ಸಿನಿಮಾ

ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ

ಬಸವನಬಾಗೇವಾಡಿ: ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಹಾಗೂ ಶಿವಾನಂದ ಪಾಟೀಲ ಉಪ ಮುಖ್ಯಮಂತ್ರಿ ಎಂದು ಘೋಷಿಸಬೇಕು ಎಂದು ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ಮಾಡುವ ಮೂಲಕ ಹಲವರು ಬುಧವಾರ ಪ್ರತಿಭಟನೆ ಮಾಡಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತಾಲೂಕು ಹಾಲುಮತ ಸಮಾಜ ಹಾಗೂ ವಿವಿಧ ಸಮಾಜದ ಮುಖಂಡರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಕೆಲ ಹೊತ್ತು ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ಮಾಡಿದರು.

ಹಾಲುಮತ ಸಮಾಜ ಮುಖಂಡ ಸಂಗಮೇಶ ಓಲೇಕಾರ ಮಾತನಾಡಿ, ಸಿದ್ದರಾಮಯ್ಯನವರು ಐದು ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಎಲ್ಲ ವರ್ಗದವರನ್ನು ಸಮಾನವಾಗಿ ನೋಡುವ ಮನೋಧರ್ಮ ಅವರದ್ದಾಗಿದ್ದು, ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿದರೆ ರಾಜ್ಯ ಅಭಿವೃದ್ಧಿಪಥದತ್ತ ಸಾಗಲು ಸಾಧ್ಯ ಎಂದು ಹೇಳಿದರು.

ಶಿವಾನಂದ ಪಾಟೀಲರು ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ್ದು, ಪಂಚಮಸಾಲಿ ಸಮಾಜದ ನಾಯಕರಾಗಿದ್ದಾರೆ. ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದರಿಂದ ಮುಂಬರುವ ಲೋಕಸಭೆ, ಜಿ.ಪಂ. ಚುನಾವಣೆಗಳಿಗೆ ಸಹಕಾರಿಯಾಗಲಿದೆ ಎಂದರು.

ನಿಂಗಯ್ಯ ಗುರವಿನ, ಮುತ್ತು ಒಡೆಯರ, ಸಿದ್ದು ಹೇರಕಲ್ಲ, ಕಾಂತು ಹಿರೇಕುರುಬರ, ಶೇಕಪ್ಪ ಅಂಬಳನೂರ, ಶಿವಾನಂದ ವಾಡೇದ, ಕರಿಯಪ್ಪ ಬಂಚೋಡಿ, ಪರಶುರಾಮ ಪೂಜಾರಿ, ಮೌನೇಶ ನಾಗೊಡ, ಶಿವು ಬಸ್ತಾಳ, ಶಾಂತು ಹೊನ್ನೂರ, ಸಂಗಮೇಶ ಹಾರಿವಾಳ, ಶೇಖು ನಾಲ್ತವಾಡ, ಬಂಗಾರೇಶ ಪೂಜಾರಿ, ಮೇರಾಸಾಬ ಕೊರಬು, ರಾಘವೇಂದ್ರ ಅಂಬಳನೂರ, ಶಿವು ಅಂಬಳನೂರ, ಮುತ್ತು ಕುರಿ, ಸಲಿಂ ಚಪ್ಪರಬಂದ, ಮೌನೇಶ ನಾಗೊಡ, ಹನುಮಂತ ತಳೇವಾಡ ಇತರರಿದ್ದರು.

Latest Posts

ಲೈಫ್‌ಸ್ಟೈಲ್