More

    ಪ್ರಾಂತ ರೈತ ಸಂಘದಿಂದ ಪ್ರತಿಭಟನೆ

    ಮಳವಳ್ಳಿ: ಇಸ್ರೇಲ್ ಮತ್ತು ಪ್ಯಾಲಸ್ಟೇನ್ ನಡುವೆ ನಡೆಯುತ್ತಿರುವ ಯುದ್ಧದಿಂದ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ ಎಂದು ಆರೋಪಿಸಿ ಪ್ರಾಂತ ರೈತ ಸಂಘ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು.

    ಪಟ್ಟಣದ ಅನಂತರಾಮ್ ವೃತ್ತದಲ್ಲಿ ಮಂಗಳವಾರ ಜಮಾಯಿಸಿದ ಪ್ರತಿಭಟನಾಕಾರರು ಮಾತುಕತೆ ಮೂಲಕ ಇಸ್ರೇಲ್ ಮತ್ತು ಪ್ಯಾಲಸ್ಟೇನ್ ನಡುವಣ ಸಮಸ್ಯೆ ಇತ್ಯರ್ಥಪಡಿಸಲು ವಿಶ್ವಸಂಸ್ಥೆ ಮುಂದಾಗುವ ಮೂಲಕ ಮಹಿಳೆಯರು, ಮಕ್ಕಳ ಸಾವು ಮತ್ತು ಅಪಾರ ಪ್ರಮಾಣದ ಆಸ್ತಿ ನಷ್ಟ ಉಂಟಾಗುವುದನ್ನು ತಡೆಗಟ್ಟಬೇಕೆಂದು ಒತ್ತಾಯಿಸಿದರು.

    ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಎನ್.ಎಲ್.ಭರತ್‌ರಾಜ್ ಮಾತನಾಡಿ, ಜಗತ್ತಿನಲ್ಲಿ ಸಾಮರಸ್ಯ, ಸಹಬಾಳ್ವೆ ಬೆಳೆಯಬೇಕು. ಎಂತಹದ್ದೇ ಸಮಸ್ಯೆ ಬಂದರೂ ಮಾತುಕತೆಯೊಂದೆ ಪರಿಹಾರವಾಗಬೇಕು. ಯುದ್ಧದಿಂದ ಜೀವ ಹಾನಿಯಾಗುತ್ತದೆ. ಅಪಾರ ಪ್ರಮಾಣದ ಆಸ್ತಿ ನಷ್ಟ ಉಂಟಾಗುತ್ತದೆ. ಹಾಗಾಗಿ ಇಸ್ರೇಲ್ ಮತ್ತು ಪ್ಯಾಲಸ್ಟೇನ್ ನಡುವೆ ನಡೆಯುತ್ತಿರುವ ಯುದ್ಧವನ್ನು ತಡೆಗಟ್ಟಲು ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಬೇಕೆಂದು ಆಗ್ರಹಿಸಿದರು.

    ಪ್ರತಿಭಟನೆಯಲ್ಲಿ ಸಂಘಟನೆಯ ತಾಲೂಕು ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ, ಪ್ರಮೀಳಾ, ಹಿಪ್ಜುಲ್ಲಾ, ಮಹಾದೇವು, ಶಿವಕುಮಾರ್, ಮೂರ್ತಿ, ಸಿದ್ದರಾಜು, ಸತೀಶ್, ಚಿಕ್ಕಸ್ವಾಮಿ, ರಘುಸ್ವಾಮಿ, ಗಣೇಶ್, ಚಿಕ್ಕೀರಪ್ಪ, ಶಿವರಾಜ್ ಮುಂತಾದವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts