More

    10 ಗಂಟೆ ನಿರಂತರ ವಿದ್ಯುತ್ ಪೂರೈಕೆ ಮಾಡಿ

    ವಾಡಿ: ನಾಲವಾರ ವಲಯದಲ್ಲಿ ನೀರಾವರಿ ಆಧಾರಿತ ರೈತರು ವಿದ್ಯುತ್ ನಂಬಿ ಶೇಂಗಾ ಬಿತ್ತನೆ ಮಾಡಿz್ದÁರೆ. ಆದರೆ ವಿದ್ಯುತ್ ಸಮಸ್ಯೆಯಿಂದ ಬೆಳೆಗೆ ನೀರುಣಿಸಲು ಆಗದೆ ಬಾಡಿ ಹೋಗುತ್ತಿವೆ. ಹೀಗಾಗಿ ನಿರಂತರ 10 ಗಂಟೆ ವಿದ್ಯುತ್ ನೀಡಬೇಕು ಎಂದು ಅಖಿಲ ಭಾರತ ಕಿಸಾನ್ ಖೇತ್ ಮಜ್ದೂರ್ ಸಂಘಟನೆ (ಎಐಕೆಕೆಎಂಎಸ್) ಜಿಲ್ಲಾ ಕಾರ್ಯದರ್ಶಿ ಮಹೇಶ ಎಸ್.ಬಿ. ಆಗ್ರಹಿಸಿದರು.

    ಹಣ್ಣಿಕೇರಾ, ಲಾಡ್ಲಾಪುರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಮಾತನಾಡಿ, ಬರ ಪರಿಸ್ಥಿತಿಯಿಂದ ರೈತರು ನಲುಗಿದ್ದು, ಇದೀಗ ವಿದ್ಯುತ್ ಕಣ್ಣಮುಚ್ಚಾಲೆ ಸಾಕಷ್ಟು ಸಮಸ್ಯೆ ತಂದೊಡ್ಡಿದೆ. ಕರೆಂಟ್ ಅಭಾವದಿಂದ ಹೊಲಗಳಿಗೆ ನೀರು ಪೂರೈಸಲು ಆಗುತ್ತಿಲ್ಲ. ಕೈಗೆ ಬಂದಿರುವ ಬೆಳೆಯನ್ನು ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.
    ಕೆಲವೆಡೆ ರಾತ್ರಿ ವೇಳೆ ವಿದ್ಯುತ್ ನೀಡುತ್ತಿದ್ದು, ವಿಷ ಜಂತುಗಳ ಕಾಟದ ಮಧ್ಯೆಯೂ ರೈತರು ಜೀವ ಕೈಯಲ್ಲಿ ಹಿಡಿದುಕೊಂಡು ನೀರು ಬಿಡಲು ಹೊಲಕ್ಕೆ ತೆರಳಬೇಕಾಗಿದೆ. ಸದ್ಯ 5 ತಾಸು ಕರೆಂಟ್ ಕೊಡುತ್ತಿದ್ದು, ಅದರಲ್ಲೂ ತಾಂತ್ರಿಕ ಕಾರಣ ಹೇಳಿ 4-5 ಬಾರಿ ಕಡಿತ ಮಾಡಲಾಗುತ್ತಿದೆ. ಹೀಗಾದರೆ ಬೆಳೆಗಳಿಗೆ ನೀರುಣಿಸಲು ಹೇಗೆ ಸಾಧ್ಯ ? ರೈತಾಪಿ ವರ್ಗ ಒಗ್ಗಟ್ಟಾಗಬೇಕು, ನಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಾವೇ ಹೋರಾಟ ನಡೆಸಬೇಕಿದೆ. ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಚುರುಕು ಮುಟ್ಟಿಸಲು ಪ್ರತಿಭಟನೆ ಅಗತ್ಯವಾಗಿದೆ ಎಂದರು.

    ಚಿತ್ತಾಪುರ ತಾಲೂಕು ಉಪಾಧ್ಯP್ಷÀ ಗುಂಡಣ್ಣ ಎಂ.ಕೆ. ಮಾತನಾಡಿ, ಜಿ¯್ಲೆಯ ರೈತರ ಪಂಪ್‌ಸೆಟ್‌ಗಳಿಗೆ 10 ತಾಸು ನಿರಂತರ 3 ಫೇಸ್ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿ ಸೋಮವಾರ ಚಿತ್ತಾಪುರ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು. ಎಲ್ಲ ರೈತರು ಸಾಥ್ ನೀಡಬೇಕು ಎಂದು ಮನವಿ ಮಾಡಿದರು.

    ಪ್ರಮುಖರಾದ ಚಂದ್ರಶೇಖರ ಸಜ್ಜನಶೆಟ್ಟಿ, ಮೌಲನಾಸಾಬ್ ಹಣ್ಣಿಕೇರಾ, ಬಸವರಾಜ ಬಳಗಾರ, ದೇವಿಂದ್ರ ಪೂಜಾರಿ, ಮಲ್ಲಿನಾಥ ಮಂಗಾನೂರು, ಶರಣಪ್ಪ ಗಂಜಿ, ಅನಿಲಕುಮಾರ ಬೆನಕನಹಳ್ಳಿ, ಜಗದೀಶ ಪಾಟೀಲ್, ಭೀಮರಾಯ ಕೋಟಗಿರಿ, ಸಾಬಣ್ಣ ಪೂಜಾರಿ, ಬಸಪ್ಪ ಪೂಜಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts