More

    ಪಿಯು ಇಂಗ್ಲಿಷ್​ ಪರೀಕ್ಷೆಗೆ ಗೈರಾದ ವಿದ್ಯಾರ್ಥಿಗಳ ಬೆನ್ನತ್ತಿದ ಅಧಿಕಾರಿಗಳು…!

    ಚಾಮರಾಜನಗರ: ಮಹಾಮಾರಿ ಕರೊನಾ ವೈರಸ್​ ಆತಂಕದ ನಡುವೆಯೂ ಕೊನೆಯದಾಗಿ ಉಳಿದುಕೊಂಡಿದ್ದ ಪಿಯುಸಿ ಇಂಗ್ಲಿಷ್​ ಪರೀಕ್ಷೆಯು ಸುರಕ್ಷಿತ ಕ್ರಮಗಳೊಂದಿಗೆ ಯಶಸ್ವಿಯಾಗಿದೆ. ಆದರೆ, ಅನೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದು, ಇದೀಗ ಅಧಿಕಾರಿಗಳು ಅವರ ಬೆನ್ನ ಹಿಂದೆ ಬಿದ್ದಿದ್ದಾರೆ.

    ಇದನ್ನೂ ಓದಿ: ಅರೆಬೆತ್ತಲೆ ದೇಹದ ಮೇಲೆ ಮಕ್ಕಳಿಂದಲೇ ಡ್ರಾಯಿಂಗ್​ ಬಿಡಿಸಿಕೊಂಡಿದ್ದ ರೆಹಾನಾಗೆ ಮತ್ತೊಂದು ಸಂಕಷ್ಟ!

    ಪಿಯುಸಿ ಇಂಗ್ಲೀಷ್ ಪರೀಕ್ಷೆಗೆ ಗೈರಾದವರ ಕಾರಣ ತಿಳಿಯುವ ನೂತನ ಯತ್ನಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಉಸ್ತುವಾರಿ ಜಿಲ್ಲೆ ಚಾಮರಾಜನಗರದಲ್ಲಿನ ಅಧಿಕಾರಿಗಳು ಕೈಹಾಕಿದ್ದಾರೆ.

    ಇದೇ ತಿಂಗಳ 18ರಂದು ಇಂಗ್ಲಿಷ್​ ಪರೀಕ್ಷೆ ನಡೆದಿತ್ತು. ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 6033 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆದರೆ, 264 ವಿದ್ಯಾರ್ಥಿಗಳು ಪಿಯುಸಿ ಕೊನೆಯ ಇಂಗ್ಲಿಷ್ ಪರೀಕ್ಷೆಗೆ ಗೈರಾಗಿದ್ದರು. ಪರೀಕ್ಷೆಗೆ ವಿದ್ಯಾರ್ಥಿಗಳು ಗೈರಾಗಲು ಕಾರಣ ತಿಳಿಯಲು ಶಿಕ್ಷಣ ಇಲಾಖೆ ಮುಂದಾಗಿದೆ.

    ಇದನ್ನೂ ಓದಿ: ಬಂದ್ರೆ ಬರಬೇಕು ಇಂಥಾ ಅದೃಷ್ಟ: ರಾತ್ರೋರಾತ್ರಿ 25 ಕೋಟಿ ರೂ. ಒಡೆಯನಾದ ಗಣಿಕೆಲಸಗಾರ!

    ಪರೀಕ್ಷೆಗೆ ಗೈರಾಗಲು ಕರೊನಾ ಕಾರಣನಾ? ಜ್ವರ, ಶೀತ ಕೆಮ್ಮವಿನಿಂದ ಬಳಲುತ್ತಿದ್ರಾ? ಸರ್ಕಾರ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೊಟ್ಟಿದ್ರು ಗೈರಾಗಲು ಕಾರಣವೇನು? ಎಂದು ತಿಳಿಯಲು ಜಿಲ್ಲೆಯ ಎಲ್ಲಾ ಪ್ರಾಂಶುಪಾಲರಿಗೆ ಗೈರಾದ ವಿದ್ಯಾರ್ಥಿಗಳನ್ನು ಕೌಲ್ಸನಿಂಗ್ ಮಾಡಲು ಡಿಡಿಪಿಯು ಸೂಚನೆ ನೀಡಿದೆ. ಆದಷ್ಟು ಬೇಗ ಕೌನ್ಸಲಿಂಗ್ ಮುಗಿಸಿ ವರದಿ ನೀಡುವಂತೆ ಹೇಳಿದೆ. (ದಿಗ್ವಿಜಯ ನ್ಯೂಸ್​)

    ಜನರ ಕೈಗೆ ಹಣ ಕೊಟ್ಟು ಮತ್ತೊಮ್ಮೆ ಲಾಕ್​ಡೌನ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts