More

    ಮಳೆಹಾನಿಗೀಡಾದ ಬೆಳೆಗೆ ಪರಿಹಾರ ಶೀಘ್ರ: ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿಕೆ, ಹಾನಿ ಪ್ರದೇಶಕ್ಕೆ ಭೇಟಿ

    ಕೋಲಾರ: ಜಿಲ್ಲೆಯಲ್ಲಿ ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರಾಗಿ, ಹೂಕೋಸು ಮತ್ತಿತರ ಬೆಳೆಗಳಿಗೆ ಹಾನಿಯಾಗಿದ್ದು, ಪರಿಹಾರ ಒದಗಿಸಲಾಗುವುದು ಎಂದು ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ತಿಳಿಸಿದರು.

    ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಹೊಲ, ತೋಟಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿ, ಜಿಲ್ಲಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ 250 ಹೆಕ್ಟೇರ್ ತೋಟಗಾರಿಕೆ ಮತ್ತು ಕೃಷಿ ಬೆಳೆ ನಷ್ಟವಾಗಿದೆ. ಮುಖ್ಯವಾಗಿ ರಾಗಿ ಹೆಚ್ಚಾಗಿ ಹಾನಿಗೊಳಗಾಗಿದೆ. ಇದಕ್ಕೆ ಪರಿಹಾರ ನೀಡಲು ಸೂಚಿಸಿದ್ದೇನೆ ಎಂದರು.

    ಮಳೆಗೆ ಮನೆಗಳು ಸಹ ಬಿದ್ದು ಹಾನಿಯಾಗಿದ್ದು, ಅಂತಹ ಕುಟುಂಬಗಳಿಗೆ ಸಹಾಯ ವಾಡಿ ಅವರ ಮನೆಗಳನ್ನು ಮೊದಲಿನ ರೀತಿಯಲ್ಲಿ ಸರಿಪಡಿಸುವುದಕ್ಕೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಮಳೆ ಹಾನಿ ಬಗ್ಗೆ ಎಲ್ಲ ಮಾಹಿತಿ ಪಡೆದಿದ್ದಾರೆ. ಕೃಷಿ, ತೋಟಗಾರಿಕೆ ಮತ್ತು ಗ್ರಾಮಲೆಕ್ಕಿಗರು ಸೇರಿ ಜಂಟಿ ಸಮೀಕ್ಷೆ ನಡೆಸಿ ನಷ್ಟಪರಿಹಾರ ಒದಗಿಸಲು ಕ್ರಮವಹಿಸಲಿದ್ದಾರೆ. ಮಳೆಯಿಂದ ಆದ ನಷ್ಟಕ್ಕೆ ಕೂಡಲೇ ಪರಿಹಾರ ನೀಡಲಾಗುವುದು. ಯರಗೋಳ್ ಜಲಾಶಯ ತುಂಬಿರುವುದರಿಂದ ಉಳಿಕೆ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಸಚಿವರಿಗೆ ಒತ್ತಾಯಿಸಿದ್ದೇನೆ ಎಂದರು.

    ಇರಗಸಂದ್ರದ ರಾಮಕೃಷ್ಣಪ್ಪ ಎಂಬ ರೈತನ 2 ಎಕರೆ ರಾಗಿ ಬೆಳೆ ಮಳೆಯಿಂದ ಸಂಪೂರ್ಣ ಜಲಾವೃತವಾಗಿದ್ದು, ಅದಕ್ಕೆ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಹೂಹಳ್ಳಿಯಲ್ಲಿ ನಷ್ಟವಾದ ಬೆಳೆಗಳ ವೀಕ್ಷಣೆ ವಾಡಿದರು. ವಿಟ್ಟಪ್ಪನ ಹಳ್ಳಿಯಲ್ಲಿ ರಾಜಕಾಲುವೆ ತುಂಬಿ ಹರಿಯುತ್ತಿದ್ದು ಇದರಿಂದ ರಸ್ತೆಯಲ್ಲಿ ಜನರು ಓಡಾಡಲು ಹರಸಾಹಸ ಪಡುತ್ತಿದ್ದಾರೆ. ಅದಕ್ಕಾಗಿ ಹೊಸ ರಸ್ತೆಯನ್ನು ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಯಾನಾದಹಳ್ಳಿಯಲ್ಲಿ ಮಳೆಗೆ 29 ಮನೆಗಳು ಹಾನಿಗೊಳಗಾಗಿದ್ದು ಸೂಕ್ತ ಪರಿಹಾರ ಒದಗಿಸಲಾಗುತ್ತದೆ ಎಂದು ತಿಳಿಸಿದರು.

    ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಪಂ ಸಿಇಒ ಉಕೇಶ್ ಕುವಾರ್, ಉಪವಿಭಾಗಾಧಿಕಾರಿ ಆನಂದ್ ಪ್ರಕಾಶ್ ಮೀನಾ, ತಹಸೀಲ್ದಾರ್ ನಾಗರಾಜ್, ತೋಟಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ ಇತರರು ಇದ್ದರು.

    ಸಿಎಂ ಗಮನಕ್ಕೆ ತರುವೆ: ಜಿಲ್ಲೆಯಲ್ಲಿ ಮಳೆಯಿಂದ ರಾಜಕಾಲುವೆ ಮತ್ತು ಒಟ್ಟಾರೆ 120 ಕಿ.ಮೀ ರಸ್ತೆ ಹಾನಿಗೀಡಾಗಿದೆ. ಇದನ್ನು ಮುಖ್ಯಮಂತ್ರಿ ಬಸವರಾಜ ಬೊವ್ಮಾಯಿ ಅವರ ಗಮನಕ್ಕೆ ತರಲಾಗುವುದು. ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಮಳೆ ಪ್ರವಾಣ ಕಡಿಮೆಯಾದಲ್ಲಿ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಮುನಿರತ್ನ ತಿಳಿಸಿದರು.

    ಸವಾವೇಶ ಮಾಡಿದ್ರೆ ಸರ್ಕಾರ ಬರುತ್ತಾ?: ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಪ್ರಶ್ನೆ

    ಕೋಲಾರ: ಜನರನ್ನು ಕರೆತಂದು ಕಾರ್ಯಕ್ರಮ ಮಾಡಿದ ಮಾತ್ರಕ್ಕೆ ಸರ್ಕಾರ ಬರುತ್ತದೆ ಎನ್ನುವುದಾದರೆ ಯಾರು ಬೇಕಾದರೂ ಸರ್ಕಾರ ರಚನೆ ವಾಡಿಬಿಡುತ್ತಿದ್ದರು. ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಮಾಡಿ ಇಂತಹದೇ ಭ್ರಮೆಯಲ್ಲಿ ಕಾಂಗ್ರೆಸ್ಸಿಗರು ತೇಲುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ತಿಳಿಸಿದರು.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ವಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹ ನೈಸ್‌ಜಂಕ್ಷನ್ ಬಳಿ ಸಮಾವೇಶವೊಂದನ್ನು ವಾಡಿ, ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳಿದ್ದರು. ಅದೇ ರೀತಿ ಕಾಂಗ್ರೆಸ್ಸಿಗರು ಸಿದ್ದರಾಮೋತ್ಸವಕ್ಕೆ ಜನರನ್ನು ಕರೆದುಕೊಂಡು ಹೋಗಿ ಇಷ್ಟು ಜನರ ಬೆಂಬಲ ನಮಗಿದೆ ಎಂದು ತೋರಿಸಿಕೊಂಡಿದ್ದಾರೆ. ಆದರೆ ಆ ಜನರನ್ನು ಯಾರು ಎಷ್ಟು ಬಸ್‌ಗಳನ್ನು ಒದಗಿಸಿ ಕರೆದುಕೊಂಡು ಹೋಗಿದ್ದರು, ಅವರ ಖರ್ಚುವೆಚ್ಚ ಯಾರು ನೋಡಿಕೊಂಡರು ಎಂಬ ಬಗ್ಗೆ ಸಂಪೂರ್ಣ ವಾಹಿತಿ ನಮ್ಮಬಳಿ ಇದೆ. ಇಂತಹ ಸವಾವೇಶಗಳಿಗೆ ಬರುವವರೆಲ್ಲ ಆಯಾ ಪಕ್ಷಕ್ಕೆ ಮತಹಾಕುವುದಿಲ್ಲ. ಜನರ ಒಲವು, ಅಭಿಪ್ರಾಯ ಮತ್ತು ತೀರ್ಪು ಬೇರೆಯದ್ದೇ ಆಗಿರುತ್ತದೆ ಎಂದು ವಿಶ್ಲೇಷಿಸಿದರು.

    ಸಿದ್ದರಾಮೋತ್ಸವಕ್ಕೆ ಬಿಜೆಪಿ ಹೆದರುವ ಪ್ರಶ್ನೆಯೇ ಇಲ್ಲ. ಅವರು ಸಮಾವೇಶ ಮಾಡಿದ್ದಕ್ಕೆ ನಮಗೇನೂ ಹೊಟ್ಟೆ ಉರಿಯಿಲ್ಲ. ಇಂತಹ ಎಷ್ಟು ಸಮಾವೇಶಗಳನ್ನು ಬೇಕಾದರೂ ಅವರು ವಾಡಿಕೊಳ್ಳಲಿ. ನಮ್ಮ ಪಕ್ಷ ಸದೃಢವಾಗಿದ್ದು, 2023ರ ಚುನಾವಣೆಯಲ್ಲಿ ನಾವೇ ಗೆದ್ದು ಅಧಿಕಾರ ನಡೆಸುತ್ತೇವೆ ಎಂದರು.

    ರಾಷ್ಟ್ರದ್ವಜ ಎಲ್ಲರ ಮನೆ ಮೇಲೆ ಹಾರಲಿ ಎಂಬುದು ಬಿಜೆಪಿ ಸಂಕಲ್ಪ. ಇದರಲ್ಲಿ ತಪ್ಪೇನಿದೆ? ರಾಷ್ಟ್ರದ್ವಜ ಹಾರಿಸುವ ಹಕ್ಕು ಪ್ರತಿಯೊಬ್ಬ ಭಾರತೀಯನಿಗೆ ಇದೆ ಎಂದು ಹರ್ ಘರ್ ತಿರಂಗಾ ಅಭಿಯಾನದ ಕುರಿತು ಸಮರ್ಥಿಸಿಕೊಂಡರು.

    ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್, ಕುಡಾ ಅಧ್ಯಕ್ಷ ವಿಜಯಕುವಾರ್ ಇತರರು ಇದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts