More

    ಕರೋನಾ ದಂಡ ವಸೂಲಿ ಗೋಲ್ಮಾಲ್: ರಶೀದಿಗೆ ನೋಂದಣಿ ಸಂಖ್ಯೆಯೇ ಇಲ್ಲ

    ಪುತ್ತೂರು:  ಕರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ನಿಯಮ ಮೀರಿದವರ ವಿರುದ್ದ ದಂಡ ಪ್ರಯೋಗ ನಡೆಸಲು ಮುಂದಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಪುತ್ತೂರು ನಗರಸಭೆಯಿಂದ ದಂಡ ವಸೂಲಿ ಮಾಡುತ್ತಿದ್ದು, ಅಧಿಕಾರಿಗಳು ನೀಡುವ ದಂಡ ರಶೀದಿಗೆ ನೋಂದಣಿ ಸಂಖ್ಯೆಯೇ ಇಲ್ಲ !

    ನಗರಸಭಾ ಆರೋಗ್ಯ ನಿರೀಕ್ಷಕಿ ಶ್ವೇತಾಕಿರಣ್ ಹಾಗೂ ರಾಮಚಂದ್ರ ನೇತೃತ್ವದ ಕೋವಿಡ್ ಮಾರ್ಷಲ್‌ಗಳು ನಗರದಲ್ಲಿ ಪ್ರತೀ ದಿನ ಸಂಚರಿಸಿ ಮಾಸ್ಕ್ ಧರಿಸದಿರುವ, ಕೋವೀಡ್ ನಿಯಮ ಮೀರಿ ಕಾರ್ಯಾಚರಿಸುವವರಿಂದ ದಂಡ ವಸೂಲಿ ಮಾಡುತ್ತಿದ್ದಾರೆ. ಆದರೆ ನಗರಸಭೆ ಹೆಸರಲ್ಲಿ ನೀಡುವ ದಂಡ ರಶೀದಿಗೆ ನೋಂದಣಿ ಸಂಖ್ಯೆ ಇಲ್ಲದಿರುವುದರಿಂದ ದಂಡದ ಮೊತ್ತ ನಗರಸಭೆ ಬೊಕ್ಕಸಕ್ಕೆ ಸೇರುವ ಬದಲು ಕೋವಿಡ್ ಮಾರ್ಷಲ್‌ಗಳ ಜೇಬಿಗೆ ಸೇರುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ.

    ಜೆರಾಕ್ಸ್ ಪ್ರತಿ ವಿತರಣೆ:ಪುತ್ತೂರು ನಗರಸಭೆಯ ಕೋವಿಡ್ ಮಾರ್ಷಲ್‌ಗಳು ದಂಡ ರಶೀದಿಯಾಗಿ ಸಾರ್ವಜನಿಕರಿಗೆ ಜೆರಾಕ್ಸ್ ಪ್ರತಿ ವಿತರಣೆ ಮಾಡುತ್ತಿದ್ದಾರೆ. ಸಾರ್ವಜನಿಕರು ನೋಂದನಿ ಸಂಖ್ಯೆ ಇರುವ ಮೂಲ ಪ್ರತಿ ಬೇಕು ಎಂದರೆ ನಗರಸಭೆಗೆ ಬಂದು ಪಡೆದುಕೊಳ್ಳುವಂತೆ ಸೂಚಿಸಲಾಗುತ್ತದೆ. ಆದರೆ ಯಾವೊಬ್ಬ ಸಾರ್ವಜನಿಕನು ನಗರಸಭೆಗೆ ಭೇಟಿ ನೀಡಿ ಮೂಲ ಪ್ರತಿ ಪಡೆಯುವ ಗೋಜಿಗೆ ಹೋಗುವುದು ವಿರಳ. ಇದರ ಸಂಪೂರ್ಣ ಲಾಭ ಪಡೆಯುವ ಅಧಿಕಾರಿಗಳು ದಂಡ ಮೊತ್ತವನ್ನು ಜೇಬಿಗಿರಿಸಿಕೊಳ್ಳುತ್ತಿರುವ ಅನುಮಾನ ಕಾಡುತ್ತಿದೆ.

    ನಗರಸಭಾ ವ್ಯಾಪ್ತಿಯಲ್ಲಿ ದಂಡ ಪಾವತಿಗೆ ನೋಂದಣಿ ಸಂಖ್ಯೆ ರಹಿತ ರಶೀದಿ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸಂಶಯವಿದ್ದಲ್ಲಿ ದಂಡ ಪಾವತಿಸಿದವರು ನಗರಸಭೆಗೆ ಬಂದು ದಂಡ ಪಾವತಿಯಾಗಿದೆಯೇ ಎಂದು ಪರಿಶೀಲಿಸಿಕೊಳ್ಳಬಹುದು
    -ರೂಪಾ ಶೆಟ್ಟಿ, ಪೌರಾಯುಕ್ತರು
    ಪುತ್ತೂರು ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts