More

    ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಎಸಿಬಿ ಶಾಕ್​: ರಾಜ್ಯಾದ್ಯಂತ ಏಕಕಾಲದಲ್ಲಿ 78 ಕಡೆ ಎಸಿಬಿ ದಾಳಿ

    ಬೆಂಗಳೂರು: ಬೆಳ್ಳಂಬೆಳಗ್ಗೆ ರಾಜ್ಯದ ಸರ್ಕಾರಿ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶಾಕ್​ ನೀಡಿದೆ. ಏಕಕಾಲಕಕ್ಕೆ ಬೆಂಗಳೂರಿನ ಮೂರು ಕಡೆ ಗದಗ ಹಾಗೂ ರಾಯಚೂರು ಸೇರಿದಂತೆ ರಾಜ್ಯಾದ್ಯಂತ 78 ಕಡೆ ಎಸಿಬಿ ದಾಳಿ ಮಾಡಿದೆ.

    18 ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ದಾಳಿ ಇದಾಗಿದೆ. ಏಕಕಾಲಕ್ಕೆ ಇನ್ನೂರಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಹಾಗೂ ಇನ್ನಿತರ ಜಾಗಗಳ ಮೇಲೆ ದಾಳಿ ಮಾಡಿ ಕಡತಗಳ ಪರಿಶೀಲನೆಗೆ ಮುಂದಾಗಿದೆ.

    ಬೆಂಗಳೂರಿನ 3 ಅಧಿಕಾರಿಗಳಿಗೆ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ. ಅಧಿಕಾರಿಗಳ ಮನೆ ಮತ್ತು ಕಚೇರಿ ಸೇರಿ 14 ಕಡೆ ಎಸಿಬಿ ದಾಳಿ ಮಾಡಿದೆ ಕೈಗಾರಿಕೆ & ವಾಣಿಹಜ್ಯ ಇಲಾಖೆಯ ಖನಿಜ ಭವನದ ಹೆಚ್ಚುವರಿ ನಿರ್ದೇಶಕರಾಗಿರುವ ಬಿ.ಕೆ. ಶಿವಕುಮಾರ್, ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಸಿ.ಜೆ ಜ್ಞಾನೇಂದ್ರ ಕುಮಾರ್ ಮತ್ತು ಬಿಡಿಎ ನಗರ ಯೋಜನೆ ಉಪ ನಿರ್ದೇಶಕರಾದ ವಿ ರಾಕೇಶ್ ಕುಮಾರ್ ಮನೆಗಳ ಮೇಲೆ ಎಸಿಬಿ ದಾಳಿ ಮಾಡಿದೆ.

    ಜ್ಞಾನೇಂದ್ರ ಕುಮಾರ್ ಅವರ ಬಸವೇಶ್ವರ ನಗರ ಮನೆ ಹಾಗೂ ಶಾಂತಿನಗರ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ರಾಕೇಶ್ ಕುಮಾರ್ ಅವರು ನಾಗರಬಾವಿ ನಿವಾಸದ ಮೇಲೆ ದಾಳಿಯಾಗಿದ್ದು, ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

    ವಿಜಯಪುರ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗೋಪಿನಾಥ ಸಾ ಮಳಜಿ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ಬುಧವಾರ ಬೆಳಗ್ಗೆಯೇ ಎಸಿಬಿ ಎಸ್ ಪಿ ಬಿ.ಎಸ್. ನೇಮಗೌಡ ನೇತೃತ್ವದಲ್ಲಿ ದಾಳಿ ನಡೆದಿದೆ. ವಿಜಯಪುರದಲ್ಲಿನ ಮೂರು ಹಾಗೂ ಬಾಗಲಕೋಟೆಯಲ್ಲಿನ ಎರಡು ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ವಿಜಯಪುರ ಆದರ್ಶನಗರದಲ್ಲಿನ ಪಾಟೀಲ ಪ್ಲಾನೆಯಹಿಂಭಾಗದ ಮನೆಯಲ್ಲಿ ಎಸಿಬಿ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ. ಡಿವೈಎಸ್ ಪಿ ಮಂಜುನಾಥ ಗಂಗಲ್ಲ, ಇನ್ ಸ್ಪೆಕ್ಟರ್ ಗಳಾದ ಪರಮೇಶ್ವರ ಕವಟಗಿ ಮತ್ತಿತರರಿದ್ದಾರೆ. (ದಿಗ್ವಿಜಯ ನ್ಯೂಸ್​)

    ಟ್ರಾಕ್ಸ್​ನ ಆಕ್ಸಲ್ ಕಟ್ ಆಗಿ ಭೀಕರ ಅಪಘಾತ: ಸ್ಥಳದಲ್ಲೇ ಐವರು ಸಾವು, ರಾಮೇಶ್ವರಕ್ಕೆ ತೆರಳುವಾಗ ದುರ್ಘಟನೆ

    ಬಿಗ್​ಬಾಸ್​ ನಿರೂಪಕರ ವಿರುದ್ಧವೇ ನಾಲಿಗೆ ಹರಿಬಿಟ್ಟ ಸ್ಪರ್ಧಿ: ಸಿಂಬುಗೆ ಅವಮಾನ, ಅಭಿಮಾನಿಗಳ ಆಕ್ರೊಶ

    ಕಲಬೆರಕೆ ಕಾಕ ಇತಿಹಾಸವನ್ನು ತಿದ್ದುವ ಕಶ್ಮೀರ್ ಫೈಲ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts