More

    ಶ್ರೀ ರೇಣುಕ ವಿದ್ಯಾಪೀಠ ಪದವಿಪೂರ್ವ ಕಾಲೇಜಿನಲ್ಲಿ ಶೇ. 96 ಫಲಿತಾಂಶ

    ಬೆಂಗಳೂರು
    ಅತೀ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ತುಮಕೂರಿನ ಶ್ರೀ ರೇಣುಕ ವಿದ್ಯಾಪೀಠ ಪದವಿಪೂರ್ವ ಕಾಲೇಜು 2023-24ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 96 ಫಲಿತಾಂಶ ಪಡೆದಿದೆ.
    ವಾಣಿಜ್ಯ ವಿಭಾಗದಲ್ಲಿ ರೋಹಿತ್ ಕುಮಾರ್ (580). ಕೀರ್ತನ (563), ಎಚ್.ಎಸ್. ದರ್ಶನ್ (531), ತೇಜಸ್ವಿನಿ (524), ಭೂಮಿಕ (518), ಮೌನಿಕ (514) ಅಂಕ ಗಳಿಸಿದ್ದಾರೆ.
    ವಿಜ್ಞಾನ ವಿಭಾಗದಲ್ಲಿ ಎಂ. ಅನುಷ (562), ಜೆ. ಆರ್. ಚಿತ್ರ (535), ಇಂದುಶ್ರೀ (530)ಅಂಕ ಪಡೆದಿದ್ದಾರೆ.
    ಅತ್ಯುನ್ನತ ಶ್ರೇಣಿಯಲ್ಲಿ 17 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಪ್ರಥಮ ದರ್ಜೆ 57, ದ್ವಿತೀಯ ದರ್ಜೆ 06 ಸೇರಿ ಒಟ್ಟು ಶೇ. 96 ಫಲಿತಾಂಶ ಲಭಿಸಿದೆ. ಕನ್ನಡ, ಇಂಗ್ಲೀಷ್, ಗಣಕ ವಿಜ್ಞಾನ, ಅರ್ಥಶಾಸ್ತ್ರ, ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರ. ವ್ಯವಹಾರ ಅಧ್ಯಯನ, ಜೀವಶಾಸ್ತ್ರ, ವಿಷಯಗಳಲಿ ್ಲ100 ಕ್ಕೆ 100 ಫಲಿತಾಂಶ ಬಂದಿದೆ. ಕನ್ನಡ ಭಾಷಾ ವಿಷಯದಲಿ ್ಲ 60 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೂ ತುಮಕೂರು ನಗರ ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ ಶೇಖರ್, ಶ್ರೀ ರೇಣುಕ ವಿದ್ಯಾಪೀಠದ ಅಧ್ಯಕ್ಷ ಕೆ.ವೈ. ಸಿದ್ಧಲಿಂಗಮೂರ್ತಿ, ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಎಲ್ಲ ಸದಸ್ಯರು ಮತ್ತು ಕಾಲೇಜು ಪ್ರಾಂಶುಪಾಲ ಎಂ.ಎಸ್ ಚಿದಾನಂದ ಹಾಗು ಉಪನ್ಯಾಸಕರು ಅಭಿನಂದನೆ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts