More

    ಗುಣಮಟ್ಟದ ವಿದ್ಯುತ್ ಪೂರೈಕೆಗೆ ಆಗ್ರಹ

    ಅಳವಂಡಿ: ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಗುಣಮಟ್ಟದ ವಿದ್ಯುತ್‌ಗಾಗಿ ಗ್ರಾಮದ ಜೆಸ್ಕಾಂ ಕಛೇರಿಗೆ ತೆರಳಿ ರೈತರು ಎಸ್‌ಓ ಭೀಮಾನಾಯಕ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

    ಇದನ್ನೂ ಓದಿ:http://ಗುಣಮಟ್ಟದ ವಿದ್ಯುತ್ ಪೂರೈಕೆಗೆ ಆಗ್ರಹ

    ಕೆಲ ದಿನಗಳಿಂದ ರೈತರ ಕೃಷಿ ಚಟುವಟಿಕೆಗೆ ನೀಡುತ್ತಿರುವ ವಿದ್ಯುತ್‌ನಲ್ಲಿ ಭಾರಿ ಏರಿಳಿತ ಉಂಟಾಗುತ್ತಿದೆ. ವಿದ್ಯುತ್ ಲೈನಗಳು ಓವರಲೋಡ ಆಗಿ ಪದೆ ಪದೆ ವಿದ್ಯುತ್ ನಿಲುಗಡೆಯಾಗುತ್ತಿದೆ.

    ಹಾಗೂ ಪೂರೈಕೆಯಾಗುತ್ತಿರುವ ವಿದ್ಯುತ್ ಕೂಡ ವೋಲ್ಟೇಜ ಕಡಿಮೆ ಇರುವುದರಿಂದ ಬೋರವೆಲ್ ಮೋಟಾರಗಳು ಪ್ರಾರಂಭವಾಗುತ್ತಿಲ್ಲ, ಆರಂಭವಾದರು ಪರಿಕರಗಳು ಸುಡುತ್ತಿವೆ.

    ರೈತರು ಜಮೀನುಗಳಿಗೆ ನೀರು ಹರಿಸಲು ಸಾದ್ಯವಾಗುತ್ತಿಲ್ಲ ಹಾಗೂ ಹಗಲಲ್ಲಿ ನೀಡುವ ವಿದ್ಯುತ್ ಬದಲಿಗೆ ರಾತ್ರಿ ಕೊಟ್ಟರು ಸಮಸ್ಯೆಯಾಗುತ್ತಿದೆ. ಬೆಳೆಗಳು ತೇವಾಂಶ ಕೊರತೆಯಿಂದ ಬಾಡಿ ರೈತರು ನಷ್ಟ ಅನುಭವಿಸುವಂತಾಗಿದೆ.

    ಇದಕ್ಕಾಗಿ ವಿದ್ಯುತ್‌ನ್ನು ಸಮರ್ಪಕವಾಗಿ ಪೂರೈಸಿ, ಅಥವಾ ಇನ್ನೊಂದು ಬೇರೆ ಲೈನ, ಪೀಡರ್ ಸ್ಥಾಪಿಸಿ ರೈತರಿಗೆ ಅನೂಕೂಲ ಮಾಡಿಕೊಡಬೇಕು ಎಂದು ರೈತರು ಆಗ್ರಹಿಸಿದರು. ತುರ್ತಾಗಿ ಕ್ರಮ ಕೈಗೊಂಡು ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

    ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಮಾತನಾಡಿದ ಜೆಸ್ಕಾಂನ ಎಸ್‌ಓ ಭೀಮಾನಾಯಕ, ಕೆಲ ತಾಂತ್ರಿಕ ತೊಂದರೆಯಿಂದ ಸಮಸ್ಯೆಯಾಗಿದೆ ಇದನ್ನು ಪರಿಹರಿಸಿ ರೈತರಿಗೆ ವಿದ್ಯುತ್ ಪೂರೈಸಲಾಗುವುದು ಎಂದರು.

    ರೈತರಾದ ಚನ್ನಪ್ಪ ಮುತ್ತಾಳ, ಗೂಳರಡ್ಡಿ ತವದಿ, ಹನುಮಂತಪ್ಪ ಉಂಕಿ, ರಮೇಶ ಕವಲೂರು, ವೀರೇಶ ಮಡಿವಾಳ, ಪಕೀರಪ್ಪ ಹರಿಜನ, ಸಿದ್ದಪ್ಪ ದೇವರಮನಿ, ಹನುಮರಡ್ಡಿ ದಾಸರಡ್ಡಿ, ಪ್ರವೀಣ, ಅಂದಪ್ಪ, ಸಂಗಪ್ಪ, ಅರುಣ, ನಿಂಗಪ್ಪ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts