More

    ನೆನಪು: ಪುನೀತ್​ ರಾಜ್​ಕುಮಾರ್​​ ಎರಡನೇ ಪುಣ್ಯಸ್ಮರಣೆ ಇಂದು: ಸದಾ ಮಿನುಗುವ ತಾರೆ

    ಪುನೀತ್ ರಾಜ್​ಕುಮಾರ್ ಅವರು ನಮ್ಮನ್ನು ಅಗಲಿ ಇಂದಿಗೆ (ಅಕ್ಟೋಬರ್ 29) ಎರಡು ವರ್ಷಗಳಾಯ್ತು. ಅಪ್ಪು ಇಲ್ಲದ ನೋವು ನಮ್ಮೆಲ್ಲರಲ್ಲೂ ಹಾಗೆಯೇ ಇದೆ. ಇಂದಿಗೂ ಅಪ್ಪು ನಮ್ಮೊಂದಿಗೆ ಇದ್ದಾರೆ ಅಂತಲೇ ಅನಿಸುತ್ತೆ. ಪುನೀತ್ ರಾಜ್‌ಕುಮಾರ್ ಅಗಲಿಕೆ ಇಡೀ ಭಾರತೀಯ ಚಿತ್ರರಂಗಕ್ಕೆ ಮರೆಯಲಾಗದಂತ ದುಃಖವಾಗಿ ಪರಿಣಮಿಸಿದೆ.


    ಪವರ್ ಸ್ಟಾರ್ ಪುಣ್ಯ ಸ್ಮರಣೆಗೆ ಅಭಿಮಾನಿಗಳು ಇಂದಿಗೂ ಅಪ್ಪು ಮಾಡುತ್ತಿದ್ದ ಸಾಮಾಜಿಕ ಕೆಲಸಗಳನ್ನ ಮುಂದುವರೆಸುತ್ತಿದ್ದಾರೆ.
    ಅನ್ನದಾನ, ರಕ್ತದಾನ, ನೇತ್ರದಾನದ ಕ್ಯಾಂಪ್ ಮಾಡುತ್ತಿದ್ದಾರೆ ಅಭಿಮಾನಿಗಳು. ದೂರದ ಊರುಗಳಿಂದ ಅಭಿಮಾನಿ ದೇವರುಗಳು ಅಪ್ಪು ಸಮಾಧಿಯಿರುವ ಕಂಠೀರವ ಸ್ಟೇಡಿಯಂಗೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ.


    ‘ಪವರ್ ಸ್ಟಾರ್’ ಡಾ. ಪುನೀತ್ ರಾಜ್‌ಕುಮಾರ್ ( Puneeth Rajkumar ) , ಇದು ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿ ಉಳಿದುಕೊಳ್ಳುವ ಹೆಸರು. ನಟನೆ , ವ್ಯಕ್ತಿತ್ವ ಮತ್ತು ನಿಸ್ವಾರ್ಥ ಸಮಾಜಮುಖಿ ಸೇವೆಗಳಿಂದ ಜನಮಾನಸದಲ್ಲಿ ಅಚ್ಚಳಿಯದೆ ನೆಲೆಸಿರುವ ಈ ಹಸನ್ಮುಖಿ ನಮ್ಮಲ್ಲೆರನ್ನು ಅಗಲಿ ಇಂದಿಗೆ ಒಂದು ವರ್ಷವೇ ಆಗಿದೆ. ಇಡೀ ಭಾರತೀಯ ಚಿತ್ರರಂಗಕ್ಕೆ ಮರೆಯಲಾಗದಂತ ದುಃಖವಾಗಿ ಪರಿಣಮಿಸಿ ಕಣ್ಣೀರಾಗಿಸಿರುವ ಈ ದೊಡ್ಮನೆ ಕಂದ ಇಂದಿಗೂ ಎಲ್ಲರ ಮನಸಿನಲ್ಲಿ ಮುದ್ದಿನ ಮಗುವಾಗಿದ್ದಾರೆ.


    ಪುನೀತ್ ಇನ್ನಿಲ್ಲ ಎಂಬ ಸುದ್ದಿ ನಿಜ ಎಂದು ತಿಳಿದ ಕೂಡಲೇ ಲಕ್ಷಾಂತರ ಅಭಿಮಾನಿಗಳು ಕಣ್ಣೀರು ಹಾಕಿದ್ದರು. ಅಂದು ಬಿಡುಗಡೆಯಾಗಿದ್ದ ಶಿವ ರಾಜ್‌ಕುಮಾರ್ ಅಭಿನಯದ ಭಜರಂಗಿ 2 ಚಿತ್ರ ವೀಕ್ಷಿಸಲು ಹೋಗಿದ್ದ ಅದೆಷ್ಟೋ ರಾಜವಂಶ ಅಭಿಮಾನಿಗಳು ಮಧ್ಯಂತರದ ವೇಳೆಗೆ ವಿಷಯ ತಿಳಿದು ಚಿತ್ರಮಂದಿರಗಳಲ್ಲಿಯೇ ಗೋಳಾಡಿದ್ದರು.


    ಹೀಗೆ ದಿನನಿತ್ಯ ಜನರ ಮನಸ್ಸಿನಲ್ಲಿ ಸ್ಮರಿಸಲ್ಪಡುತ್ತಿರುವ ಪುನೀತ್ ರಾಜ್‌ಕುಮಾರ್ ಅವರ ಎರಡನೇ ಸ್ಮರಣೆ ಇಂದು ನಡೆಯಲಿದೆ. ಪುನೀತ್ ರಾಜ್‌ಕುಮಾರ್ ಕುಟುಂಬಸ್ಥರು ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ ಹಾಗೂ ಅವರ ಅಪಾರ ಅಭಿಮಾನಿಗಳು ಸಮಾಧಿಗೆ ಭೇಟಿ ನೀಡಿ ಅಪ್ಪುಗೆ ನಮನ ಸಲ್ಲಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts