More

    ಹಕ್ಕುಪತ್ರಕ್ಕೆ ಸಂಪಹಳ್ಳಿ ಗ್ರಾಮಸ್ಥರ ಒತ್ತಾಯ: ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

    ಮಂಡ್ಯ: ತಾಲೂಕಿನ ಸಂಪಹಳ್ಳಿ ಗ್ರಾಮದ ದಲಿತರಿಗೆ ನಿವೇಶನ ಗುರುತಿಸಿ ಕೂಡಲೇ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
    ಹಲವು ವರ್ಷಗಳಿಂದ ಜೀವಂತವಾಗಿರುವ ಈ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಹಲವು ಸಲ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.
    ಸರ್ಕಾರ ಸ.ನಂ 129ರಲ್ಲಿ ಸಂಪಹಳ್ಳಿ ದಲಿತರಿಗೆ ನಿವೇಶನ ನೀಡಲು 4 ಎಕರೆ 32 ಗುಂಟೆ ಜಮೀನನ್ನು ಎಸ್.ಡಬ್ಲುೃ.ಸಿ.ಆರ್.60/82-83ರಲ್ಲಿ ಸ್ವಾಧೀನ ಮಾಡಿಕೊಂಡಿತ್ತು. ಬಳಿಕ ಪರಿಶಿಷ್ಟ ಜಾತಿಯ 40 ಕುಟುಂಬಗಳಿಗೆ ನಿವೇಶನ ಹಕ್ಕುಪತ್ರವನ್ನು 1987 ಜ.3ರಂದು ಹಂಚಿಕೆ ಮಾಡಿತ್ತು. ಈ ಪೈಕಿ 12 ಕುಟುಂಬಗಳಿಗೆ ಮುದ್ರಣ ತಪ್ಪಾಗಿದೆ ಎಂದು ಹಕ್ಕು ಪತ್ರ ವಾಪಸ್ ಪಡೆದಿದ್ದು, ಇದುವರೆಗೂ ಹಕ್ಕುಪತ್ರ ನೀಡಿಲ್ಲ ಎಂದು ದೂರಿದರು.
    28 ಕುಟುಂಬಕ್ಕೆ ಹಕ್ಕು ಪತ್ರ ನೀಡಿರುವಂತೆ ಉಳಿದ 12 ಕುಟುಂಬಗಳಿಗೂ ಜಾಗ ಅಳತೆ ಮಾಡಿ ಹದ್ದುಬಸ್ತು ಅಳತೆ ಮಾಡಿ, ಕ್ರಮ ಸಂಖ್ಯೆಯಂತೆ ಜಾಗ ಗುರುತಿಸಿ ಕೊಟ್ಟಿಲ್ಲ. ಇದರಿಂದಾಗಿ ಯಾರಿಗೆ ಯಾವ ಜಾಗವೆಂದು ಗೊಂದಲ ಉಂಟಾಗಿದೆ. ಗ್ರಾಮ ಪಂಚಾಯಿತಿಯಿಂದ ಮನೆ ಕಟ್ಟಲು ಗ್ರಾೃಂಟ್‌ಗಳು ಮಂಜೂರಾಗುತ್ತಿಲ್ಲ. ಮೂಲಸೌಲಭ್ಯಗಳಾದ ರಸ್ತೆ, ಚರಂಡಿ ಸೇರಿದಂತೆ ಯಾವ ಸೌಕರ್ಯವನ್ನು ನೀಡಿಲ್ಲ. ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿರುವ ನಮಗೆ ಗ್ರಾಮ ಪಂಚಾಯಿತಿಯಿಂದ ಸೌಲಭ್ಯ ಪಡೆಯಲು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಆರ್.ಕೃಷ್ಣ, ಗ್ರಾಪಂ ಸದಸ್ಯ ಸಂತೋಷ್‌ಕುಮಾರ್, ಅಂಬೂಜಿ, ಶ್ರೀನಿವಾಸ್, ಸುರೇಶ್, ಯಶವಂತ್, ಲೋಕೇಶ್, ಎಚ್.ಎಸ್.ಸತೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts