More

    ಕರೊನಾಗೆ ಕ್ಯಾರೆ ಎನ್ನದ ಕಾಶ್ಮೀರಿಗಳು.. ಒಟ್ನಲ್ಲಿ ರಹವಾಸಿ ಪ್ರಮಾಣಪತ್ರ ಬೇಕು ಅಷ್ಟೇ…

    ಶ್ರೀನಗರ: ಕಾಶ್ಮೀರದಾದ್ಯಂತ COVID-19 ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿರುವ ಮಧ್ಯೆಯೇ, ಸಾಮಾಜಿಕ ಅಂತರ ಪಾಲನೆಯ ನಿಯಮಗಳನ್ನು ಗಾಳಿಗೆ ತೂರಿ ಇಲ್ಲಿಯ ನಿವಾಸಿಗಳು ರಹವಾಸಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಲು ತಹಸೀಲ್ದಾರ್ ಕಚೇರಿ ಮುಂದೆ ಮುಗಿಬಿದ್ದಿದ್ದಾರೆ.
    ಸಂಬಲ್, ಅಜಾಸ್, ಹಾಜಿನ್ ಮತ್ತು ಗುರೆಜ್​​​ನಲ್ಲಿನ ತಹಸಿಲ್ ಕಚೇರಿಗಳಿಗೆ ಪ್ರತಿದಿನ ಅಂದಾಜು 500 – 600 ಅರ್ಜಿದಾರರು ಬರುತ್ತಿದ್ದು, ತೀವ್ರ ಒತ್ತಡ ಅನುಭವಿಸುವಂತಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
    ಕರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಮಾರ್ಗಸೂಚಿಗಳು ಮತ್ತು ಸಾಮಾಜಿಕ ಅಂತರ ಮಾನದಂಡಗಳನ್ನು ಅನುಸರಿಸುವಂತೆ ಜನರಿಗೆ ತಿಳಿಹೇಳುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಸಹಾಯಕರಾಗಿದ್ದಾರೆ.

    ಇದನ್ನೂ ಓದಿ: ಬಂಧಿತ ಪಾಕಿಗೆ ಕೋವಿಡ್ ಪರೀಕ್ಷೆ

    ಮತ್ತೊಂದೆಡೆ, ಅರ್ಜಿದಾರರು, ಹೆಚ್ಚಾಗಿ ವಿದ್ಯಾವಂತ ಯುವಕರು ಕೋವಿಡ್ ಬಿಕ್ಕಟ್ಟಿನ ಮಧ್ಯೆಯೇ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಅಗತ್ಯವಾಗಿರುವ ರಹವಾಸಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಲು ಕ್ಯೂ ನಿಲ್ಲುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳುತ್ತಿದ್ದಾರೆ.
    “ಸುತ್ತಲೂ ಇರುವ ಗದ್ದಲ ನೋಡಲು ತುಂಬ ಭಯಾನಕವಾಗಿದೆ. ಸೋಂಕಿಗೆ ತುತ್ತಾಗಬಹುದೆಂಬ ಭಯದ ಮಧ್ಯೆಯೇ ದೀರ್ಘ ಸರತಿ ಸಾಲಿನಲ್ಲಿ ನಿಲ್ಲುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ. ಜಿಲ್ಲೆಯಲ್ಲಿ ಆನ್​ಲೈನ್​​ನಲ್ಲಿ ಅರ್ಜಿ ಸಲ್ಲಿಸುವ ಸೌಲಭ್ಯವೂ ಇಲ್ಲ ”ಎಂದು ಲಾವ್​​ದಾರಾ ಗ್ರಾಮದ ಕಾಲೇಜು ವಿದ್ಯಾರ್ಥಿ ಮುಬಾಶೀರ್ ಹುಸೇನ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
    COVID19 ಸುರಕ್ಷತಾ ನಿಯಮಾವಳಿಗಳನ್ನು ಅರ್ಜಿದಾರರು ಅನುಸರಿಸುತ್ತಿಲ್ಲ. ಸಾಮಾಜಿಕ ಅಂತರ ಪಾಲನೆ, ಫೇಸ್ ಮಾಸ್ಕ್ ಧರಿಸುವಿಕೆ.. ಈ ಯಾವುದೂ ಇಲ್ಲಿ ಪಾಲನೆಯಾಗುತ್ತಿಲ್ಲ ಎಂಬುದು ಇನ್ನೊಬ್ಬ ವಿದ್ಯಾರ್ಥಿಯ ಅಳಲು.

    ಇದನ್ನೂ ಓದಿ: ಫೇಸ್​​ಬುಕ್​ನಲ್ಲಿ ನಕಲಿ ಪೇಜ್ ಸೃಷ್ಟಿಸಿ ರಾಷ್ಟ್ರವಿರೋಧಿ ಚಟುವಟಿಕೆ ನಡೆಸುತ್ತಿದ್ದವ ಏನಾದ?

    ” ಅರ್ಜಿ ಭರ್ತಿ ಮಾಡುವುದರಿಂದ ಹಿಡಿದು ಶುಲ್ಕ ಪಾವತಿಯವರೆಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಮೂರು ದಿನಗಳು ಬೇಕಾಗುತ್ತದೆ.
    ಜಿಲ್ಲೆಯ ಯಾವುದೇ ತಹಸಿಲ್ ಕಚೇರಿಗಳಲ್ಲಿ ಇಂಟರ್ನೆಟ್ ಸೌಲಭ್ಯವಿಲ್ಲದ ಕಾರಣ ಆನ್‌ಲೈನ್‌ನಲ್ಲಿ ಈ ಸೌಲಭ್ಯವನ್ನು ಒದಗಿಸುವಲ್ಲಿ ಅಸಹಾಯಕರಾಗಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
    ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿರುವುದರಿಂದ ಇಲ್ಲಿ ರಹವಾಸಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ.
    COVID19 ನಿರ್ದಿಷ್ಟ ಮಾರ್ಗಸೂಚಿಗಳನ್ನು ಅನುಸರಿಸದ ಕಾರಣ ಇಲ್ಲಿ ಜನರಿಗೆ ವಿಪರೀತ ಹಾನಿ ಉಂಟಾಗಬಹುದು ಎಂದು ರಹವಾಸಿ ಪ್ರಮಾಣಪತ್ರಗಳ ವಿತರಣೆ ಕಾರ್ಯ ನಿರ್ವಹಿಸುತ್ತಿರುವ ಕಂದಾಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅತ್ಯಾಚಾರಿ ಪಾದ್ರಿ ಆಕೆಯನ್ನು ಮದುವೆಯಾಗಿ, ಮಗು ನೋಡಿಕೊಳ್ಳುವೆ ಎಂದು ಕೋರ್ಟ್ ಮೊರೆಹೋದ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts