More

    ಕೃಷಿ ಇಲಾಖೆ ಜಂಟಿ ನಿರ್ದೇಶಕನ ಮನೆಯಲ್ಲಿ 7 ಕೆಜಿ ಬಂಗಾರ, 15 ಲಕ್ಷ ರೂ. ನಗದು ಪತ್ತೆ

    ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿ ಭ್ರಷ್ಟರಾಗುತ್ತಿರುವ ಅಧಿಕಾರಿಗಳಿಗೆ ಬಿಸಿಮುಟ್ಟಿಸುವ ಕಾರ್ಯವನ್ನು ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಇಂದು ಕೂಡ ಮುಂದುವರೆಸಿದೆ. ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟೂ 60 ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    8 ಎಸ್ಪಿಗಳು, 100 ಅಧಿಕಾರಿಗಳು ಮತ್ತು 300 ಸಿಬ್ಬಂದಿಯ ತಂಡದಿಂದ 15 ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಪ್ರಕರಣಗಳಿಗೆ ಸಂಬಂಧಿಸಿದಂತೆ 60 ಸ್ಥಳಗಳಲ್ಲಿ ಎಸಿಬಿ ಶೋಧ ನಡೆಸಿದೆ. ಶೋಧ ವೇಳೆ ಅಪಾರ ಪ್ರಮಾಣದಲ್ಲಿ ಅಕ್ರಮ ನಗದು ಮತ್ತು ಚಿನ್ನಾಭರಣ ಪತ್ತೆಯಾಗಿದೆ. ಗದಗ ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಅವರ ಮನೆಯಲ್ಲಿ ಕಂಡು ಕೇಳರಿಯದ ಭಾರೀ ಸಂಪತ್ತು ಪತ್ತೆಯಾಗಿದ್ದು, ಅದನ್ನು ನೋಡಿ ಎಸಿಬಿ ಅಧಿಕಾರಿಗಳೇ ಅವಕ್ಕಾಗಿದ್ದಾರೆ.

    ಶಿವಮೊಗ್ಗದಲ್ಲಿರುವ ಚಾಣಕ್ಯ ನಗರದ ವಾಸದ ಮನೆ ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸ್ವಗ್ರಾಮ ತಣಿಗೆರೆ ಮನೆ ಮೇಲೆ ಪೂರ್ವ ವಲಯದ ಎಸಿಬಿ ಎಸ್ಪಿ ಜಯಪ್ರಕಾಶ್​ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

    ರುದ್ರೇಶಪ್ಪನ ಮನೆಯಲ್ಲಿ ಸುಮಾರು 7 ಕೆಜಿ ಬಂಗಾರ ಪತ್ತೆಯಾಗಿದೆ ಎನ್ನಲಾಗಿದೆ. ಒಟ್ಟು 3.5 ಕೋಟಿ ರೂ. ಮೌಲ್ಯದ ಚಿನ್ನ ಮತ್ತು 15 ಲಕ್ಷ ರೂ. ನಗದು ಮನೆಯಲ್ಲಿ ದಾಳಿಯ ವೇಳೆ ಪತ್ತೆಯಾಗಿದೆ. ಅಧಿಕಾರಿ ರುದ್ರೇಶಪ್ಪನನ್ನ ತೀವ್ರ ವಿಚಾರಣೆಗೊಳಪಡಿಸಿದ ಎಸಿಬಿ ಅಧಿಕಾರಿಗಳು, ಸತತ ಐದು ಗಂಟೆಗಳ ಕಾಲ ಮನೆಯಲ್ಲಿ ಕಡತ ಪರಿಶೀಲನೆ ಬಳಿಕ ಕಚೇರಿಯಲ್ಲಿ ಕಡತ ಪರಿಶೀಲನೆ ಆರಂಭಿಸಿದೆ.

    ಎಫ್​ಡಿಎ ಮಾಯಣ್ಣರ ಬಳಿ 50 ಕೋಟಿಗೂ ಅಧಿಕ ಮೌಲ್ಯದ ಆಸ್ತಿ? ಎಸಿಬಿ ಅಧಿಕಾರಿಗಳೇ ಶಾಕ್​

    ಎಸಿಬಿ ದಾಳಿ: ಹೆಸ್ಕಾಂ ನೌಕರನ ಐಷಾರಾಮಿ ಮನೆಯಲ್ಲಿ ಲಿಫ್ಟ್​ ಕೂಡ ಇದೆ!

    ತಂದೆಯ ಶವದೊಂದಿಗೆ ಮೂರು ತಿಂಗಳು ಕಳೆದ ಮಗ: ಮನೆಯಲ್ಲಿದ್ದ ಪತ್ನಿಗೂ ತಿಳಿಯಲಿಲ್ಲ ಸಾವಿನ ವಿಷಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts