More

    ಪಂಜಾಬ್: ಮೊಹಾಲಿ ಮಹಾನಗರ ಪಾಲಿಕೆಯೂ ಕಾಂಗ್ರೆಸ್ ಪಾಲು

    ಚಂಡೀಗಢ: ಪಂಜಾಬ್​ನ ಏಳೂ ಮಹಾನಗರ ಪಾಲಿಕೆಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಬೆನ್ನಲ್ಲೇ, ಕಾಂಗ್ರೆಸ್, ಮೊಹಾಲಿ ಮಹಾನಗರ ಪಾಲಿಕೆಯಲ್ಲೂ ಬಹುಮತ ಸಾಧಿಸಿದೆ. ಈ ಮುನ್ನವೂ ಕಾಂಗ್ರೆಸ್​ ಆಡಳಿತ ಇದ್ದ ಮೊಹಾಲಿ ಪಾಲಿಕೆಯ ಒಟ್ಟು 50 ವಾರ್ಡ್​ಗಳಲ್ಲಿ 37 ಕಾಂಗ್ರೆಸ್ ಪಾಲಾಗಿವೆ. ಉಳಿದ ಹದಿಮೂರು ವಾರ್ಡ್​ಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ.

    ಬುಧವಾರ ನಡೆದ ಮತ ಎಣಿಕೆಯ ನಂತರ ಹೋಶೈರಪುರ್, ಕಪುರ್ತಲಾ, ಅಭೋಹರ್, ಪಠಾಣಕೋಟ್, ಬಟಲ, ಮತ್ತು ಬಟಿಂಡಾ ಮಹಾನಗರ ಪಾಲಿಕೆಗಳು ಕಾಂಗ್ರೆಸ್​ ಕೈಸೇರಿದ್ದವು. ಮೋಘಾ ಪಾಲಿಕೆಯಲ್ಲಿ ಸ್ಪಷ್ಟ ಬಹುಮತಕ್ಕೆ 6 ಸೀಟುಗಳ ಕೊರತೆ ಇದ್ದರೂ ಅತಿ ಹೆಚ್ಚು ವಾರ್ಡ್​ಗಳನ್ನು ಗೆದ್ದ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿತ್ತು. ಇದೀಗ ಮೊಹಾಲಿಯ ಮಹಾನಗರ ಪಾಲಿಕೆ ಕೂಡ ಕಾಂಗ್ರೆಸ್ ಕೈಸೇರಿದೆ. ಎರಡು ಮತಗಟ್ಟೆಗಳಲ್ಲಿ ಮರುಮತದಾನ ನಡೆದ ಹಿನ್ನೆಲೆಯಲ್ಲಿ ಮೊಹಾಲಿ ಮಹಾನಗರ ಪಾಲಿಕೆಯ ಮತ ಎಣಿಕೆಯನ್ನು ಇಂದಿಗೆ ಮುಂದೂಡಲಾಗಿತ್ತು.

    ಇದನ್ನೂ ಓದಿ: ಪೆಟ್ರೋಲ್ ಬೆಲೆ ಗಗನಕ್ಕೆ: ಅಮಿತಾಬ್, ಅಕ್ಷಯ್​ರನ್ನು ಎಳೆ ತಂದ ಕಾಂಗ್ರೆಸ್

    ಇದರೊಂದಿಗೆ ರಾಜ್ಯದಲ್ಲಿ ನಡೆದ 109 ನಗರ ಸ್ಠಳೀಯ ಸಂಸ್ಥೆಗಳ ಮತ್ತು ಎಂಟು ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದಂತಾಗಿದೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್​ನ ಬಹುತೇಕ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ಬಿಜೆಪಿ ಭಾರೀ ಸೋಲು ಅನುಭವಿಸಿದೆ.

    ಇನ್ನು ಕಾಂಗ್ರೆಸ್​​ನ ದೃಷ್ಟಿ 2022ರಲ್ಲಿ ಬರುವ ವಿಧಾನಸಭಾ ಚುನಾವಣೆಯ ಕಡೆಗೆ ನೆಟ್ಟಿದೆ. “ಜನರ ಸಂದೇಶ ಸ್ಪಷ್ಟವಾಗಿದೆ. ಇದು ಹಾಲಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ನಾಯಕತ್ವದಲ್ಲಿ ಸಂಪೂರ್ಣ ವಿಶ್ವಾಸ ತೋರಿಸುತ್ತದೆ” ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಸುನಿಲ್ ಜಖ್ಖರ್ ಹೇಳಿದ್ದಾರೆ. ಮುಂದಕ್ಕೆ “ಕಾಪ್ಟನ್ ಫಾರ್ 2022” ಎಂಬ ಸ್ಲೋಗನ್ ಲಾಂಚ್ ಮಾಡಿದ್ದಾರೆ.(ಏಜೆನ್ಸೀಸ್)

    ಡ್ಯೂಟಿ ಮಧ್ಯೆ ಮುಟ್ಟಾದರೆ…?! ಮಹಿಳಾ ಪೊಲೀಸರಿಗೆ ಸಿಕ್ಕಿದೆ ಪರಿಹಾರ

    ಬಾಲಿವುಡ್ ನಟನ ಆತ್ಮಹತ್ಯೆ ಪ್ರಕರಣ : ಹೆಂಡತಿ, ಅತ್ತೆ ನೀಡಿದ್ದರೇ ಕಿರುಕುಳ ?

    ಮತ್ತೆ ಹಬ್ಬುತ್ತಿದೆ ಕರೊನಾ… ಮತ್ತೊಬ್ಬ ಸಚಿವರಲ್ಲಿ ಕರೊನಾ ಸೋಂಕು ಪತ್ತೆ !

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts