More

    ಉಸಿರು ನಿಂತು ಹೋದ ಮೇಲೆ… ಪುನೀತ್​ಗೆ ಅಂತಿಮ ನಮನ ಅಭಿಮಾನಿಗಳು ಲಾಂತರ ಕಂಠೀರವದಲ್ಲಿ ಶೋಕಸಾಗರ

    ಮಡುಗಟ್ಟಿದ ಮೌನ, ಅಭಿಮಾನಿಗಳ ಆಕ್ರಂದನ, ಬತ್ತಿದ ಕಣ್ಣೀರು, ಉಡುಗಿದ ಧ್ವನಿ… ಇದೆಲ್ಲದರ ಜತೆಗೆ ನೆಚ್ಚಿನ ನಟ ಇನ್ನಿಲ್ಲವಲ್ಲ ಎಂಬ ಶಾಶ್ವತ ಕೊರಗು. ಶನಿವಾರ ಕಂಠೀರವ ಸ್ಟೇಡಿಯಂ ಅಕ್ಷರಶ@ ಶೋಕದ ಸಾಗರವಾಗಿತ್ತು. ಶುಕ್ರವಾರ ನಿಧನರಾದ ಪುನೀತ್​ ರಾಜಕುಮಾರ್​ ಅವರ ಅಂತಿಮ ದರ್ಶನ ಪಡೆಯುವುದಕ್ಕೆ ಬೆಂಗಳೂರಿಗರು ಬೃಹತ್​ ಸಂಖ್ಯೆಯಲ್ಲಿ ಬಂದಿದ್ದರು. ಬರೀ ಪಡ್ಡೆಗಳಷ್ಟೇ ಅಲ್ಲ, ಹಿರಿಯರು, ಮಹಿಳೆಯರು ಸಹ ಬಂದು ಗಂಟೆಗಟ್ಟಲೆ ಸಾಲಲ್ಲಿ ನಿಂತು ಅಂತಿಮ ದರ್ಶನ ಪಡೆದರು. ಅಂತಿಮ ನಮನ ಸಲ್ಲಿಸುವ ಭರದಲ್ಲಿ ಕೆಲವರು ಪೊಲೀಸರ ಲಾಠಿ ರುಚಿ ಕಂಡರು. ಇನ್ನೂ ಕೆಲವರು ದರ್ಶನ ಸಿಗದೇ ಬೇಸರದಿಂದಲೇ ವಾಪಸಾದರು. ಈ ಜನಸಾಗರದಲ್ಲಿ ಬರೀ ಬೆಂಗಳೂರಿಗರಷ್ಟೇ ಅಲ್ಲ, ದೂರದೂರುಗಳಿಂದ ಸಾವಿರಾರು ಜನರು ಬಂದಿದ್ದರು. ಎಲ್ಲರ ಮನಸ್ಸು ಶೋಕದಿಂದ ಭಾರವಾಗಿತ್ತು. ಕಣ್ಣುಗಳು ಒದ್ದೆಯಾಗಿತ್ತು. ಒಟ್ಟಾರೆ ಕಂಠೀರವದಲ್ಲಿ ಶನಿವಾರ ಬರೀ ಜನಸಾಗರವಷ್ಟೇ ಅಲ್ಲ, ಶೋಕಸಾಗರವೂ ಮಡುಗಟ್ಟಿತ್ತು.
    ಇನ್ನು, ಬೆಳಗ್ಗೆಯೇ ಕನ್ನಡದ ಹಲವು ಸಿನಿಮಾ ಸಹೋದ್ಯೋಗಿಗಳು ಅಂತಿಮ ದರ್ಶನ ಪಡೆದಿದ್ದರು. ಕ್ರಮೇಣ ಬೇರೆಬೇರೆ ಭಾಷೆಗಳ ಚಿತ್ರರಂಗದ ಗಣ್ಯರು ಸಹ ಹಾಜರಾತಿ ಹಾಕಿದರು. ಈ ನಿಟ್ಟಿನಲ್ಲಿ ಮೊದಲಿಗೆ ಬಂದವರು ತೆಲುಗು ನಟ ನಂದಮೂರಿ ಬಾಲಕೃಷ್ಣ. ಡಾ.ರಾಜ್​ ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಬಾಲಕೃಷ್ಣ, ಪುನೀತ್​ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಂತರ ಜೂನಿಯರ್​ ಎಂಟಿಆರ್​, ಪ್ರಭುದೇವ, ಚಿರಂಜೀವಿ, ವೆಂಕಟೇಶ್​, ಶ್ರೀಕಾಂತ್​, ಆಲಿ, ರಾಣಾ ದಗ್ಗುಬಾಟಿ, ಮಂಚು ಮನೋಜ್​ ಮುಂತಾದ ಬೇರೆ ಭಾಷೆಯ ಸೆಲೆಬ್ರಿಟಿಗಳ ಜತೆಗೆ ಗಣೇಶ್​, ಧ್ರುವ ಸರ್ಜಾ, ಅಮೂಲ್ಯ, ರಮ್ಯಾ, ರತಾ, ಆಶಿಕಾ, ರಾಧಿಕಾ ಸೇರಿ ಹಲವರು ಪುನೀತ್​ ಅವರ ಅಂತಿಮ ದರ್ಶನ ಪಡೆದರು. ಈ ಪೈಕಿ, ಕೆಲವು ವರ್ಷಗಳಿಂದ ಕರ್ನಾಟಕದಿಂದ ಹೊರಗಿದ್ದ ರಮ್ಯಾ ಸಹ ಬಂದು ಆಶ್ಚರ್ಯ ಮೂಡಿಸಿದರು.

    ಈ ಕಾರ್​ ಯಾರದ್ದು?
    ಸ್ಟಾರ್​ಗಳನ್ನು ನೋಡಲೆಂದೇ ಹಲವರು ಕಸ್ತೂರ್​ಬಾ ರಸ್ತೆಯಲ್ಲಿ ಜಮಾಯಿಸಿದ್ದರು. ಟ್ರಾಫಿಕ್​ನ ಕಾರಣ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿದ್ದರಿಂದ, ಆ ವಾಹನಗಳಲ್ಲಿ ಯಾರು ಪ್ರಯಾಣ ಮಾಡುತ್ತಿದ್ದಾರೆ, ಈ ಕಾರ್​ ಯಾರದ್ದು ಎಂಬ ಕೌತುಕ ನೆರೆದಿದ್ದವರಲ್ಲಿ ಮನೆ ಮಾಡಿತ್ತು. ತಮ್ಮ ನೆಚ್ಚಿನ ನಟ&ನಟಿಯರು ಕಂಡರೆ ಅವರತ್ತ ಕೈಬೀಸುತ್ತಿದ್ದುದೂ ಸಾಮಾನ್ಯವಾಗಿತ್ತು.

    ಇಂದು ಬೆಳಗ್ಗೆ 10ರೊಳಗೆ ವಿಧಿವಿಧಾನ
    ಪುನೀತ್​ ರಾಜ್​ಕುಮಾರ್​ ಅವರ ಅಂತ್ಯಸಂಸ್ಕಾರ ಭಾನುವಾರ ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೇರವೇರಲಿದೆ. ಅಮೆರಿಕದಿಂದ ಪುನೀತ್​ ಪುತ್ರಿ ಧೃತಿ ಬರುವಿಕೆಗಾಗಿ ಕಾಯುತ್ತಿದ್ದ ಡಾ.ರಾಜ್​ಕುಮಾರ್​ ಕುಟುಂಬ ಸದಸ್ಯರು ಮತ್ತು ಸರ್ಕಾರ ಬೆಳಗ್ಗೆ ಅಂತಿಮ ಸಂಸ್ಕಾರಕ್ಕೆ ಸಕಲ ಸಿದ್ಧತೆ ನಡೆಸಿದೆ. ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ವಿಶೇಷ ವಾಹನದಲ್ಲಿ ಪಾರ್ಥಿವ ಶರೀರದ ಅಂತಿಮ ಯಾತ್ರೆ ನಡೆಯಲಿದೆ. ಬೆಳಗ್ಗೆ 6 ಗಂಟೆಗೆ ಕ್ರೀಡಾಂಗಣದಿಂದ ಹೊರಟು 8 ಗಂಟೆಗೆ ಕಂಠೀರವ ಸ್ಟುಡಿಯೋಗೆ ತಲುಪಲಿದೆ. ಸರ್ಕಾರಿ ಗೌರವ ಮತ್ತು ಕುಟುಂಬದ ವಿಧಿವಿಧಾನ ಪ್ರಕಾರ ಬೆಳಗ್ಗೆ 10 ಗಂಟೆಯೊಳಗೆ ಅಂತ್ಯಸಂಸ್ಕಾರ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಆರ್​ಪಿಎ್​ ಪಡೆಗಳ ನಿಯೋಜನೆ ಮಾಡಲಾಗುತ್ತದೆ. ಯಾವುದೇ ಅಹಿತಕರ ಟನೆ ನಡೆಯದಂತೆ ಪೊಲೀಸರ ನಿಯೋಜನೆಗೆ ಸೂಚಿಸಲಾಗಿದೆ. ಸ್ವತ@ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲದರ ಮೇಲುಸ್ತುವಾರಿ ವಹಿಸಿದ್ದಾರೆ. ಡಾ.ರಾಜ್​ಕುಮಾರ್​ ಕುಟುಂಬ ಸದಸ್ಯರು ತೆರಳಲು ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದೆ. ಶನಿವಾರ ಸಂಜೆಯೇ ಅಂತ್ಯಸಂಸ್ಕಾರ ನಡೆಸಲು ಸರ್ಕಾರ ಎಲ್ಲ ಸಿದ್ದತೆ ನಡೆಸಿತ್ತು. ಕಂಠೀರವ ಸ್ಟುಡಿಯೋದಲ್ಲಿ ಟೆಂಟ್​ ಹಾಕಿ, ಗುಂಡಿ ಸಹ ತೋಡಲಾಗಿತ್ತು. ಜಿಲ್ಲಾಡಳಿತ ಮತ್ತು ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.

    ಜಾಗಬಿಟ್ಟು ಕದಲಲಿಲ್ಲ.. ಅಳು ತಡೆಯಲಿಲ್ಲ…
    ಶುಕ್ರವಾರದಿಂದ ಪುನೀತ್​ ಪಾರ್ಥಿವ ಶರೀರದ ಜತೆಗಿರುವ ಅವರ ಕುಟುಂಬದವರು, ಶನಿವಾರ ಸಹ ಅಲ್ಲಿಂದ ಜಾಗ ಬಿಟ್ಟು ಕದಲಿಲ್ಲ. ಪುನೀತ್​ ಪತ್ನಿ ಅಶ್ವಿನಿ ಮತ್ತು ಮಗಳು ಗದ್ಗದಿತರಾಗಿದ್ದರು. ಶಿವರಾಜಕುಮಾರ್​ ಅದೆಷ್ಟು ಬಾರಿ ಅತ್ತರೋ ಲೆಕ್ಕ ಇಟ್ಟವರಿಲ್ಲ. ದಿನದ ಬಹುತೇಕ ಸಮಯವನ್ನು ಪುನೀತ್​ ಪಕ್ಕದಲ್ಲಿ ನಿಂತೇ ಕಳೆದ ಶಿವಣ್ಣ, ಸಂಜೆಯ ಹೊತ್ತಿಗೆ ಕೆಲವು ಕಾಲ ಪುನೀತ್​ ಪಕ್ಕ ಕುಳಿತಿದ್ದರು. ಒಂದು ಹಂತದಲ್ಲಿ ಪುನೀತ್​ ಕಣ್ಣಿಂದ ರಕ್ತ ತೊಟ್ಟಿಕ್ಕಿದಾಗ, ಅವರ ಅಳು ತಾರಕಕ್ಕೇರಿತ್ತು. ಅವರನ್ನು ಸಮಾಧಾನಪಡಿಸುವುದು ಕಷ್ಟವಾಗಿತ್ತು. ರಾವೇಂದ್ರ ರಾಜಕುಮಾರ್​ ಸ್ಥಿತಿಯೇನು ಬೇರೆಯದಾಗಿರಲಿಲ್ಲ. ಪುನೀತ್​ ಪುತ್ರಿ ಧೃತಿ ಬಂದಾಗ ದು@ಖ ಮುಗಿಲೇರಿತ್ತು. ಅಮೆರಿಕದಲ್ಲಿ ್ಯಾಷನ್​ ಡಿಸೈನಿಂಗ್​ ಕಲಿಯುತ್ತಿರುವ ಧೃತಿ, ಪುನೀತ್​ ನಿಧನರಾಗಿ 30 ಗಂಟೆಗಳ ನಂತರ ಅಪ್ಪನ ದರ್ಶನ ಪಡೆದರು. ಬೆಂಗಳೂರಿಗೆ 4.15ಕ್ಕೆ ಬಂದ ಧೃತಿ ಮನೆಗೆ ಹೋಗಿ, ಆನಂತರ ಕಂಠೀರವ ಕ್ರೀಡಾಂಗಣಕ್ಕೆ ಬಂದರು. ಅಳುತ್ತಲೇ ಬಂದು ತಂದೆಯ ದರ್ಶನ ಪಡೆದು ಕ್ಷಣ ಹೊತ್ತು ಸ್ತಬ್ಧರಾಗಿ ನಿಂತಿದ್ದು ಕಂಡುಬಂತು. ಆ ದೃಶ್ಯ ನಿಜಕ್ಕೂ ಕರುಳು ಹಿಂಡುವಂತಿತ್ತು.

    ಆ ಮಗುವಿಗೆ ಏನು ಉತ್ತರ ಕೊಡಲಿ?
    ಪುನೀತ್​ ರಾಜಕುಮಾರ್​ ಅವರ ಅಂತಿಮ ಸಂಸ್ಕಾರವನ್ನು ಭಾನುವಾರಕ್ಕೆ ನಿಗದಿಪಡಿಸಲಾಗಿತ್ತು. ಆದರೆ, ಶನಿವಾರ ಸಂಜೆಯೇ ನಡೆಯಲಿದೆ, ಮಧ್ಯಾಹ್ನ 3 ಗಂಟೆಗೆ ಕಂಠೀರವ ಸ್ಟೇಡಿಯಂನಿಂದ ಕಂಠೀರವ ಸ್ಟುಡಿಯೋಗೆ ಮೆರವಣಿಗೆ ಹೊರಡಲಿದೆ ಎಂಬ ಸುದ್ದಿಯೊಂದು ಹೊರಬಿತ್ತು. ಅಂತಿಮವಾಗಿ ಭಾನುವಾರ ಬೆಳಗ್ಗೆಯೇ ಅಂತ್ಯಕ್ರಿಯೆ ನಡೆಯಲಿದೆ ಎಂಬ ತೀರ್ಮಾನ ಹೊರಬಿತ್ತು. ಈ ಗೊಂದಲಗಳಿಗೆ ಕಾರಣವೇನು ಎಂಬ ಪ್ರಶ್ನೆ ಸಹಜ. ಈ ಕುರಿತು ಮಾತನಾಡಿದ ಪುನೀತ್​ ಸಹೋದರ ಮತ್ತು ನಟ ರಾವೇಂದ್ರ ರಾಜಕುಮಾರ್​, “ಅಪು$್ಪ ದೊಡ್ಡ ಮಗಳು ನ್ಯೂಯಾರ್ಕ್​ಗೆ ಹೋಗಿದ್ದಾಳೆ. ಆಕೆ ಬರುವುದು ತಡವಾಗುತ್ತಿದೆ. ಕತ್ತಲೆಯಾದರೆ ಅಂತ್ಯಸಂಸ್ಕಾರ ಮಾಡಬಾರದು ಎನ್ನುತ್ತಾರೆ. ಹಾಗಾಗಿ ಆಕೆ ಬಂದ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅಲ್ಲಿಯವರೆಗೂ ಅಭಿಮಾನಿಗಳು ಸಹಕಾರ ಕೊಡಬೇಕು’ ಎಂದು ಮನವಿ ಮಾಡಿದರು. ಆ ಮಗುವಿಗಾಗಿ ಶಾಂತಿ ಕಾಪಾಡಿ ಎಂದು ಮನವಿ ಮಾಡಿದ ಅವರು, “ಆ ಮಗು ಅದೆಷ್ಟು ಅಳುತ್ತದೋ ಗೊತ್ತಿಲ್ಲ. ಅವಳು ನನ್ನನ್ನು ಅಪ್ಪ ಎನ್ನುತ್ತಾಳೆ. ಅವಳಪ್ಪನನ್ನು ಪಪ್ಪಾ ಎನ್ನುತ್ತಾಳೆ. ಅಪ್ಪ, ನನ್ನ ಪಪ್ಪನನ್ನು ಎಲ್ಲಿ ಕಳಿಸಿಬಿಟ್ಟೆ ಎಂದರೆ ನಾನೇನು ಉತ್ತರ ಕೊಡಲಿ’ ಎಂದು ಗದ್ಗದಿತರಾದರು. ‘ಪ್ರತಿಯೊಬ್ಬರಿಗೂ ಅನುಕೂಲ ಮಾಡಿಕೊಡಬೇಕು ಎಂದು ಸರ್ಕಾರದವರು ಹೇಳಿದ್ದಾರೆ. ದರ್ಶನ ಮುಂದುವರಿಯಲಿ’ ಎಂದು ಹೇಳಿದರು. ಇದಾದ ಬಳಿಕ ಸಂಜೆ 4ರ ಸುಮಾರಿಗೆ ಪುನೀತ್​ ಹಿರಿಮಗಳು ಧೃತಿ ಆಗಮನವಾಯಿತು.

    ಜೀವನಪೂರ್ತಿ ಸಂತೋಷದಿಂದ ಇದ್ದ ಅಪು$್ಪವನ್ನು ಸಂತೋಷದಿಂದಲೇ ಎಲ್ಲರೂ ಕಳಿಸಿಕೊಡಬೇಕಿದೆ. ಈ ನಿಟ್ಟಿನಲ್ಲಿ ಅಂತಿಮ ಸಂಸ್ಕಾರದ ವೇಳೆ ಯಾವುದೇ ಅಹಿತಕರ ಟನೆ ನಡೆಯದಂತೆ, ಯಾರಿಗೂ ತೊಂದರೆ ಆಗದಂತೆ ಅಭಿಮಾನಿಗಳೆಲ್ಲರೂ ಸಹಕರಿಸಲಿದ್ದಾರೆ ಎಂಬ ವಿಶ್ವಾಸವಿದೆ.

    | ರಾವೇಂದ್ರ ರಾಜ್​ಕುಮಾರ್​

    ಐವರು ಅಭಿಮಾನಿಗಳ ಸಾವುಘಿ
    ಪುನೀತ್​ ರಾಜಕುಮಾರ್​ ಅಕಾಲಿಕ ಸಾವಿನ ನೋವು ಅರಗಿಸಿಕೊಳ್ಳಲಾಗದೆ ಶನಿವಾರ ಮೂವರು ಅಭಿಮಾನಿಗಳು ಹೃದಯಘಾತದಿಂದ ಮೃತಪಟ್ಟಿದ್ದು, ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣ ವಡ್ಡರಗಲ್ಲಿಯ ರಾಹುಲ್​ ಗಾಡಿವಡ್ಡರ (26), ಗೆಳೆಯರ ಜತೆಗೂಡಿ ಪುನೀತ್​ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ನೇಣಿಗೆ ಶರಣಾಗಿದ್ದಾನೆ. ಚಿಕ್ಕಮಗಳೂರು ನಗರ ಹೊರವಲಯದ ರಾಂಪುರದ ಶರತ್​ (30) ಶನಿವಾರ ಸಂಜೆ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗಾವಿ ತಾಲೂಕಿನ ಶಿಂಧೋಳಿ ಗ್ರಾಮದ ಪರಶುರಾಮ ದೇಮಣ್ಣವರ (33) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪುನೀತ್​ ನಿಧನ ಸುದ್ದಿ ಕೇಳಿ ತೀವ್ರ ಅಸ್ವಸ್ಥಗೊಂಡಿದ್ದ ಕೊಪ್ಪಳ ತಾಲೂಕಿನ ಚಿಕ್ಕಬಗನಾಳ ಗ್ರಾಮದ ಜ್ಞಾನಮೂರ್ತಿ ನಿಂಗಾಪುರ (40) ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾನೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಯಲಾದಹಳ್ಳಿ ಗ್ರಾಮದಲ್ಲಿ ವೈ.ಎಸ್​.ಸುರೇಶ್​ (49) ಹೃದಯಾಘಾತದಿಂದ ಮೃತರಾಗಿದ್ದಾರೆ. ಪುನೀತ್​ ಅಂತಿಮ ದರ್ಶನದ ನೇರಪ್ರಸಾರವನ್ನು ಸುದ್ದಿವಾಹಿನಿಯಲ್ಲಿ ನೋಡುತ್ತಲೇ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥರಾದರು. ಆಸ್ಪತ್ರೆಗೆ ಕರೆದೊಯ್ಯುವುದಕ್ಕೂ ಮುನ್ನವೇ ಕೊನೆಯುಸಿರೆಳೆದಿದ್ದಾರೆ.

    ಟ್ಯಾಟೂ ಹಾಕಿಸಿಕೊಂಡು ಅಂತಿಮ ನಮನ
    ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ಅಭಿಮಾನಿಯೊಬ್ಬ ತನ್ನ ಎದೆಮೇಲೆ ಪುನೀತ್​ ರಾಜ್​ಕುಮಾರ್​ ಟ್ಯಾಟೂ ಹಾಕಿಸಿಕೊಂಡು ಅಂತಿಮ ವಿದಾಯ ಹೇಳಿದ್ದಾನೆ. ಹಟ್ಟಿಚಿನ್ನದ ಗಣಿಯ ಲಿಂಗರಾಜ ಆ ಅಭಿಮಾನಿ.

    ಕಾಳಿಂಗ ಸರ್ಪದ ಬಗ್ಗೆ ಅಪ್ಪು ಕುತೂಹಲ
    ಶಿವಮೊಗ್ಗ: ವನ್ಯಜಿವಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನಿರತರಾಗಿದ್ದ ಪುನೀತ್​ ರಾಜ್​ಕುಮಾರ್​ ಅವರು ಪರಿಸರ, ಪ್ರಾಣಿಗಳ ಬಗ್ಗೆ ಇನ್ನಿಲ್ಲದ ಆಸಕ್ತಿ ಹೊಂದಿದ್ದರು. ತೀರ್ಥಹಳ್ಳಿ ತಾಲೂಕು ಆಗುಂಬೆಯ ಕಾಳಿಂಗ ಫೌಂಡೇಷನ್​ಗೆ ಕಳೆದ ವರ್ಷವಷ್ಟೇ ಭೇಟಿ ನೀಡಿದ್ದ ಅವರು, 3 ದಿನ ಅಲ್ಲಿಯೇ ಉಳಿದುಕೊಂಡು ಕಾಳಿಂಗ ಫೌಂಡೇಷನ್​ನ ಗೌರಿಶಂಕರ್​ ಅವರೊಂದಿಗೆ ಕಾಳಿಂಗ ಸರ್ಪಗಳ ಬಗ್ಗೆ ಅನೇಕ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದ್ದರು.

    ನಾಲ್ವರಿಂದ ಆತ್ಮಹತ್ಯೆಗೆ ಯತ್ನ
    ಪ್ರತ್ಯೇಕ ಟನೆಯಲ್ಲಿ ನಾಲ್ವರು ಅಭಿಮಾನಿಗಳು ಆತ್ಮಹತ್ಯೆಗೆ ಯತ್ನಿಸಿ, ಅಪಾಯದಿಂದ ಪಾರಾಗಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಹಾರಾಪುರ ಗ್ರಾಮದ ಬಸನಗೌಡ (22) ಹಾಗೂ ಯಾಪಲಪರ್ವಿ ಮಹ್ಮದ್​ರಫೀ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಪಟ್ಟಣದಲ್ಲಿ ಅಭಿಮಾನಿ ಶರಣಪ್ಪ ಅಮೋಘಿ ಬಿಸನಾಳ (24) ಶನಿವಾರ ಡಯಾಬಿಟಿಸ್​ನ 48 ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡಿದ್ದಾನೆ. ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಊಟ&ನೀರು ಬಿಟ್ಟ ಅಭಿಮಾನಿ ಪುನೀತ್​ ನಿಧನ ವಿಷಯ ತಿಳಿಯುತ್ತಿದ್ದಂತೆ ಅಘಾತಗೊಂಡು ಶುಕ್ರವಾರದಿಂದಲೇ ಊಟ, ನೀರನ್ನು ಬಿಟ್ಟಿದ್ದ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಶಾಂತಕುಮಾರ್​ ಶನಿವಾರ ತೀವ್ರ ಅಸ್ವಸ್ಥಗೊಂಡಿದ್ದಾರೆ. ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಅಂತಿಮ ದರ್ಶನಕ್ಕೆ ಹಠ
    ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ಗಣೇಶ್​ಕುಮಾರ್​ (22) ಬ್ಲೇಡ್​ನಿಂದ ಕೈ ಹಾಗೂ ಎದೆ ಭಾಗವನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾ-ನೆ. ಪುನೀತ್​ ಅಭಿಮಾನಿಯಾಗಿ-ದ್ದ ಈತ, ಶುಕ್ರ-ವಾ-ರ ಮನನೊಂದು ಟಿವಿಯನ್ನು ಒಡೆದು ಹಾಕಿ ನಂತರ ಕೈ ಹಾಗೂ ಎದೆ ಭಾಗ ಕೊಯ್ದುಕೊಂಡಿದ್ದ. ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದ್ದು, ಶನಿವಾರ ಬೆಳಗ್ಗೆ ಚೇತ-ರಿ-ಕೆ- ಕಂಡ ಈತ ಅಪ್ಪು ಪಾರ್ಥಿವ ಶರೀರದ ದರ್ಶನ ಪಡೆಯಲೇಬೇಕೆಂದು ಹಠ ಹಿಡಿದ. ಕೊನೆಗೆ ಸ್ನೇಹಿತರು ಬೆಂಗಳೂರಿಗೆ ಬಾಡಿಗೆ ವಾಹನ ಮಾಡಿಕೊಂಡು ಕರೆದೊಯ್ದಿ-ದ್ದಾ-ರೆ.

    ಕೆಎಂಎ್​ನಿಂದ ಗೌರವ ಸಮರ್ಪಣೆ ಶ್ರೀ
    ಬೆಂಗಳೂರು: ನಯಾ ಪೈಸೆ ಸಂಭಾವನೆ ಪಡೆಯದೆ ಕರ್ನಾಟಕ ಹಾಲು ಮಹಾ ಮಂಡಳ (ಕೆಎಂಎ್​) ನಂದಿನಿ ಹಾಲು ಉತ್ಪನ್ನಗಳ ರಾಯಭಾರಿಯಾಗಿದ್ದ ಪುನೀತ್​ ರಾಜ್​ಕುಮಾರ್​ ಅವರಿಗೆ ಗೌರವ ಸಮರ್ಪಿಸಲು ಬೃಹತ್​ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಪುನೀತ್​ ಬ್ರಾ$್ಯಂಡ್​ ಅಂಬಾಸಿಡರ್​ ಆದ ಮೇಲೆಯೇ ನಂದಿನಿ ಉತ್ಪನ್ನಗಳಿಗೆ ಅತಿ ಹೆಚ್ಚು ಬೇಡಿಕೆ.ಮಾರುಕಟ್ಟೆ ವ್ಯಾಪ್ತಿ ವಿಸ್ತಾರಗೊಳ್ಳಲು ಸಾಧ್ಯವಾಗಿತ್ತು ಎನ್ನುವುದನ್ನು ಕೆಎಂಎ್​ ಅಧಿಕಾರಿಗಳು ಸ್ಮರಿಸುತ್ತಾರೆ. ಕೆಎಂಎ್​ಗೆ ರಾಜ್​ ಬ್ರಾ$್ಯಂಡ್​ ಅಂಬಾಸಿಡರ್​ ಆಗಿದ್ದ ಸಂದರ್ಭದಲ್ಲಿಯೂ ಇದೊಂದು ರೈತರ ಸಂಸ್ಥೆ ಎನ್ನುವ ಕಾರಣಕ್ಕೆ ಸಂಭಾವನೆ ಪಡೆದಿರಲಿಲ್ಲ. ಅದೇ ತತ್ಸಂಪ್ರದಾಯ ವನ್ನು ಪುನೀತ್​ ಕೂಡ ಮುಂದುವರಿಸಿದ್ದರು. ರಾಜ್​ ಕುಟುಂಬದ ಸೇವೆ ಸ್ಮರಣೆ ಕಾರ್ಯಕ್ರಮ ಸಂಟಿಸಲು ಚಿಂತಿಸಲಾಗಿದೆಂದು ಮೂಲಗಳು ತಿಳಿಸಿವೆ.

    ಕನ್ನಡ ಚಲನಚಿತ್ರ ರಂಗದ ಲೋಕಪ್ರಿಯ ನಟ ಪುನೀತ್​ ರಾಜಕುಮಾರ್​ ಅಕಾಲಿಕ ಮರಣ ನೋವು ತರಿಸಿದೆ. ದೀಪಾವಳಿಯ ಸಂತೋಷದ ಸಂದರ್ಭದಲ್ಲೇ ದು@ಖದ ಸಂಗತಿ ಕೇಳಿಬಂದಿರುವುದು ಮನಸ್ಸಿಗೆ ಘಾಸಿ ಉಂಟು ಮಾಡಿದೆ. ಪುನೀತ್​ ಅಗಲಿಕೆ ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ. ಅವರ ಆತ್ಮಕ್ಕೆ ಸದ್ಗತಿ ಸಿಗಲೆಂದು ಪ್ರಾರ್ಥಿಸುತ್ತೇನೆ.

    ದತ್ತಾತ್ರೇಯ ಹೊಸಬಾಳೆ ಆರ್​ಎಸ್​ಎಸ್​ ಸರಕಾರ್ಯವಾಹ

    ಪುನೀತ್​ ನಿಧನದ ಸುದ್ದಿ ಕೇಳಿದಾಗ ೇಕ್​ ನ್ಯೂಸ್​ ಎಂದುಕೊಂಡೆ. ಕೊನೆಗೆ ಅವರ ಮ್ಯಾನೇಜರ್​ ಬಳಿ ಕೇಳಿ ಖಚಿತಪಡಿಸಿಕೊಂಡೆ. ಜೀವನ ನಮ್ಮ ಕೈಯಲ್ಲಿ ಇಲ್ಲ. ಎಲ್ಲವೂ ನಮ್ಮ ಹಿಡಿತದಲ್ಲಿದೆ ಎಂದುಕೊಳ್ಳುತ್ತೇವೆ. ಆದರೆ, ಯಾವುದೂ ಇರುವುದಿಲ್ಲ. ನಾವೇನು ಮಾಡಬೇಕೋ ಮಾಡಬೇಕು, ಆಗಬೇಕಾಗಿದ್ದು, ಅದರ ಪಾಡಿಗೆ ಆಗುತ್ತದೆ. ಅಶ್ವಿನಿ ಜತೆ ಮಾತಾಡಿದ್ದೆ. ಬಹಳ ಬೇಸರವಾಗುತ್ತದೆ. ನನ್ನ ಮೊದಲ ಚಿತ್ರದಿಂದ ಇಲ್ಲಿಯವರೆಗೂ ಒಳ್ಳೆಯ ಸಂಬಂಧ ಇದೆ. ಅಪು$್ಪ ಅಂದರೆ ಅವರ ನಗು ಸದಾ ನೆನಪಗಾಗುತ್ತದೆ. ನಮ್ಮ ತಂದೆ ಕಳೆದುಕೊಂಡಾಗ, ೋನ್​ ಮಾಡಿ ಧೈರ್ಯತುಂಬಿದ್ದರು. ಸಿನಿಮಾ ಬಿಟ್ಟು ರಾಜಕೀಯಕ್ಕೆ ಹೋದಾಗಲೂ ಸಹಕಾರ, ಪ್ರೋತ್ಸಾಹ ಕೊಡುತ್ತಿದ್ದರು. ಹಾಗಾಗಿ, ಒಬ್ಬ ಸಹನಟ ಎನ್ನುವುದಕ್ಕಿಂತ ಅವರೊಬ್ಬ ಒಳ್ಳೆಯ ಸ್ನೇಹಿತರಾಗಿದ್ದರು. ಜೇಮ್ಸ್​ ಚಿತ್ರ ಮಾಡಬೇಕಿತ್ತು. ನೀವು ಯಾವಾಗ ರೆಡಿ ಇದ್ದರೂ, ಯಾವ ಕಥೆ ಇಷ್ಟವಾದರೂ ಜತೆಗೆ ಮಾಡೋಣ ಎಂದಿದ್ದರು. ದ್ವಿತ್ವ ಮಾಡಬೇಕಿತ್ತು. ಕಥೆ ಕೇಳಿದೆ. ನಾನು ಮತ್ತು ಅಪು$್ಪ ಸಿನಿಮಾ ಮಾಡಿದರೆ, ಬೇರೆ ತರಹದ ನಿರೀೆಗಳು ಇರುವುದರಿಂದ ಆ ತರಹದ ಸ್ಕ್ರಿಪ್ಟ್​ ಸಿಕ್ಕರೆ ಚೆನ್ನಾಗಿರುತ್ತದೆ ಎಂದು ಅದಕ್ಕಾಗಿ ಕಾಯುತ್ತಿದ್ದೆ.

    |  ರಮ್ಯಾ ಚಿತ್ರನಟಿ, ಮಾಜಿ ಸಂಸದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts