More

    ಕರೊನಾ ಸೋಂಕು ತಗುಲಿದ ಒಂದೇ ಗಂಟೆಯಲ್ಲಿ ಯುವ ವೈದ್ಯ ಸಾವು: ಒಂದೇ ದಿನ 50 ಡಾಕ್ಟರ್ಸ್​ ಡೆತ್​

    ನವದೆಹಲಿ: ಮಹಾಮಾರಿ ಕರೊನಾ ವೈರಸ್​ ವಿರುದ್ಧ ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಟ ನಡೆಸಿ ಲಕ್ಷಾಂತರ ಜನರ ಜೀವ ಉಳಿಸುವ ವೈದ್ಯರೇ ಕರೊನಾ ಮೃತ್ಯುಕೂಪಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಕೇವಲ ಒಂದೇ ದಿನದಲ್ಲಿ ದೇಶಾದ್ಯಂತ 50 ವೈದ್ಯರು ಸಾವಿಗೀಡಾಗಿರುವುದಾಗಿ ಮೆಡಿಕಲ್​ ಬೋರ್ಡ್​ ತಿಳಿಸಿದೆ.

    ಕೋವಿಡ್​ ರೋಗಿಗಳ ಪ್ರಾಣ ಉಳಿಸುವ ವಿಶೇಷ ವೈದ್ಯರಾಗಿ ದೆಹಲಿಯ ಗುರು ತೇಜ್​ ಬಹದ್ದೂರ್​ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ 26 ವರ್ಷದ ಅನಾಸ್​ ಮಜಾಹಿದ್​ ಅವರು ಕರೊನಾ ಪಾಸಿಟಿವ್​ ಆದ ಒಂದೇ ಗಂಟೆಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ವರ್ಷ ಕರೊನಾ ಎರಡನೇ ಅಲೆಗೆ ಮೃತಪಟ್ಟ 244 ವೈದ್ಯರಲ್ಲಿ ಅನಾಸ್​ ಅತಿ ಕಿರಿಯ ವೈದ್ಯರಾಗಿದ್ದಾರೆ.

    ಕಳೆದ ವರ್ಷ ಮೊದಲನೇ ಅಲೆಯ ಸಂದರ್ಭದಲ್ಲಿ 736 ವೈದ್ಯರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಒಟ್ಟಾರೆ ಸುಮಾರು 1000 ವೈದ್ಯರನ್ನು ಕರೊನಾದಿಂದಾಗಿ ಕಳೆದುಕೊಂಡು ವೈದ್ಯ ಲೋಕ ಬಡವಾಗಿದೆ. ಅನಾಸ್​ ಅವರು ಅಪ್ಪ-ಅಮ್ಮ ಮತ್ತು ನಾಲ್ವರು ಸಹೋದರರನ್ನು ಬಿಟ್ಟು ಅಗಲಿದ್ದಾರೆ.

    ಇದನ್ನೂ ಓದಿರಿ: ರಾಜ್ಯಕ್ಕೆ ಲಸಿಕೆ ಗುಡ್​ನ್ಯೂಸ್: ಧಾರವಾಡ, ಮಾಲೂರಲ್ಲಿ ಉತ್ಪಾದನೆ; ನೀಗಲಿದೆ ವ್ಯಾಕ್ಸಿನ್ ಕೊರತೆ

    ಮುಜಹಿದ್​ ಅವರು ಗಂಟಲು ಕೆರೆತದಂತಹ ಸಣ್ಣ ಲಕ್ಷಣಗಳನ್ನು ಹೊಂದಿದ್ದರು. ಆ್ಯಂಟಿಜೆನ್​ ಟೆಸ್ಟ್​ನಲ್ಲಿ ಕರೊನಾ ಪಾಸಿಟಿವ್​ ಆಗಿತ್ತು. ಇದಾದ ಒಂದೇ ಗಂಟೆಯಲ್ಲಿ ದಿಢೀರ್​ ರೋಗ ಲಕ್ಷಣ ಬೆಳವಣಿಗೆಯಲ್ಲಿ ತಲೆಯೊಳಗೆ ರಕ್ತಸ್ರಾವದಿಂದ ಕುಸಿದುಬಿದ್ದು ಮುಜಾಹಿದ್​ ಮೃತಪಟ್ಟಿದ್ದಾರೆ. ಅವರು ಕರೊನಾ ಲಸಿಕೆಯನ್ನು ಪಡೆದುಕೊಂಡಿರಲಿಲ್ಲ.

    ನಿಜಕ್ಕೂ ಇದು ಅಘಾತಕಾರಿಯಾಗಿದ್ದು, ಮುಜಾಹಿದ್​ಗೆ ಯಾವುದೇ ಕಾಯಿಲೆ ಇರಲಿಲ್ಲ ಎಂದು ಪಾಲಕರು ತಿಳಿಸಿದ್ದಾರೆ. ಇದು ಹೇಗೆ ಸಂಭವಿಸಿತು ಎಂದು ಈ ಕ್ಷಣಕ್ಕೂ ನಮ್ಮಿಂದ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಡಾ. ಆಮೀರ್​ ಸೊಹೈಲ್​ ಹೇಳಿದ್ದಾರೆ.

    ನಾನು ಸೇರಿದಂತೆ ನನ್ನ ಅನೇಕ ಸಹೋದ್ಯೋಗಿಗಳು ಇನ್ನೂ ಕರೊನಾ ಲಸಿಕೆ ತೆಗೆದುಕೊಂಡಿಲ್ಲ. ಕರ್ತವ್ಯದಲ್ಲಿ ನಿರತರಾಗಿದ್ದರಿಂದ ತೆಗೆದುಕೊಳ್ಳಲು ಸಮಯವಾಗಲಿಲ್ಲ. ಅಲ್ಲದೆ, ಲಸಿಕೆ ಪಡೆದುಕೊಳ್ಳುವಂತೆ ನಮ್ಮ ಹಿರಿಯ ಅಧಿಕಾರಿಗಳು ನಮಗೆ ಮಾಹಿತಿಯನ್ನು ನೀಡಿಲ್ಲ. ಮುಂದೆ ಕರೊನಾ ಲಸಿಕೆ ಪಡೆಯಲು ಯೋಜಿಸಿದ್ದೇವೆ ಎಂದು ಸೊಹೈಲ್​ ತಿಳಿಸಿದರು.

    ಸೊಹೈಲ್​ಗೂ ಸಹ ಕಳೆದ ತಿಂಗಳು ಕರೊನಾ ಸೋಂಕು ತಗುಲಿತ್ತು. ಸಣ್ಣ ಪ್ರಮಾಣ ಲಕ್ಷಣಗಳಿತ್ತು. ಇದೀಗ ಆರೋಗ್ಯವಾಗಿದ್ದಾರೆ. ಆದರೆ, ಮುಜಾಹಿದ್​ ಚೆನ್ನಾಗಿದ್ದರು. ಇದ್ದಕ್ಕಿದ್ದಂತೆ ಅವರು ಮೃತಪಟ್ಟಿರುವುದು ನಮಗೆಲ್ಲ ಆಘಾತಕಾರಿಯಾಗಿದೆ ಎಂದು ಸೋಹೈಲ್​ ತಿಳಿಸಿದ್ದಾರೆ.

    ಇದನ್ನೂ ಓದಿರಿ: ಸದ್ಯ ನಿರಾತಂಕ ಇನ್ನೂ ಇದೆ ಆತಂಕ: ಕರೊನಾದಿಂದ ವಿವಿಧ ದೇಶಗಳು ಹೈರಾಣ, ಕೆಲವೆಡೆ ಪರಿಸ್ಥಿತಿ ನಿಯಂತ್ರಣ..

    ಇನ್ನು ವೈದ್ಯಕೀಯ ಸಂಘದ ಪ್ರಕಾರ 244 ವೈದ್ಯರು ಈ ವರ್ಷ ಕರೊನಾದಿಂದ ಪ್ರಾಣ ಬಿಟ್ಟಿದ್ದಾರೆ. ನಿನ್ನೆ ಒಂದೇ ದಿನ 50 ವೈದ್ಯರು ಕೊನೆಯುಸಿರೆಳೆದಿದ್ದಾರೆ. 244ರಲ್ಲಿ ಬಿಹಾರದಿಂದ 69, ಉತ್ತರ ಪ್ರದೇಶ (34) ಮತ್ತು ದೆಹಲಿಯಿಂದ 27 ವೈದ್ಯರ ಸಾವಿನ ಪ್ರಕರಣಗಳು ವರದಿಯಾಗಿವೆ. ಈವರೆಗೂ ಕೇವಲ ಶೇ. 3 ರಷ್ಟು ವೈದ್ಯರು ಮಾತ್ರ ಕರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಇದೀಗ ಲಸಿಕೆ ಪಡೆಯುವುದರ ಮೇಲೆ ಹೆಚ್ಚಿನ ಗಮನ ಹರಿಸಲಾಗಿದೆ. (ಏಜೆನ್ಸೀಸ್​)

    ಭಾರತದಲ್ಲಿದೆ ಹೆಸರೇ ಇಲ್ಲದ ರೈಲು ನಿಲ್ದಾಣ: ಇದರ ಹಿಂದಿನ ಕರಾಳ ಕತೆ ಕೇಳಿದ್ರೆ ಬೆರಗಾಗ್ತೀರಾ!

    ತಿರುಪತಿಯ ಭಿಕ್ಷುಕನ ಮನೆಯಲ್ಲಿ ಕಂತೆ ಕಂತೆ ಹಣ: ಒಟ್ಟು ಮೊತ್ತ ಕೇಳಿ ದಂಗಾದ ಅಧಿಕಾರಿಗಳು!

    ಕೋವಿಡ್-19 ಎರಡನೇ ಅಲೆ ಬಂದಿದ್ದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts