More

    ವಿವಿಧ ಬೇಡಿಕೆ ಈಡೇರಿಕೆಗೆ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ

    ತುಮಕೂರು : ಅಂಗನವಾಡಿ ಕಾರ್ಯಕರ್ತರಿಗೆ ವೇತನ ಬಿಡುಗಡೆಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸರ್ಕಾರಕ್ಕೆ ಸಲ್ಲಿಸಿರುವ 339.48 ಕೋಟಿ ರೂ. ಅನುದಾನವನ್ನು ಕೂಡಲೇ ಬಿಡುಗಡೆ ವಾಡಬೇಕು, ಮಕ್ಕಳಿಗೆ ಕೋಳಿ ಮೊಟ್ಟೆ ಹಂಚಿಕೆಯಲ್ಲಿ ಆಗಿರುವ ಅವ್ಯವಹಾರದ ತನಿಖೆ ಮಾಡಬೇಕು ಎಂದು ಆಗ್ರಹಿಸಿ ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಮುಂದೆ ಸೋಮವಾರ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.

    ರಾಜ್ಯ ಅಂಗನವಾಡಿ ನೌಕಕರ ಯೂನಿಯರ್ ಜಿಲ್ಲಾಧ್ಯಕ್ಷ ಜಿ.ಕಮಲಾ ಮಾತನಾಡಿ, 2016ರಿಂದ ಇದುವರೆಗೂ ನಿವೃತ್ತರಾಗಿರುವ ಅಂಗನವಾಡಿ ಕಾರ್ಯಕರ್ತೆರು ಮತ್ತು ಸಹಾಯಕಿಯರಿಗೆ ಇದುವರೆಗೂ ಇಡಿಗಂಟಾಗಲಿ, ಎನ್‌ಪಿಎಸ್ ಧನವಾಗಲಿ ನೀಡಿಲ್ಲ. ಅಲ್ಲದೆ ಇಲಾಖೆಗೆ ಹೊಸದಾಗಿ ಕಾರ್ಯಕರ್ತರಾಗಿ ನೇಮಕವಾಗುವ ಕಾರ್ಯಕರ್ತೆಯರಿಗೂ ನ್ಯಾಯಯುತ ವೇತನ ನೀಡುತ್ತಿಲ್ಲ ಎಂದರು.

    15 ವರ್ಷ ಸೇವೆ ಸಲ್ಲಿಸಿದ ಹಿರಿಯ ಕಾರ್ಯಕರ್ತೆಯರಿಗೆ ತಲಾ 10ಸಾವಿರ ರೂ. ವೇತನ ನೀಡಲಾಗುತ್ತಿದೆ. ಇದನ್ನು ಬದಲಾಯಿಸಿ, ಸೇವಾ ಹಿರಿತನ ಪರಿಗಣಿಸುವಂತೆ ಇಲಾಖೆ ಮುಂದೆ ಬೇಡಿಕೆ ಇಟ್ಟ ಪರಿಣಾಮ 20 ವರ್ಷ ಸೇವೆ ಸಲ್ಲಿಸಿದವರಿಗೆ 2000 ರೂ. 15 ವರ್ಷದವರಿಗೆ 1500 ರೂ. 10 ವರ್ಷದವರಿಗೆ 1000ರೂ. ಮತ್ತು 5 ವರ್ಷದವರಿಗೆ 500 ರೂ. ಹೆಚ್ಚುವರಿ ನೀಡಲು ಇಲಾಖೆಗೆ 6.99ಕೋಟಿ ರೂ. ಮನವಿ ಹಾಗೂ ಇನ್ನಿತರ ವೇತನ ತಾರತಮ್ಯ ನಿವಾರಣೆಗೆ ಒಟ್ಟು 139.49 ಕೋಟಿ ರೂಪಾಯಿ ಪ್ರಸ್ತಾವನೆ ಸಲ್ಲಿಸಿದ್ದರೂ ಇದುವರೆಗೂ ಬಿಡುಗಡೆಯಾಗಿಲ್ಲ ಎಂದರು.

    ಜಿಲ್ಲೆಯಲ್ಲಿ ಕರೊನಾ ಮೊದಲನೆ ಅಲೆಯಲ್ಲಿ 28 ಜನ ಮತ್ತು ಎರಡನೇ ಅಲೆಯಲ್ಲಿ 16 ಜನ ಬಲಿಯಾದರೆ, 173ಜನರು ಸೋಂಕಿಗೆ ಒಳಗಾಗಿದ್ದಾರೆ. ್ರಂಟ್‌ಲೈನ್ ವರ್ಕಸ್ಸ್ ಆಗಿ ಕಾರ್ಯನಿರ್ವಹಿಸಿದ ಇವರಿಗೆ ಸರ್ಕಾರವೇ ಭರವಸೆ ನೀಡಿದಂತೆ ಕೂಡಲೇ 1 ಲಕ್ಷ ರೂ. ಪರಿಹಾರವನ್ನು ಬಿಡುಗಡೆ ವಾಡಬೇಕು ಎಂದು ಒತ್ತಾಯಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

    ಪ್ರತಿಭಟನೆಯಲ್ಲಿ ಗುಲ್ಜಾರ್ ಭಾನು, ಗೌರಮ್ಮ, ಗಂಗಮ್ಮ, ತಾಲೂಕು ಅಧ್ಯಕ್ಷರಾದ ಜಬಿನಾಖಾನಂ, ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮತ್ತಿತರರು ನೇತೃತ್ವ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts