More

    ಭುವನೇಶ್ವರಿ ಮಾತೆಗೆ ಪೂಜೆ ಬುಧವಾರ

    ಸಿದ್ದಾಪುರ: ಕನ್ನಡ ರಾಜ್ಯೋತ್ಸವದ ನಿಮಿತ್ತ ತಾಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯದಲ್ಲಿ ಮಾತೃವಂದನಾ ಸಮಿತಿ ಆಶ್ರಯದಲ್ಲಿ ದೇವಾಲಯದ ಆಡಳಿತ ಮಂಡಳಿ ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರದಲ್ಲಿ ನ. 1 ರಂದು ಬೆಳಗ್ಗೆ 10 ರಿಂದ ಮಾತೃ ವಂದನಾ ಕಾರ್ಯಕ್ರಮದ ಅಂಗವಾಗಿ ಭುವನೇಶ್ವರಿ ಮಾತೆಗೆ ಪೂಜೆ, ಕನ್ನಡ ಧ್ವಜಾರೋಹಣ, ಶ್ರೀಮಾತಾ ಅನುಗ್ರಹ ಗೌರವ ಸನ್ಮಾನ, ಪ್ರಶಸ್ತಿ ಪ್ರದಾನ ನಡೆಯಲಿದೆ. ತಹಸೀಲ್ದಾರ್ ಮಧುಸೂಧನ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸುವರು.

    ದೇವಾಲಯದ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡ ಅಧ್ಯಕ್ಷತೆ ವಹಿಸುವರು. ಮಾತೃವಂದನಾ ಸಮಿತಿ ಗೌರವ ಸಲಹೆಗಾರ ಅನಂತ ಭಟ್ಟ ಮುತ್ತಿಗೆ, ತಾಪಂ ಇಒ ದೇವರಾಜ ಹಿತ್ತಲಕೊಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಗಣಪತಿ ಈರಾ ನಾಯ್ಕ, ಪ್ರೌಢಶಾಲಾ ವಿಶ್ರಾಂತ ಮುಖ್ಯಾಧ್ಯಾಪಕ ಆರ್.ಎಸ್.ಹೆಗಡೆ ಶಿರಸಿ, ಬೇಡ್ಕಣಿ ಗ್ರಾಪಂ ಸದಸ್ಯ ಗೋವಿಂದ ನಾಯ್ಕ, ಇತರರು ಉಪಸ್ಥಿತರಿರುವರು.

    ಶ್ರೀಮಾತಾ ಅನುಗ್ರಹ ಗೌರವ: ವಿಶ್ರಾಂತ ಉಪನ್ಯಾಸಕ ವಿ. ಗಂಗಾಧರ ಭಟ್ಟ ಮಣ್ಣಿಕೊಪ್ಪ, ವಿಶ್ರಾಂತ ಯೋಧ-ಶಿಕ್ಷಕ ಗೋವಿಂದ ಹರಗಿ ಬೇಡ್ಕಣಿ, ಖ್ಯಾತ ಚಿತ್ರ ಕಲಾವಿದೆ ಡಾ. ಪದ್ಮಶ್ರೀ ಹೆಗಡೆ ಬಿದ್ರಕಾನ ಅವರುಗಳಿಗೆ ಶ್ರೀಮಾತಾ ಅನುಗ್ರಹ ಗೌರವ ಸನ್ಮಾನ ಪ್ರಶಸ್ತಿ ಪ್ರದಾನ, ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೆ ಪ್ರಥಮ ಮೂರು ಸ್ಥಾನ ಪಡೆದ ಸ್ಪಂದನಾ ಚಂದ್ರಕಾಂತ ಮಡಿವಾಳ, ತುಷಾರ ಘನಶ್ಯಾಮ ಪಟೇಲ, ದೀಪ್ತಿ ವಿನಾಯಕ ಶೇಟ್ ಹಾಗೂ ಚಿನ್ಮಯ ಕೆ.ಎಲ್. ಅವರುಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts