More

    ಜಗದೀಶ ನಗರ ನಿವಾಸಿಗಳಿಂದ ಧರಣಿ

    ಹುಬ್ಬಳ್ಳಿ: ಆಶ್ರಯ ಮನೆಗಳ ನೋಂದಣಿ ಮಾಡಿಕೊಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಲ್ಲಿಯ ದೇಶಪಾಂಡೆನಗರ ಪ್ರವಾಸಿ ಮಂದಿರದಲ್ಲಿ ಜಗದೀಶನಗರ ಆಶ್ರಯ ಬಡಾವಣೆಯ ನಿವಾಸಿಗಳು ಸೋಮವಾರ ಧರಣಿ ನಡೆಸಿದರು.

    ವಸತಿ ಸಚಿವ ವಿ. ಸೋಮಣ್ಣ ಅವರು ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ಹಿನ್ನೆಲೆಯಲ್ಲಿ ಅಲ್ಲಿಗೆ ಆಗಮಿಸಿದ ನಿವಾಸಿಗಳು ಸರ್ಕಾರದ ಗಮನ ಸೆಳೆದರು.

    ವಿಮಾನ ನಿಲ್ದಾಣ ಅಭಿವೃದ್ಧಿಗೆ ಮನೆ ಕಳೆದುಕೊಂಡವರಿಗೆ ಆಶ್ರಯ ಮನೆಗಳನ್ನು ಒದಗಿಸಬೇಕು ಮತ್ತು ಹಕ್ಕು ಪತ್ರ ವಿತರಣೆ ಮಾಡಬೇಕು ಎಂದು ಜಗದೀಶ ನಗರ ಆಶ್ರಯ ನಿವಾಸಿಗಳ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಪ್ರೇಮನಾಥ ಚಿಕ್ಕತುಂಬಳ ಸಚಿವರಿಗೆ ಮನವಿ ಸಲ್ಲಿಸಿದರು.

    ಮನವಿ ಸ್ವೀಕರಿಸಿದ ಸಚಿವ ಸೋಮಣ್ಣ, ಆಶ್ರಯ ಬಡಾವಣೆಗೆ ನಾಳೆಯೇ ಭೇಟಿ ನೀಡಲಾಗುವುದು, ತಮ್ಮ ಬೇಡಿಕೆಗಳನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

    ವೆಂಕಟೇಶ ದೇಸಾಯಿ, ಈರಪ್ಪ ಜೋಗಿ, ಸುಭಾಸ ಮೆಹರವಾಡೆ, ಕುಬೇರಪ್ಪ ಗೌಡರ, ಫಕೀರಪ್ಪ ಹಡಪದ, ದೀಪಕ ಚವ್ಹಾಣ, ಶ್ರೀಪಾದ ದೇಸಾಯಿ, ರಮೇಶ ಹರಕುಣಿ, ಹನುಮಂತ ಬರಾಟೆ, ಚನ್ನಮ್ಮ ಪಡೆಸೂರ, ಕಮಲಮ್ಮ ಹಿತ್ತಲಮನಿ, ಗಿರಿಜಾ ಕ್ಯಾಲಕೊಂಡ, ಶೋಭಾ ಚಲವಾದಿ, ಅನ್ನಪೂರ್ಣ ಇರಕಲ್ಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts