More

    ಗಾಂಧೀಜಿ ಪ್ರತಿಮೆಗೆ ಬುಲೆಟ್ ಪ್ರೂಫ್ ಗ್ಲಾಸ್ ಅಳವಡಿಸಿ: ಪುತ್ತೂರು ಗಾಂಧಿಕಟ್ಟೆ ಸಮಿತಿ ಮನವಿ

    ಪುತ್ತೂರು: ಕಳೆದ ಬುಧವಾರ ರಾತ್ರಿ ಪುತ್ತೂರು ಗಾಂಧಿ ಕಟ್ಟೆಯಲ್ಲಿರುವ ಗಾಂಧೀಜಿ ಅವರ ಪ್ರತಿಮೆಯಲ್ಲಿದ್ದ ಕನ್ನಡಕವನ್ನು ತಲೆಯ ಮೇಲಿರಿಸಿ, ತಲೆಗೆ ಹಳೆಯ ಬಟ್ಟೆಯನ್ನಿಟ್ಟು ವಿಕೃತಿ ಮೆರೆದಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. ಖಾಸಗಿ ಕಟ್ಟಡದ ಸಿಸಿ ಕ್ಯಾಮರಾ ದಾಖಲೆ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ.

    ಗಾಂಧೀಜಿ ಪ್ರತಿಮೆ ಮೇಲೆ ದೂಳು ಹಾಗೂ ಒಣ ಕಸಗಳು ಬಿದ್ದಿದ್ದು, ಗಾಂಧೀಜಿ ಅವರ ಅಭಿಮಾನದಿಂದ ಬಟ್ಟೆಯಿಂದ ಪ್ರತಿಮೆ ಒರೆಸಿದ್ದೇನೆ, ಗಾಂಧಿ ಪ್ರತಿಮೆಯ ಮುಖ, ಕಣ್ಣು ಹಾಗೂ ಕನ್ನಡಕ್ಕ ದೂಳು ತುಂಬಿದ್ದರಿಂದ ಕನ್ನಡಕ ತೆಗೆದು ಒರೆಸಿದ್ದೇನೆ, ಒರಸಿದ ನಂತರ ಬಟ್ಟೆ ಹಾಗೂ ಕನ್ನಡಕವನ್ನು ಪ್ರತಿಮೆಯಲ್ಲೇ ಇಟ್ಟು ಬಂದಿರುವುದಾಗಿ ಪೊಲೀಸ್ ವಿಚಾರಣೆಯಲ್ಲಿ ಮಾನಸಿಕ ಅಸ್ವಸ್ಥ ಮಾಹಿತಿ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಗಾಂಧೀಜಿ ಪ್ರತಿಮೆಗೆ ಪದೇಪದೆ ಅವಮಾನ ಆಗುತ್ತಿರುವ ಹಿನ್ನೆಲೆ ಪ್ರತಿಮೆಯ ಸುತ್ತ ಬುಲೆಟ್‌ಫ್ರೂಫ್ ಗ್ಲಾಸ್ ಅಳವಡಿಸಬೇಕು ಎಂದು ಪುತ್ತೂರು ಗಾಂಧಿಕಟ್ಟೆ ಸಮಿತಿ ವತಿಯಿಂದ ಪುತ್ತೂರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಗಾಂಧಿ ಕಟ್ಟೆ ಸಮಿತಿ ಪದಾಧಿಕಾರಿಗಳಾದ ಕೃಷ್ಣಪ್ರಸಾದ್ ಆಳ್ವ, ಕೆ.ಎಚ್.ದಾಸಪ್ಪ ರೈ, ಸೀತಾರಾಮ ರೈ, ಸಯ್ಯದ್ ಕಮಾಲ್ ಮತ್ತು ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts