More

    ಈ ಫೋಟೋ ನಕಲಿ! ಕೆಟ್ಟದಾಗಿ ತಿರುಚಿದ ಫೋಟೋ ವಿರುದ್ಧ ಗುಡುಗಿದ ನಟಿ ಮಾಳವಿಕ ಮೋಹನನ್​

    ಚೆನ್ನೈ: ಮಾಲ್ಡೀವ್ಸ್​ ಪ್ರವಾಸದಲ್ಲಿರುವ ಮಲಯಾಳಿ ಬ್ಯೂಟಿ ಮಾಳವಿಕ ಮೋಹನನ್​ ಇತ್ತೀಚೆಗೆ ಬಿಕಿನಿ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋ ದುರ್ಬಳಕೆಯನ್ನು ಖಂಡಿಸಿರುವ ಮಾಳವಿಕ, ಫೋಟೋವನ್ನು ಕೆಟ್ಟದಾಗಿ ಎಡಿಟ್​ ಮಾಡಿ ಹರಿಬಿಡುವವರ ವಿರುದ್ಧ ಹರಿಹಾಯ್ದಿದ್ದಾರೆ.

    ತಮ್ಮ ಒಂದು ಫೋಟೋವನ್ನು ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿರುವ ಮಾಳವಿಕ, ಈ ಫೋಟೋ ಕೆಲವು ತಿಂಗಳುಗಳ ಹಿಂದೆ ತೆಗೆದ ನನ್ನ ಫೋಟೋ. ಆದರೆ, ಕೆಲವರು ಈ ಫೋಟೋವನ್ನು ಕೆಟ್ಟದಾಗಿ ತಿರುಚಿದ್ದಾರೆ. ಅದನ್ನು ಅನೇಕ ಜನರು ಶೇರ್​ ಮಾಡುತ್ತಿದ್ದಾರೆ. ಅಲ್ಲದೆ, ಕೆಲ ಮಾಧ್ಯಮದಲ್ಲೂ ಈ ಫೋಟೋವನ್ನು ಬಳಸಿಕೊಳ್ಳಲಾಗಿದೆ. ಇದು ಕಳಪೆ ಪತ್ರಿಕೋದ್ಯಮದ ಲಕ್ಷಣವಾಗಿದೆ. ನಕಲಿ ಫೋಟೋಗಳನ್ನು ನೋಡಿದ್ದಲ್ಲಿ ರಿಪೋರ್ಟ್​ ಮಾಡಿ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.

    ಈ ರೀತಿ ಫೋಟೋಗಳನ್ನು ತಿರುಚುತ್ತಿರುವುದು ಇದೇ ಮೊದಲೇನಲ್ಲ. ಅನೇಕ ನಟಿಯರು ಇದರ ಸಂತ್ರಸ್ತೆಯರಾಗಿದ್ದಾರೆ. ಆದರೆ, ಕೆಲವೇ ನಟಿಯರು ಈ ಬಗ್ಗೆ ಧ್ವನಿ ಎತ್ತಿದರೆ, ಇನ್ನು ಕೆಲವು ಅದನ್ನು ನಿರ್ಲಕ್ಷಿಸಿ ತಮ್ಮ ಕೆಲಸದತ್ತ ಗಮನ ಹರಿಸುತ್ತಾರೆ.

    ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಮಾಳವಿಕ ದಕ್ಷಿಣ ಭಾರತ ಸಿನಿರಂಗದಲ್ಲಿ ದಿನೇ ದಿನೆ ತಮ್ಮ ಖ್ಯಾತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ನಟ ವಿಜಯ್​ ನಟನೆಯ ಮಾಸ್ಟರ್​ ಚಿತ್ರದ ಮೂಲಕ ಮಾಳವಿಕ ಒಳ್ಳೆಯ ಹೆಸರು ಗಳಿಸಿದ್ದಾರೆ. (ಏಜೆನ್ಸೀಸ್​)

    ಹಾಟ್ ಫೋಟೋಶೂಟ್ ನಲ್ಲಿ ಬಿಕಿನಿ ತೊಟ್ಟು ಮಿಂಚಿದ ಮಾಳವಿಕಾ! ನೆಟ್ಟಿಗರು ಫಿದಾ…

    ಸಿಂಬು ಮದುವೆ ಫಿಕ್ಸ್​! ಶೀಘ್ರದಲ್ಲೇ ದಿನಾಂಕ ಘೋಷಣೆ… ಕಾಲಿವುಡ್​ ನಟನ ಮನಸ್ಸು ಗೆದ್ದು ಚೆಲುವೆ ಯಾರು?

    ಪಬ್​ಜಿಗೆ ದಾಸನಾಗಿ ಕುಟುಂಬವನ್ನೆ ಕೊಂದ ಬಾಲಕನ ಮಾತು ಕೇಳಿ ಪಾಕ್​ ಪೊಲೀಸರೇ ಶಾಕ್​! PUBG ಬ್ಯಾನ್​ಗೆ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts