೇಕ್​ ಮ್ಯಾನ್​ ಎಂದೇ ಪ್ರಸಿದ್ಧಿಯಾಗಿದ್ದ ವಿನೋದ್​ ತಿವಾರಿ ಹಾವಿನಿಂದಲೇ ದುರ್ಮರಣ

    ಬಿಎಸ್​ವೈಗೆ ಬಿಗ್​ ಶಾಕ್​: ಭ್ರಷ್ಟಾಚಾರದ ಆರೋಪದಡಿ ಎಫ್​ಐಆರ್​ ದಾಖಲಿಸಿ ತನಿಖೆಗೆ ಕೋರ್ಟ್​ ಆದೇಶ

    ಟಾಲಿವುಡ್​ ಸಿನಿ ಇಂಡಸ್ಟ್ರಿ ಬಗ್ಗೆ ಗಂಭೀರ ಆರೋಪ ಮಾಡಿದ ಹೆಬ್ಬುಲಿ ಬೆಡಗಿ ಅಮಲಾ ಪೌಲ್​!

    ಹುಬ್ಬಳ್ಳಿಯಲ್ಲಿ ಕಾರು ಪಲ್ಟಿ: ಮೂವರ ದುರ್ಮರಣ, ಓರ್ವ ಮಹಿಳೆಯ ಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts