More

    ಪಂಜಾಬ್ ಪ್ಲೇಆಫ್ ಆಸೆ ಜೀವಂತ ; ಕೆಕೆಆರ್ ಎದುರು ರೋಚಕ ಜಯ

    ದುಬೈ: ಕರ್ನಾಟಕದ ಬ್ಯಾಟ್ಸ್‌ಮನ್‌ಗಳಾದ ಕೆಎಲ್ ರಾಹುಲ್ (67ರನ್, 55 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ಮಯಾಂಕ್ ಅಗರ್ವಾಲ್ (40ರನ್, 27 ಎಸೆತ, 3 ಬೌಂಡರಿ, 3 ಸಿಕ್ಸರ್) ಜೋಡಿ ಅಬ್ಬರದ ಬ್ಯಾಟಿಂಗ್ ಫಲವಾಗಿ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್-14ರ ಎರಡನೇ ಭಾಗದ ಪಂದ್ಯದಲ್ಲಿ ಕೆಕೆಆರ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸುವ ಮೂಲಕ ಪ್ಲೇಆಫ್ ರೇಸ್‌ನಲ್ಲಿ ಉಳಿಯಿತು. ಈ ಮೂಲಕ ಲೀಗ್‌ನಲ್ಲಿ 5ನೇ ಗೆಲುವು ದಾಖಲಿಸಿದ ಪಂಜಾಬ್ ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದರೆ, ಮತ್ತೊಂದೆಡೆ, ಕೆಕೆಆರ್ ತಂಡದ ಮುಂದಿನ ಹಾದಿ ತೂಗುಯ್ಯಲೆಯಲ್ಲಿ ಉಳಿಯಿತು. ಕೆಕೆಆರ್ ಸೋಲಿನೊಂದಿಗೆ ಡೆಲ್ಲಿ ತಂಡ ಪ್ಲೇಆಫ್ ಹಂತಕ್ಕೇರಿತು.

    ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್, ಆರಂಭಿಕ ಬ್ಯಾಟ್ಸ್‌ಮನ್ ವೆಂಕಟೇಶ್ ಅಯ್ಯರ್ (67ರನ್, 49 ಎಸೆತ, 9 ಬೌಂಡರಿ, 1 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್‌ಗೆ 165 ರನ್ ಕಲೆಹಾಕಿತು. ಒಂದು ಹಂತದಲ್ಲಿ 180 ರನ್ ಪೇರಿಸುವ ಅವಕಾಶ ಹೊಂದಿದ್ದ ಕೆಕೆಆರ್ ತಂಡಕ್ಕೆ ಸ್ಪಿನ್ನರ್ ರವಿ ಬಿಷ್ಣೋಯಿ (22ಕ್ಕೆ2) ಹಾಗೂ ಅರ್ಷದೀಪ್ ಸಿಂಗ್ (32ಕ್ಕೆ 3) ಆಘಾತ ನೀಡಿತು. ಬಳಿಕ ಪಂಜಾಬ್ ತಂಡ,19.3 ಓವರ್‌ಗಳಲ್ಲಿ 5 ವಿಕೆಟ್‌ಗೆ 168 ಗೆಲುವಿನ ನಗೆ ಬೀರಿತು.

    ಕೆಕೆಆರ್: 7 ವಿಕೆಟ್‌ಗೆ 165 (ವೆಂಕಟೇಶ್ ಅಯ್ಯರ್ 67, ರಾಹುಲ್ ತ್ರಿಪಾಠಿ 34, ನಿತೀಶ್ ರಾಣಾ 31, ಅರ್ಷದೀಪ್ ಸಿಂಗ್ 32ಕ್ಕೆ 3, ರವಿ ಬಿಷ್ಣೋಯಿ 22ಕ್ಕೆ 2), ಪಂಜಾಬ್ ಕಿಂಗ್ಸ್: 5 ವಿಕೆಟ್‌ಗೆ 168 (ಕೆಎಲ್ ರಾಹುಲ್ 67, ಮಯಾಂಕ್ ಅಗರ್ವಾಲ್ 40, ಶಾರೂಖ್ ಖಾನ್ 22*, ವರುಣ್ ಚಕ್ರವರ್ತಿ 24ಕ್ಕೆ 2)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts