More

    ಲಾರಿ ಚಾಲಕರು ಹಾಗೂ ಮಾಲೀಕರ ಸಂಘದಿಂದ ಪ್ರತಿಭಟನೆ


    ಕೊಳ್ಳೇಗಾಲ : ಅಪಘಾತ ನಡೆಸಿ ಪರಾರಿಯಾದ ಪ್ರಕರಣದಲ್ಲಿ ಅಪರಾಧಿಗೆ 10 ವರ್ಷ ಜೈಲು ಹಾಗೂ 7ಲಕ್ಷ ರೂ. ದಂಡ ವಿಧಿಸುವ ಕುರಿತು ಕೇಂದ್ರ ಸರ್ಕಾರ ಜಾರಿಗೆ ತರಲು ಚಿಂತಿಸಿರುವ ನೂತನ ನಿಯಮವನ್ನು ಖಂಡಿಸಿ ತಾಲೂಕು ಲಾರಿ ಚಾಲಕರು ಹಾಗೂ ಮಾಲೀಕರ ಸಂಘ ಗುರುವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು.

    ಪಟ್ಟಣದ ಬಸ್ ನಿಲ್ದಾಣದಲ್ಲಿ ಸೇರಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಡಾ.ವಿಷ್ಣುವರ್ಧನ್ ರಸ್ತೆ ಮೂಲಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗ ಜಮಾವಣೆಗೊಂಡರು. ನಂತರ ತಹಸೀಲ್ದಾರ್ ಮಂಜುಳಾ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ರವಾನಿಸಲಾಯಿತು.

    ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಅವಿನಾಶ್ ಮಾತನಾಡಿ, ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತರಲು ಹೊರಟಿರುವ ಹಿಟ್ ಆ್ಯಂಡ್ ರನ್ ಕಾನೂನು ಬಡವರ ವಿರೋಧಿಯಾಗಿದೆ. ಹಗಲಿರಳು ದುಡಿಯುವ ಚಾಲಕರಿಗೆ ಸಂಕಷ್ಟವಾಗುತ್ತದೆ. ಕೂಡಲೇ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

    ಪ್ರತಿಭಟನೆಯಲ್ಲಿ ಚಾಲಕರ ಸಂಘದ ಅಧ್ಯಕ್ಷ ಭಾಸ್ಕರ್, ರವಿ, ಅಕ್ರಮ್ ಪಾಷ, ಖೀಜರ್ ಪಾಷ, ಚೇತನ್, ದಿಲ್ಲು, ಅರ್ಜುನ್, ಉನ್ನಿಕೃಷ್ಣನ್, ಬಸಪ್ಪ, ಪ್ರಮೋದ್, ಮಹಮ್ಮದ್ ಸಫಿಉಲ್ಲಾ, ಇಮ್ರಾನ್ ಖಾನ್, ಅಬ್ದುಲ್ ರಫೀಕ್, ಹರೀಶ್, ಸೈಯದ್ ಸಲ್ಮಾನ್, ಮಹಮ್ಮದ್ ಮನ್ಸೂರ್, ರವಿ ಹಾಗೂ ಲಾರಿ, ಕಾರು ಚಾಲಕರ ಮಾಲೀಕರ ಸಂಘದ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts