More

    ಐಎನ್​ಎಸ್​ ರಣವೀರ್​ ನೌಕೆಯಲ್ಲಿ ಸ್ಫೋಟ: ಮೂವರು ನೌಕಾಪಡೆಯ ನಾವಿಕರ ಸಾವು

    ನವದೆಹಲಿ: ಭಾರತೀಯ ನೌಕಾಪಡೆಯ ಐಎನ್​ಎಸ್​ ರಣವೀರ್​ ನೌಕೆಯಲ್ಲಿ ಸಂಭವಿಸಿದ ಸ್ಫೋಟದಿಂದ ಗಂಭೀರವಾಗಿ ಗಾಯಗೊಂಡಿದ್ದ ಮೂವರು ನೌಕಾಪಡೆಯ ನಾವಿಕರು ಹುತಾತ್ಮರಾಗಿದ್ದಾರೆ.

    ಈ ದುರಾದೃಷ್ಟಕರ ಘಟನೆಯು ಮುಂಬೈನ ನೌಕಾನೆಲೆಯಲ್ಲಿ ನಡೆದಿದೆ. ಐಎನ್​ಎಸ್​ ರಣವೀರ್​ ನೌಕೆಯ ಆಂತರಿಕ ವಿಭಾಗದಲ್ಲಿ ಸಂಭವಿಸಿದ ಸ್ಫೋಟಕ್ಕೆ ಮೂವರು ಸಿಬ್ಬಂದಿಗಳು ಅಸುನೀಗಿದ್ದಾರೆ. ಆದರೆ, ಯಾವುದೇ ದೊಡ್ಡ ಪ್ರಮಾಣದಲ್ಲಿ ವಸ್ತು ಹಾನಿ ವರದಿಯಾಗಿಲ್ಲ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

    ನಿನ್ನೆ ಸಂಜೆ (ಜ.18) 4.30ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಆದರೆ, ಶಸ್ತ್ರಾಸ್ತ್ರಗಳು ಅಥವಾ ಮದ್ದುಗುಂಡುಗಳ ಸ್ಫೋಟದಿಂದ ಸಂಭವಿಸಿಲ್ಲ. ಈ ಬಗ್ಗೆ ನಿಖರ ಕಾರಣ ತಿಳಿಯಲು ತನಿಖಾ ಮಂಡಳಿಯನ್ನು ರಚಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

    ಹಡಗಿನಲ್ಲಿದ್ದ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗುವ ಮೂಲಕ ತ್ವರಿತವಾಗಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಎಂದು ಪ್ರಕಟಣೆ ತಿಳಿಸಿದೆ.

    ಐಎನ್​ಎಸ್​ ರಣವೀರ್ ನೌಕೆಯು 2021ರ ನವೆಂಬರ್​ನಿಂದ ಪೂರ್ವ ನೌಕಾ ಕಮಾಂಡ್‌ನಿಂದ ಕರಾವಳಿಯ ಕಾರ್ಯಾಚರಣೆಯ ನಿಯೋಜನೆಯಲ್ಲಿತ್ತು ಮತ್ತು ಶೀಘ್ರದಲ್ಲೇ ಅದು ಬೇಸ್ ಪೋರ್ಟ್‌ಗೆ ಮರಳಬೇಕಿತ್ತು. ರಣವೀರ್ ವರ್ಗದ ವಿಧ್ವಂಸಕಗಳಲ್ಲಿ ಐಎಸ್​ಎಸ್​ ರಣವೀರ್​ ಮೊದಲನೆಯದು. ಏಪ್ರಿಲ್ 21, 1986 ರಂದು ಭಾರತೀಯ ನೌಕಾಪಡೆಗೆ ಇದನ್ನು ನಿಯೋಜಿಸಲಾಯಿತು. ಈ ಹಡಗುಗಳನ್ನು ಹಿಂದಿನ ಸೋವಿಯತ್ ಒಕ್ಕೂಟದಲ್ಲಿ ನಿರ್ಮಿಸಲಾಯಿತು. (ಏಜೆನ್ಸೀಸ್​)

    ಧನುಷ್​-ಐಶ್ವರ್ಯಾ ನಡುವೆ ನಡೆಯುತ್ತಿತ್ತು ಜಗಳ: ಡಿವೋರ್ಸ್​ಗೆ ಅಸಲಿ ಕಾರಣ ಬಿಚ್ಚಿಟ್ಟ ಸ್ನೇಹಿತರು!

    ಅಭ್ಯರ್ಥಿಗಳ ಕ್ರಿಮಿನಲ್ ಮಾಹಿತಿ, ಅರ್ಜಿ ವಿಚಾರಣೆಗೆ ಒಪ್ಪಿಗೆ: ವೆಬ್​ಸೈಟ್​ನಲ್ಲಿ ಪ್ರಕಟಿಸುವುದನ್ನು ಖಾತ್ರಿಪಡಿಸಿಕೊಳ್ಳಲು ನಿರ್ದೇಶನ ನೀಡುವಂತೆ ಸುಪ್ರೀಂಗೆ ಮನವಿ

    ಮೇ-ಜೂನ್​ನಲ್ಲಿ ಜಿಪಂ-ತಾಪಂ ಚುನಾವಣೆ?: ಕ್ಷೇತ್ರ ಪುನರ್ ವಿಂಗಡಣೆ ಮಾರ್ಗಸೂಚಿಗೆ ಸರ್ಕಾರದ ಒಪ್ಪಿಗೆ ಬಾಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts