More

    ಕರ್ನಾಟಕ ಬಂದ್​ಗೆ ನೀರಸ ಪ್ರತಿಕ್ರಿಯೆ

    ಗದಗ: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ಕೊಟ್ಟಿದ್ದ ಬಂದ್​ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬಂದ್ ಕೇವಲ ಪ್ರತಿಭಟನೆಗೆ ಸೀಮಿತಗೊಂಡಿತ್ತು.

    ನಿಗಮ ಸ್ಥಾಪಿಸಿರುವುದನ್ನು ಸಮರ್ಥಿಸಿಕೊಂಡ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಪ್ರತಿಕೃತಿ ದಹಿಸುವ ಯತ್ನವೂ ನಡೆಯಿತು. ಆದರೆ, ಪೊಲೀಸರು ಅದಕ್ಕೆ ಆಸ್ಪದ ನೀಡದಿದ್ದಾಗ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಹನುಮಂತಪ್ಪ ಅಬ್ಬಿಗೇರಿ ನೇತೃತ್ವ ವಹಿಸಿದ್ದರು.

    ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಶನಿವಾರ ನಗರದ ಮುಳಗುಂದ ನಾಕಾ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಚಂದ್ರಕಾಂತ ಚವ್ಹಾಣ, ರಫೀಕ್ ತೋರಗಲ್, ರಮೇಶ ರಾಠೋಡ, ಬಾಷಾಸಾಬ ಮಲ್ಲಸಮುದ್ರ, ಈಶ್ವರ ಲಕ್ಷೆ್ಮೕಶ್ವರ, ವಿಕಾಸ ಕ್ಷೀರಸಾಗರ, ನಾಗರಾಜ ಕ್ಷತ್ರೀಯ, ವಿಠ್ಠಲ ಬೆಂತೂರ, ಮೇಘರಾಜ ಮೂಲಿಮನಿ, ನವೀನ ಬಂಡಾರಿ, ಕನಕಪ್ಪ ಬಳಗಾನೂರ, ಹನುಮಂತಗೌಡ ಪಾಟೀಲ, ರಾಜಾಹುಲಿ ಪೂಜಾರ, ಇಮಾಮ್ಾಬ ಕಲೆಗಾರ, ರಜಾಕ್, ಶೌಕತ್ ಇತರರು ಇದ್ದರು.

    ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಜೈ ಭೀಮ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು. ಗಣೇಶ ಹುಬ್ಬಳ್ಳಿ, ದಾದಾಪೀರ ಕಲೆಗಾರ, ಉಸ್ಮಾನ ಚಿತ್ತಾಪೂರ ಮಾತನಾಡಿದರು. ಅಂಜುಮನ್ ಕಮಿಟಿಯ ಯುಸೂಫ್ ನಮಾಜಿ, ಡಿಎಸ್​ಎಸ್ ಸಂಚಾಲಕ ಬಾಲರಾಜ ಅರಬರ, ಪ್ರಜಾಶಕ್ತಿ ಮಹಿಳಾ ಘಟಕದ ಅಫ್ರೋಜಾ ಡಾಲಾಯತ್, ಶ್ರುತಿ ಹಿರೇಮಠ, ರಾಘವೇಂದ್ರ ಪರಾಪೂರ, ಜಗದೀಶ ಹಿರೇಮಠ, ಮಂಜು ಬಳ್ಳಾರಿ, ಅಪ್ಪು ಕಲೆಗಾರ, ಮಂಜುನಾಥ ತೌಜಲ್, ರಾಷ್ಟ್ರೀನ್ ಜೋಸೆಫ್, ಹೇಮಂತ ಹುಬ್ಬಳ್ಳಿ, ವಿಜಯ ಪೂಜಾರ, ಬಸವರಾಜ ಬದಾಮಿ, ರಾಜೇಶ ಶೆಟ್ಟರ ಇತರರು ಇದ್ದರು.

    ನಿಗಮ ಕೈಬಿಡಿ, ಜನರ ಸಮಸ್ಯೆಗೆ ಸ್ಪಂದಿಸಿ

    ಲಕ್ಷ್ಮೇಶ್ವರ: ಪಟ್ಟಣದಲ್ಲಿ ಕರವೇ ನಾರಾಯಣಗೌಡ ಬಣ ಮತ್ತು ಜಯಕರ್ನಾಟಕ ಸಂಘಟನೆಯವರು ಶನಿವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಬ್ರಮರಾಂಭ ಗುಬ್ಬಿಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.

    ‘ಅತಿವೃಷ್ಟಿ, ಅನಾವೃಷ್ಟಿಯಿಂದ ತೊಂದರೆ ಗೊಳಗಾದ ಜನರ ನೋವಿಗೆ ಸ್ಪಂದಿಸುವುದು ಬಿಟ್ಟು ವೃಥಾ ನಿಗಮಗಳ ಸ್ಥಾಪನೆಗೆ ಕೈ ಹಾಕಿರುವ ಸರ್ಕಾರ ಕ್ರಮ ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕರವೇ ನಾರಾಯಣಗೌಡ ಬಣದ ತಾಲೂಕು ಅಧ್ಯಕ್ಷ ನಾಗೇಶ ಅಮರಾಪೂರ, ಅಷ್ಪಾಕ್ ಬಾಗೋಡಿ, ಅಪ್ಪು ಉಮಚಗಿ, ಹನುಮಂತ ದುತ್ತರಗಿ, ಗೌರಮ್ಮ ಗೋಡಿ, ಪಾರ್ವತಿ ತೆಲಗಿಮಠ, ಸಾವಿತ್ರಿ ಅತ್ತಿಗೇರಿ, ಶೋಭಾ ಕಡಕೋಳ, ಕಾವೇರಿ ಪಕ್ಕೇದ, ಆಯುಷ್ಯಾ ಬೆಟಗೇರಿ, ಗೌರಮ್ಮ ಹಳ್ಳಿಕೇರಿ, ಮಲ್ಲಿಕಾರ್ಜುನ ಯತ್ನಳ್ಳಿ, ದಾವುದ್​ಖಾನ ಕಾರಡಗಿ, ಕೈಸರ್​ವುಹ್ಮದಲಿ, ಮೈನು ಮನಿಯಾರ ಜಯಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಇಸ್ಮಾಯಿಲ್ ಆಡೂರ, ರಮೇಶ ಲಮಾಣಿ, ಇಸಾಕ್​ಬಾಷಾ ಹರಪನಹಳ್ಳಿ, ರಮೇಶ ಹಂಗನಕಟ್ಟಿ, ರಾಜು ಕೋಲ್ಕಾರ್ ಇತರರಿದ್ದರು.

    ಶಾಂತಿಯುತ ಪ್ರತಿಭಟನೆ: ಕರವೇ ಪ್ರವೀಣಶೆಟ್ಟಿ ಬಣದ ಕಾರ್ಯಕರ್ತರು ಶಾಂತಿಯುತವಾಗಿ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಮಹೇಶ ಕಲಘಟಗಿ, ಮಂಜುನಾಥ ಗಾಂಜಿ, ಇಲಿಯಾಸ್ ಮೀರಾನವರ, ಸಾಹಿಬಲಾಲ್ ಕಲೆಗಾರ, ಜಿಲಾನಿ ಖವಾಸ್, ಸುಲೇಮಾನ್ ಬಾರಿಗಿಡದ, ಇಸ್ಮಾಯಿಲ್ ಶೇಖ್, ಮುರಮ್ಾಬ ಸೌಧಾಗರ, ಶಿವಲೀಲಾ ಗೊಂಡಬಾಳ ಇತರರಿದ್ದರು.

    ವ್ಯಾಪಾರ ವಹಿವಾಟು ಎಂದಿನಂತೆ

    ನರೇಗಲ್ಲ: ಬಂದ್​ಗೆ ಹೋಬಳಿಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸರ್ಕಾರಿ ಕಚೇರಿ, ಬ್ಯಾಂಕ್​ಗಳು, ಸಾರಿಗೆ, ವ್ಯಾಪಾರ ವಹಿವಾಟು ಎಂದಿನಂತೆ ಇತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಡಿಆರ್ ವಾಹನವನ್ನು ನಿಯೋಜಿಸಲಾಗಿತ್ತು.

    ಮತದಾರರ ಓಲೈಕೆ ಆರೋಪ

    ನರಗುಂದ: ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಎ.ಎಚ್. ಮಹೇಂದ್ರ ಅವರಿಗೆ ಮನವಿ ಸಲ್ಲಿಸಿದರು. ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಬೈಕ್ ರ‍್ಯಾಲಿ ಮೂಲಕ ತಹಸೀಲ್ದಾರ್ ಕಚೇರಿವರೆಗೆ ತೆರಳಿ ಶಿರಸ್ತೇದಾರ್ ಎಸ್.ಸುನಂದಾ ಅವರಿಗೆ ಮನವಿ ಸಲ್ಲಿಸಿದರು. ಪಟ್ಟಣದಲ್ಲಿ ವ್ಯಾಪಾರ ವಹಿವಾಟು, ವಾಹನಗಳ ಓಡಾಟ ಎಂದಿನಂತಿತ್ತು. ಕರವೇ ತಾಲೂಕು ಅಧ್ಯಕ್ಷ ನಭಿಸಾಬ್ ಕಿಲ್ಲೇದಾರ, ಹನುಮಂತ ಮಜ್ಜಿಗುಡ್ಡ, ರಾಘವೇಂದ್ರ ಗುಜಮಾಗಡಿ, ಚನ್ನು ನಂದಿ, ಬಸವರಾಜ ತಾವರೆ, ಬಾಬುಸಾಬ್ ಹಜರತನವರ, ಮಲ್ಲಪ್ಪ ಯಾದವಾಡ, ದಾವಲಸಾಬ ಗಸ್ತಿ, ಗೈಬುಸಾಬ ಮಕಾನದಾರ, ಈಶ್ವರಯ್ಯ ಹಿರೇಮಠ, ನಿಂಗನಗೌಡ ಪಾಟೀಲ, ಕೃಷ್ಣ ಮುಳ್ಳೂರ, ಕೃಷ್ಣ ಲಮಾಣಿ, ಮಹ್ಮದ್ ಮಸೂದ ಖಲೀಫ, ಅಬ್ದುಲ್ ರಜಾಕ ಬಣಗಾರ, ವಿಜಯ ಬಡಿಗೇರ, ಇತರರಿದ್ದರು.

    ಕ್ಷತ್ರೀಯ ಅಭಿವೃದ್ಧಿ ಪ್ರಾಧಿಕಾರ ರಚಿಸಿ

    ಶಿರಹಟ್ಟಿ: ಪಟ್ಟಣದಲ್ಲಿ ಸಾರಿಗೆ ಬಸ್ ಹಾಗೂ ಖಾಸಗಿ ವಾಹನಗಳ ಸಂಚಾರ, ಅಂಗಡಿ ಮುಂಗಟ್ಟು, ಹೋಟೆಲ್ ಇತರೆ ವ್ಯಾಪಾರ ವಹಿವಾಟು ಎಂದಿನಂತಿತ್ತು. ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಕರವೇ ತಾಲೂಕು ಅಧ್ಯಕ್ಷ ಬಸವರಾಜ ವಡವಿ ಮಾತನಾಡಿ, ‘ಸರ್ಕಾರ ಘೊಷಿಸಿರುವ ಮರಾಠ ಅಭಿವೃದ್ಧಿ ನಿಗಮ ರದ್ದು ಮಾಡಿ ಕ್ಷತ್ರೀಯ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು’ ಎಂದು ಒತ್ತಾಯಿಸಿದರು. ಕೆ.ವಿ. ಪುರ್ತಗೇರಿ, ಚನ್ನಪ್ಪಗೌಡ ಮರಿಗೌಡ್ರ, ದೇವೇಂದ್ರ ಶಿಂಧೆ, ಶರಣಪ್ಪ ಕಲ್ಲಪ್ಪನವರ, ನೂರ್​ಅಹ್ಮದ ಆದ್ರಳ್ಳಿ, ನಾಗರಾಜ ಬಕ್ಸದ, ಕರವೇ, ಅನ್ನಪೂರ್ಣ ಕಟ್ಟೇಕಾರ, ನೂರ್​ಅಹ್ಮದ್ ಮುಳಗುಂದ, ಉಮೇಶ ಪಲ್ಲೇದ ಇದ್ದರು.

    ಸರ್ಕಾರದಿಂದ ಏಕಾಏಕಿ ನಿರ್ಧಾರ

    ಮುಂಡರಗಿ: ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಎಪಿಎಂಸಿ ಸಂಪೂರ್ಣವಾಗಿ ಬಂದ್ ಆಗಿತ್ತು. ಬಹುತೇಕ ವ್ಯಾಪಾರ ವಹಿವಟು ಎಂದಿನಂತಿತ್ತು. ನಮ್ಮ ಕರವೇ ಸಂಘಟನೆಯ ಜಿಲ್ಲಾಧ್ಯಕ್ಷ ಚಂದ್ರಶೇಖರ ಪೂಜಾರ ಮಾತನಾಡಿ, ‘ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸುವುದರ ಬಗ್ಗೆ ಸರ್ಕಾರ ಏಕಾಏಕಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ’ ಎಂದರು. ಎಚ್.ಡಿ. ಪೂಜಾರ, ಭರಮಪ್ಪ ಕಿಲಾರಿ, ರಾಜಾಬಕ್ಷೀ ಬೆಟಗೇರಿ, ನಾಗರಾಜ ಹೊಂಬಳಗಟ್ಟಿ, ಸಂತೋಷ ಹಿರೇಮನಿ, ಅಬುಬಕರ್ ಚೌಥಾಯಿ, ಮನೋಜ ರಾಠೋಡ, ಮಂಜುನಾಥ ಡಂಬಳ, ಅಡಿವೆಪ್ಪ ಚಲವಾದಿ, ಸೋಮಪ್ಪ ಹೈತಾಪುರ, ಶರಣಬಸಪ್ಪ ಮುದಿಯಜ್ಜನವರ, ಬಸವರಾಜ ತಳವಾರ, ಸಲ್ಮಾನ ಡೋಣಿ, ಈರಣ್ಣ ತಳವಾರ, ರಾಮನಗೌಡ ಹಳೇಮನಿ, ಮಹ್ಮದ್ ಅಲಿ ಕಮಲಣ್ಣವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts