More

    ಕರಾವಳಿ ಅಭಿವೃದ್ದಿಯಿಂದ ಕರ್ನಾಟಕದ ಜಿಡಿಪಿಗೆ ಕೊಡುಗೆ -ಕ್ಯಾಪ್ಟನ್ ಬ್ರಿಜೇಶ್ ಚೌಟ



    ಮಂಗಳೂರು : ದ.ಕ.ಜಿಲ್ಲೆಯನ್ನು ಪ್ರೀತಿಸುವವರು ತುಂಬಾ ಜನರಿದ್ದಾರೆ, ಯುವಕರಿಗೆ ಉದ್ಯೋಗ ಸೃಷ್ಟಿಸಲು ಹಾಗೂ ಉದ್ಯಮ ಪ್ರಾರಂಭಿಸಲು ಜನಪ್ರತಿನಿಧಿಗಳ ಸಹಕಾರ ಅಗತ್ಯ. ವಿಷಯ ಪರಿಣಿತರ, ತಜ್ಞರ ಸಲಹೆ ಪಡೆದು ಸಮಗ್ರವಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಅಭಿವೃದ್ದಿ ಪಡಿಸುತ್ತೇನೆಂದು ಪುತ್ತೂರಿನಲ್ಲಿ ನಡೆದ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಲೋಕಸಭಾ
    ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ವಿಶ್ವಾಸ ವ್ಯಕ್ತಪಡಿಸಿದರು.
    ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಸ್ತೆ ಅಭಿವೃದ್ದಿ ಹಾಗೂ ರೈಲುಮಾರ್ಗ ಅಭಿವೃದ್ದಿ ಪಡಿಸಲು ಶಿರಾಡಿ ಘಾಟ್ ಪರಿಸರ ಮತ್ತು ಕಾನೂನು. ಸವಾಲಾಗಿದೆ, ಮಂಗಳೂರು-ಬೆಂಗಳೂರು ಅಭಿವೃದ್ದಿಯಾದರೆ ಬಂದರು ಅಭಿವೃದ್ದಿಯಾಗುತ್ತದೆ. ಕರಾವಳಿ ಅಭಿವೃದ್ದಿಯಿಂದಾಗಿ ಕರ್ನಾಟಕದ ಜಿಡಿಪಿಗೆ ತನ್ನದೇ ಆದ ಕೊಡುಗೆ ನೀಡಲಿದೆ ಎಂದು ಅವರು ಹೇಳಿದರು.
    ಮೈಸೂರು-ಕೊಡಗು ಸಂಸದ ಪ್ರತಾಪ್‌ಸಿಂಹ, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಹರೀಶ್ ಪೂಂಜ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್ , ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಸಾಜ ರಾಧಾಕೃಷ್ಣ ಆಳ್ವ ,
    ಎಂಎಲ್‌ಸಿ ಪ್ರತಾಪಸಿಂಹ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts