More

    ತೆಪ್ಪೆ ನಡೆಸುವವರ ಪ್ರತಿಭಟನೆ

    ಚಾಮರಾಜನಗರ : ಹನೂರು ಸಂಭಾವನೆ ಹೆಚ್ಚಳಕ್ಕೆ ಆಗ್ರಹಿಸಿ ಹೊಗೆನಕಲ್ ಫಾಲ್ಸ್‌ನಲ್ಲಿ ತೆಪ್ಪ ನಡೆಸುವವರು ಭಾನುವಾರ ಪ್ರತಿಭಟನೆ ನಡೆಸಿದರು. ಒಬ್ಬ ಪ್ರವಾಸಿಗನನ್ನು ತೆಪ್ಪೆಯಲ್ಲಿ ಕರೆದೊಯ್ದರೆ ಸರ್ಕಾರ 400 ರೂ. ನೀಡುತ್ತಿದೆ. ಇದನ್ನು 1,200 ರೂ.ಗೆ ಏರಿಕೆ ಮಾಡಬೇಕು ಎಂದು ಒತ್ತಾಯಿಸಿದರು.


    ತಮಿಳುನಾಡಿನಲ್ಲಿ ತೆಪ್ಪೆ ನಡೆಸುವವರಿಗೆ ಅಲ್ಲಿನ ಸರಕಾರ 1,700 ರೂ. ನಿಗದಿ ಮಾಡಿದೆ. ಅದರಂತೆ ರಾಜ್ಯದಲ್ಲೂ 1,200 ರೂ. ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

    ವಾರಾಂತ್ಯದ ದಿನಗಳು ಹಾಗೂ ರಜಾ ದಿನಗಳು, ಇನ್ನಿತರ ವಿಶೇಷ ದಿನಗಳಂದು ಹೊರತುಪಡಿಸಿ ಹೊಗೆನಕಲ್ ಫಾಲ್ಸ್‌ಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಅರಣ್ಯ ಇಲಾಖೆ ಮೂಲ ಸೌಕರ್ಯ ಒದಗಿಲು ನಿರ್ಲಕ್ಷೃ ತೋರುತ್ತಿದೆ. ಇದರಿಂದ ಪ್ರವಾಸಿಗರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.


    ಇನ್ನು ಫಾಲ್ಸ್ ವೀಕ್ಷಣೆ ಮಾಡುವ ಗೋಪುರದ ಸೇತುವೆ ಕುಸಿದು ಹಲವು ವರ್ಷಗಳಾಗಿವೆ. ಆದರೆ, ಇದುವರೆಗೂ ದುರಸ್ತಿಗೊಳಿಸಿಲ್ಲ. ಇದರಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts