More

    ಕೂಲಿ ಕಾರ್ವಿುಕರಿಂದ ಪ್ರತಿಭಟನೆ

    ಹಿರೇಕೆರೂರ: ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ದಿನಗಳನ್ನು 200ಕ್ಕೆ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ವಿುಕರ ಸಂಘಟನೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

    ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಶಿರಸ್ತೇದಾರ್ ಎಚ್.ಎಚ್. ಹತ್ತಿಮತ್ತೂರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

    ಸಂಘಟನೆ ಸದಸ್ಯ ರಮೇಶ ಮುದ್ದಿನಕೊಪ್ಪ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ನೂರು ದಿನಗಳನ್ನು ಪೂರ್ಣಗೊಳಿಸಲಾಗಿದೆ. ಕರೊನಾ ಹಾವಳಿ ಹಿನ್ನೆಲೆಯಲ್ಲಿ ಸಾವಿರಾರು ಕಾರ್ವಿುಕರು ಕೆಲಸವಿಲ್ಲದೆ ತಮ್ಮ ಗ್ರಾಮಗಳಿಗೆ ವಲಸೆ ಬಂದಿದ್ದು, ಆಹಾರ ಧಾನ್ಯ ಖರೀದಿಸಲಾಗದೇ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅತಿವೃಷ್ಟಿಯಿಂದ ಹಲವರ ಬದುಕು ಬೀದಿಗೆ ಬಂದಂತಾಗಿದೆ. ತಕ್ಷಣ ಉದ್ಯೋಗ ಖಾತ್ರಿ ಯೊಜನೆಯ ಮಾನವ ದಿನಗಳನ್ನು ಹೆಚ್ಚಿಸಬೇಕು. ಹಾಗೆಯೇ ಇನ್ನೂ 6 ತಿಂಗಳ ಕಾಲ ಕಾರ್ವಿುಕರ ಕುಟುಂಬಗಳಿಗೆ ತಲಾ 5 ಕೆ.ಜಿ. ಆಹಾರ ಧಾನ್ಯ ವಿತರಿಸಬೇಕು ಎಂದು ಆಗ್ರಹಿಸಿದರು.

    ಸದಸ್ಯರಾದ ಗಂಗಮ್ಮ ಅಣ್ಣನವರ, ಪ್ರಸಾದ ರಾಯಚೂರು, ಬಸವರಾಜ, ಜಟ್ಟಪ್ಪ ದಿವಗೀಹಳ್ಳಿ, ರಾಜಪ್ಪ ಚಿನ್ನಮುಳಗುಂದ, ಚಂದ್ರಪ್ಪ ಹಾದ್ರಿಹಳ್ಳಿ, ಮುಭಾರಕ್ ಮುದ್ದಿನಕೊಪ್ಪ, ಮಹೇಶ ಶಿರಗಂಬಿ, ಹೇಮಪ್ಪ ದಿವಗೀಹಳ್ಳಿ, ಕಾರ್ವಿುಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts