More

    ಮಳೆಗಾಗಿ ಮಜ್ಜನ ಗುಡ್ಡೆಗೆ ಪೂಜೆ

    ಹಿರೀಸಾವೆ: ಹೋಬಳಿಯ ಹೊನ್ನಶೆಟ್ಟಿಹಳ್ಳಿ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಗ್ರಾಮದ ಹೊರವಲಯದಲ್ಲಿರುವ ಮಜ್ಜನ ಗುಡ್ಡೆ ದೇವರಿಗೆ ಮಂಗಳವಾರ ವಿಶೇಷ ಪೂಜೆ ನೆರವೇರಿಸಿದರು.

    ಮಜ್ಜನ ಗುಡ್ಡೆ ಪೂಜೆಗೆ ಶತಮಾನಗಳ ಇತಿಹಾಸವಿದೆ. ಪ್ರತಿ ವರ್ಷ ನವೆಂಬರ್ ತಿಂಗಳ ಮೊದಲ ವಾರದಲ್ಲಿ ಮಳೆಗಾಗಿ ಮಜ್ಜನಗುಡ್ಡೆ ದೇವರಿಗೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸುವುದು ವಾಡಿಕೆ. ಮಜ್ಜನ ಗುಡ್ಡೆಯಲ್ಲಿರುವ ಎರಡು ಉದ್ಭವ ಶಿಲೆ ಕಲ್ಲುಗಳನ್ನು ಸ್ವಚ್ಛಗೊಳಿಸಿ ಅರಿಶಿಣ-ಕುಂಕುಮ ಹಚ್ಚಿ ಹೂಗಳಿಂದ ಸಿಂಗರಿಸಲಾಗಿತ್ತು. ಗ್ರಾಮಸ್ಥರು ಗಂಧ-ಕರ್ಪೂರ ಬೆಳಗಿಸಿ ಮಳೆಗಾಗಿ ಪ್ರಾರ್ಥಿಸಿದರು.ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಗ್ರಾಮದ ಪ್ರಮುಖರಾದ ಕುಮಾರ್, ಮಂಜು, ರವಿ, ಮಂಜೇಗೌಡ, ಲಕ್ಷ್ಮಮ್ಮ, ರಾಧಮ್ಮ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts