More

    ಬಣಜಿಗ ಸಮುದಾಯದವರಿಗೆ ಅವಹೇಳನ; ಶಾಸಕ ಯತ್ನಾಳ್​ ಹಾಗೂ ಮಾಜಿ ಶಾಸಕ ಕಾಶಪ್ಪನವರ್ ವಿರುದ್ಧ ಪ್ರತಿಭಟನೆ

    ಬಾಗಲಕೋಟೆ: ಬಣಜಿಗ ಸಮುದಾಯದವರಿಗೆ ಅವಹೇಳನ ಮಾಡಿದ ಹಿನ್ನೆಲೆಯಲ್ಲಿ ಹುನಗುಂದ ಪಟ್ಟಣದಲ್ಲಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹಾಗೂ ಮಾಜಿ ಶಾಸಕ ವಿಜಯಾನಂದ್ ಕಾಶಪ್ಪನವರ್ ವಿರುದ್ಧ ಬಣಜಿಗ ಸಮಾಜ ಪ್ರತಿಭಟನೆ ನಡೆಸಿದೆ.

    ಪ್ರತಿಭಟನೆ ನಡೆಯುತ್ತಿರುವ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಕಾಶಪ್ಪನವರ್, ಕೆಲಕಾಲ ಪ್ರತಿಭಟನಾಕಾರರ ಮನವೊಲಿಕೆಗೆ ಪ್ರಯತ್ನಿಸಿದರು. “ಹುಕ್ಕೇರಿಯಲ್ಲಿ ಬಣಜಿಗ ಸಮಾಜದ ಬಗ್ಗೆ ನಾನು ಮಾತನಾಡಿಲ್ಲ. ನನ್ನ ಬಗ್ಗೆ ಮಾತನಾಡಿದ್ದಕ್ಕೆ ನಾನು ಮಾತನಾಡಿದ್ದೆ. ಆದರೆ ಅದು ಸಮಾಜದ ವಿರುದ್ದ ಅಲ್ಲ. ಪಂಚಮಸಾಲಿಗರು ಮತ್ತು ಬಣಜಿಗರು ಬೀಗರಿದ್ದಂತೆ. ನಮ್ಮ ತಂದೆಯವರ ಕಾಲದಿಂದ ಈ ಸಂಬಂಧ ಇಟ್ಟುಕೊಂಡು ಬಂದಿದ್ದೇನೆ ಎಂದು ಹೇಳುವ ಮೂಲಕ ಮನವೊಲಿಸುವ ಪ್ರಯತ್ನ ಮಾಡಿದರು.

    ನಾನು ಶಾಸಕನಾಗಿದ್ದಾಗ ಬಣಜಿಗ ಸಮಾಜದವರಿಗೂ ರಾಜಕೀಯ ಸ್ಥಾನಮಾನ ಕೊಟ್ಟಿದ್ದೇನೆ. ನಾನು ಬಣಜಿಗ ಸಮಾಜದವರಿಗೆ ನೋವು ಆಗುವಂತೆ ನಡೆದುಕೊಂಡಿದ್ದರೆ ಅದಕ್ಕೆ ಕ್ಷಮೆ ಕೇಳುತ್ತೇನೆ. ಕೂಡಲಸಂಗಮನಾಥನ ಮೇಲಾಣೆ, ಇನ್ನು ಮುಂದೆ ಯಾವತ್ತೂ ಹಾಗೆ ನಡೆದುಕೊಳ್ಳುವುದಿಲ್ಲ ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

    ಕೊನೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ರ ಬಗ್ಗೆ ಹೇಳಲು ಹೊರಟ ಕಾಶಪ್ಪನವರನ್ನು ತಡೆದ ಪ್ರತಿಭಟನಾಕಾರರು, ಅವರ ಬಗ್ಗೆ ಬೇಡ ನಿಮ್ಮ ಬಗ್ಗೆಯಷ್ಟೇ ಮಾತನಾಡಿ ಎಂದರು.

    ವಿವಾದಕ್ಕೆ ಸುಖಾಂತ್ಯ ಹಾಡಿದ ವಿಜಯಾನಂದ್ ಕಾಶಪ್ಪನವರ್ ವಿರುದ್ಧ ಪ್ರತಿಭಟನೆ ಕೈಬಿಟ್ಟ ಬಣಜಿಗರು ಯತ್ನಾಳರ ವಿರುದ್ಧ ಪ್ರತಿಭಟನೆಯನ್ನು ಮುಂದುವರಿಸಿದರು. ಈ ಪ್ರತಿಭಟನೆ ರಾಜ್ಯ ಬಣಜಿಗ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಅಂದಪ್ಪ ಜವಳಿ, ಮತ್ತು ಕಾರ್ಯದರ್ಶಿ ರವಿ ಕುಮಟಗಿ ನೇತೃತ್ವದಲ್ಲಿ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts