More

    ಜೈನ ಸಮಾಜದಿಂದ ಪ್ರತಿಭಟನೆ

    ಅಣ್ಣಿಗೇರಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣ ಸಿಬಿಐಗೆ ವಹಿಸುವ ಜತೆಗೆ ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಒತ್ತಾಯಿಸಿ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮನ ವೃತ್ತದಲ್ಲಿ ಜೈನ ಸಮಾಜದವರು ಹಾಗೂ ಪ್ರಮುಖರು ರಸ್ತೆ ತಡೆದು ಸೋಮವಾರ ಪ್ರತಿಭಟನೆ ನಡೆಸಿದರು.

    ಉದ್ಯಮಿ ಮಹೇಶ್ವರ ಅಂಗಡಿ ಮಾತನಾಡಿ, ಸರ್ವಜನಾಂಗದ ಶಾಂತಿಯ ತೋಟದ ನಾಡಲ್ಲಿ ಜೈನ ಸಮಾಜದ ಪೂಜ್ಯರನ್ನು ಹತ್ಯೆ ಮಾಡಿರುವುದು ಸಹಿಸುವುದು ಸಾಧ್ಯ. ಜೈನ ಸಮಾಜದ ಶ್ರೀಗಳಿಗೆ ಆದ ಅನ್ಯಾಯ ಖಂಡಿಸಿ ಪ್ರತಿಭಟಿಸುತ್ತಿದ್ದೇವೆ. ನಮ್ಮ ಧ್ವನಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮುಟ್ಟಬೇಕು. ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದರು.

    ಜೈನ ಸಮಾಜದ ಮುಖಂಡ, ಪುರಸಭೆ ಸದಸ್ಯ ಚಂದ್ರನಾಥ ನಾವಳ್ಳಿ ಮಾತನಾಡಿ, ತಮ್ಮ ಜೀವನ ಸಮಾಜಕ್ಕಾಗಿ ಮುಡಿಪಾಗಿಟ್ಟು ಸರ್ವಸ್ವವನ್ನೂ ತ್ಯಾಗ ಮಾಡಿದ ನಂದಿ ಪರ್ವತದ ಕಾಮಕುಮಾರ ಮಹಾರಾಜರ ಹತ್ಯೆ ಸಮಾಜ ಬಿಚ್ಚಿ ಬೀಳಿಸಿದೆ ಎಂದರು. ಎನ್‌ಜಿಇಎಫ್ ಮಾಜಿ ಅಧ್ಯಕ್ಷ ಷಣ್ಮುಖ ಗುರಿಕಾರ ಮಾತನಾಡಿ, ಶ್ರೀಗಳ ಹತ್ಯೆ ತನಿಖೆ ಸಿಬಿಐಗೆ ವಹಿಸಬೇಕು ಎಂದರು.

    ನಂತರ ಕಿತ್ತೂರ ರಾಣಿ ಚನ್ನಮ ವೃತ್ತದಿಂದ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಲಾಯಿತು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಹಾಂತೇಶ ಮಠದ ಅವರ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

    ಜೈನ ಸಮಾಜದ ಹಿರಿಯರಾದ ಭಗವಂತಪ್ಪ ಪುಟ್ಟನ್ನನವರ,ದೇವರಾಜ ವಂಟಕುದುರೆ, ಭರತೇಶ ಜೈನ, ಪದ್ಮರಾಜ ಹನಸಿ, ಮಂಜುನಾಥ ತಿಗಡಿ, ಮೋನಪ್ಪ ನಾವಳ್ಳಿ, ಶಾಂತಪ್ಪ ಹನಸಿ, ಆನಂದ ಬಸ್ತಿ, ಪದ್ಮರಾಜ ಅಂತಣ್ಣನವರ, ಜಿನ್ನಪ್ಪ ಸವದತ್ತಿ, ಪದ್ಮಾವತಿ ಹನಸಿ, ಚಂದ್ರವ್ವಾ ನಾವಳ್ಳಿ, ಲಲಿತಾ ನಾವಳ್ಳಿ, ಮಹೇಶ ದೇಸಾಯಿ, ನಾಗಪ್ಪ ದಳವಾಯಿ, ಎ.ಪಿ. ಗುರಿಕಾರ, ಲಿಂಗರಾಜ ಕುಲಕರ್ಣಿ, ಈಶ್ವರ ಬೆಂಡಿಕಾಳ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts