More

    ರಾಷ್ಟ್ರೀಯ ಹೆದ್ದಾರಿ ಬಂದ್ 17ರಂದು

    ವಿಜಯವಾಣಿ ಸುದ್ದಿಜಾಲ ಬಂಕಾಪುರ

    ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿರುವ ಹಿಂದು ಸ್ಮಶಾನಕ್ಕೆ ತೆರಳಲು ಹಳ್ಳಿಕೇರಿ ಬಸವೇಶ್ವರ ದೇವಸ್ಥಾನದ ಹತ್ತಿರ ಅಂಡರ್ ಪಾಸ್ ನಿರ್ವಿುಸುವಂತೆ ಆಗ್ರಹಿಸಿ ಜ. 17ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲು ಪಟ್ಟಣದ ಆಂಜನೇಶ್ವರ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

    ಪಟ್ಟಣದ ಹಿಂದುಗಳ ಶವ ಸಂಸ್ಕಾರಕ್ಕೆ ರಾಷ್ಟ್ರೀಯ ಹೆದ್ದಾರಿ ದಾಟಿಕೊಂಡು ಹೋಗಬೇಕಾಗಿದೆ. ವಾಹನ ಸಂಚಾರದಿಂದ ಕೂಡಿದ್ದು, ಶವ ಸಂಸ್ಕಾರಕ್ಕೆ ತೆರಳಲು, ರೈತರು ಚಕ್ಕಡಿ, ಎತ್ತು ತೆಗೆದುಕೊಂಡು ಹೊಲಕ್ಕೆ ಹೋಗಲು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ಕುರಿತು ಹಲವು ಬಾರಿ ಜನಪ್ರತಿನಿಧಿಗಳಿಗೆ, ಹೆದ್ದಾರಿ ಪ್ರಾಧಿಕಾರ, ಪೊಲೀಸ್, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ ಎಂದು ಮುಖಂಡರು ತಿಳಿಸಿದರು.

    ಅಂದು ನಡೆಯುವ ಪ್ರತಿಭಟನೆಯಲ್ಲಿ ಪಟ್ಟಣದ ಎಲ್ಲ ಹಿಂದು ಸಮಾಜದ ಪ್ರತಿಯೊಬ್ಬರೂ ಭಾಗವಹಿಸಿ ಹಿಂದು ಸ್ಮಶಾನ ಅಭಿವೃದ್ಧಿ ಹೋರಾಟ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

    ರಾಮಣ್ಣ ರಾಣೋಜಿ, ಬಸವರಾಜ ನಾರಾಯಣಪುರ, ನಿಂಗನಗೌಡ ಪಾಟೀಲ, ಹೊನ್ನಪ್ಪ ಹೂಗಾರ, ಲಿಂಗರಾಜ ಹಳವಳ್ಳಿ, ಶಂಭಣ್ಣ ವಳಗೇರಿ, ಮಲ್ಲೇಶಪ್ಪ ಬಡ್ಡಿ, ಮಂಜುನಾಥ ಕೂಲಿ, ಶಿವಾನಂದ ಗೌಡರ, ಎಂ.ಎನ್. ಹೊನಕೇರಿ, ಬಾಪುಗೌಡ ಪಾಟೀಲ, ಸತೀಶ ಆಲದಕಟ್ಟಿ, ಮಂಜುನಾಥ ಕೂಲಿ, ಸುರೇಶ ಗಾಳೆಮ್ಮನವರ, ಸೋಮಶೇಖರ ಗೌರಿಮಠ, ನೀಲಪ್ಪ ಕುರಿ, ಮಾನಿಂಗಪ್ಪ ಹಳವಳ್ಳಿ, ದಶರಥ ಬಾಲಸಿಂಗನವರ ಸೇರಿ ಪಟ್ಟಣದ ವಿವಿಧ ಸಂಘಟನೆಗಳ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts